32.3 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶ್ರೀ ಭೇಟಿ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ರಾಜಶ್ರೀ ಹಾಗೂ ದೈಹಿಕ ಶಿಕ್ಷಣ ಪರೀಕ್ಷಕರಾದ ಪ್ರಭಾಕರ್ ಭೇಟಿ ನೀಡಿ ಶಾಲೆಯ ವಿವಿಧ ಶೈಕ್ಷಣಿಕ ಹಾಗೂ ಸಹಪಠ್ಯ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ‘ಶ್ರೀ ಮಂಜುನಾಥ ದಳ’ ರಾಷ್ಟ್ರೀಯ ಮಟ್ಟದಲ್ಲಿ ಪಡೆದಿರುವ ಪ್ರತಿಷ್ಠಿತ ಗೋಲ್ಡನ್ ಆ್ಯರೋ ಪ್ರಶಸ್ತಿ ಕುರಿತು ಪರಿಶೀಲನೆ ನಡೆಸಿ, ಶಾಲೆಯ ಯೋಗ, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು, ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಶೈಕ್ಷಣಿಕ ಫಲಿತಾಂಶಗಳ ಕುರಿತು ಮಾಹಿತಿ ಸಂಗ್ರಹಿಸಿದರು.

ಅಲ್ಲದೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಶ್ರೀ ಮಂಜುನಾಥ ದಳದ ವಿದ್ಯಾರ್ಥಿಗಳಾದ ಚಿರಾಗ್, ಅಹನ್ ಜೈನ್, ವಿಹಾನ್, ದೈವಿಕ್ ರೈ, ಆದ್ವಿ ಎಲ್. ರೈ ಹಾಗೂ ಯಕ್ಷಿತಾ ಅವರನ್ನು ರಾಷ್ಟ್ರೀಯ ಮಟ್ಟದ ಸಾಧನೆಗಾಗಿ ಅಭಿನಂದಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಹೇಮಲತಾ ಎಂ.ಆರ್., ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಹಾಗೂ ಶಾಲಾ ಶಿಕ್ಷಕಿ ಪ್ರಮೀಳ, ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ್ ಎನ್., ಚಿತ್ರಕಲಾ ಶಿಕ್ಷಕರಾದ ಜಯರಾಮ್ ಹಾಗೂ ಕನ್ನಡ ಶಿಕ್ಷಕರಾದ ಶ್ರೇಯಾಂಸ ಜೈನ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Related posts

ನಿಯಂತ್ರಣ ತಪ್ಪಿ ಆಪೆ ರಿಕ್ಷಾ ಪಲ್ಟಿ: ಪ್ರಯಾಣಿಕರಿಗೆ ಗಾಯ

Suddi Udaya

ತುಮಕೂರು ಕುಚ್ಚಂಗಿ ಕೆರೆಯ ಬಳಿ ಮೂವರ ಶವ ಸುಟ್ಟು ಹೋದ ರೀತಿಯಲ್ಲಿ ಪತ್ತೆ: ಮೂವರು ಬೆಳ್ತಂಗಡಿ ತಾಲೂಕಿನಿಂದ ನಾಪತ್ತೆಯಾದವರದ್ದು ಇರಬಹುದೆಂಬ ಶಂಕೆ

Suddi Udaya

ರಾಜ್ಯಮಟ್ಟದ ಕರಾಟೆ: ಕಾಯರ್ತಡ್ಕ ದಿವ್ಯಜ್ಯೋತಿ ಆಂ.ಮಾ. ಶಾಲೆಯ ಅಡ್ಲಿನ್ ಎಲಿಜಬೆತ್ ಜೆರಿನ್ ಗೆ ಚಿನ್ನದ ಪದಕ

Suddi Udaya

ಚಿನ್ನದ ಉಂಗುರವನ್ನು ಹಿಂತಿರುಗಿಸಿಕೊಟ್ಟು ಪ್ರಾಮಾಣಿಕತೆ ಮೆರೆದ ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆಡಳಿತ ಮಂಡಳಿ

Suddi Udaya

ಸೆ.21: ಬೆಂಗಳೂರಿನಲ್ಲಿ ಹೊರಗುತ್ತಿಗೆ ಪೌರನೀರು ಸರಬರಾಜು ನೌಕರರ ಪಾದಯಾತ್ರೆ : ಬೆಳ್ತಂಗಡಿ ಪ.ಪಂ. ನ ನೀರು ಸರಬರಾಜು ಸ್ಥಗಿತ

Suddi Udaya

ಹರೀಶ್ ಪೂಂಜ ಬೃಹತ್ ಬಹುಮತದಿಂದ ಗೆಲುವು: ಬಳಂಜ, ನಾಲ್ಕೂರು, ತೆಂಕಕಾರಂದೂರಿನಲ್ಲಿ ವಿಜಯೋತ್ಸವ

Suddi Udaya
error: Content is protected !!