32.3 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಟೀಚರ್ಸ್ ಬ್ಯಾಂಕ್ ಉಡುಪಿಗೆ ರಾಷ್ಟ್ರೀಯ ಪ್ರಶಸ್ತಿ

ಬೆಳ್ತಂಗಡಿ: ಉತ್ತರ ಪ್ರದೇಶದ ಲಕ್ನೋದ ರಮಡಾ ಕನ್ವೇನ್ಷನ್ ಸೆಂಟರ್ ಇಲ್ಲಿ ನಡೆದ ಬ್ಯಾಂಕುಗಳ ರಾಷ್ಟ್ರೀಯ ಮಹಾ ಸಮ್ಮೇಳನದಲ್ಲಿ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಉಡುಪಿ 3 ರಾಷ್ಟ್ರೀಯ ಸಾಧನಾ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಭಾರತದ ಎಲ್ಲಾ ರಾಜ್ಯಗಳ ಹಲವಾರು ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸಿದ ಈ ಮಹಾ ಸಮ್ಮೇಳನದಲ್ಲಿ 3 ವಿಭಾಗಗಳಲ್ಲಿ ಸಾಧನಾ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ದೇಶದ ಉತ್ತಮ ಬ್ಯಾಂಕ್ ಎಂಬ ಐತಿಹಾಸಿಕ ಹೆಗ್ಗಳಿಕೆಯನ್ನು ಉಡುಪಿಯ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಪಡೆದುಕೊಂಡಿದೆ.


ಅತ್ಯುತ್ತಮ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಪ್ರಶಸ್ತಿ, ಅತ್ಯುತ್ತಮ ಎನ್.ಪಿ.ಎ. ನಿರ್ವಾಹಣಾ ಪ್ರಶಸ್ತಿ, ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ ದಿನಕರ ಶೆಟ್ಟಿ ಅಂಪಾರು ರವರಿಗೆ ಲಭಿಸಿದೆ. ಈ ಎಲ್ಲಾ ಪ್ರಶಸ್ತಿಗಳು ರಾಷ್ಟ್ರ ಮಟ್ಟದ ಭಾರತ ರತ್ನ ಸಹಕಾರಿತ
ಸಮ್ಮಾನ್ – 2026 ಎಂಬ ಶಿರೋನಾಮೆ ಅಡಿಯಲ್ಲಿ ಈ ಗೌರವವನ್ನು ಅಸ್ಸಾಂ ರಾಜ್ಯದ ಶಾಸಕ ಮತ್ತು ಆ ರಾಜ್ಯದ ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷ ಬಿಶ್ವಜಿತ್ ಪುಕಾನ್‌ರವರು ವಿತರಿಸಿ ಶುಭ ಹಾರೈಸಿದರು.

ಭಾರತ ಸಮ್ಮಾನ್ ಸಮಿತಿಯ ಮುಖ್ಯಸ್ಥರಾದ ಡಾ| ಅನುಪ್ ಗುಪ್ತಾ ಹಾಗೂ ಅಭಿಷೇಕ್ ಶರ್ಮಾರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಕಳೆದ 111 ವರ್ಷಗಳಿಂದ ಶಿಕ್ಷಕರಿಗಾಗಿ ಹತ್ತು ಹಲವಾರು ಪ್ರಯೋಜನವಾಗುವ ಕಾರ್ಯವನ್ನು ಮಾಡಿ ಪ್ರತಿಯೊಬ್ಬರಿಂದಲೂ ಉತ್ತಮ ಸ್ಪಂದನೆ ದೊರಕುವಂತೆ ಮಾಡಿದೆ. ಈ ಸಾಧನೆ ಮಾಡಿದ ಟೀಚರ್ಸ್ ಬ್ಯಾಂಕ್ ಉಡುಪಿ ಇದರ ಸಾಧನೆಯನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯುವುದು ಸುಲಭದ ಮಾತಲ್ಲ
ಅನ್ನೋದು ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯ ಎನ್ನಲಾಗಿದೆ. ಈ ಎಲ್ಲಾ ಸಾಧನೆಗಳ ಹಿಂದೆ ಸಿಬ್ಬಂದಿಗಳ ಕಾರ್ಯಪರತೆ, ಅಧ್ಯಕ್ಷ, ಉಪಾಧ್ಯಕ್ಷ, ಹಾಗೂ ನಿರ್ದೇಶಕ ಮಂಡಳಿಯ ಸರ್ವ ಸಹಕಾರವೇ ಕಾರಣವಾಗಿದೆ.


ಈ ಗೌರವವನ್ನು ಟೀಚರ್ಸ್ ಬ್ಯಾಂಕಿನ ಅಧ್ಯಕ್ಷರಾದ ದಿನಕರ ಶೆಟ್ಟಿ ಅಂಪಾರು, ಉಪಾಧ್ಯಕ್ಷರಾದ ಧರಣೇಂದ್ರ ಕೆ., ನಿರ್ದೇಶಕರುಗಳಾದ ಎಮ್.ಎಸ್. ಹೆಗಡೆ, ಕಿಶನ್‌ರಾಜ್ ಶೆಟ್ಟಿ, ಗಣೇಶ್ ಕುಮಾರ್ ಶೆಟ್ಟಿ ಎಂ., ಸಂತೋಷ್ ಕುಮಾರ್ ಶೆಟ್ಟಿ, ಆನಂದ ಪೂಜಾರಿ, ಮಂಜ ನಾಯ್ಕ್ ಬಿ.ಇ., ರಾಜೀವ ಶೆಟ್ಟಿ, ಮನೋಹರ, ವಿದ್ಯಾಧರ ಹೆಗ್ಡೆ ಎಸ್., ಡಾ. ರಾಜೇಂದ್ರ ಕೆ., ಡಾ. ಅವಿನ್ ಬಿ.ಆರ್. ಆಳ್ವ, ಡಾ. ಕುಮಾರ ನಾಯ್ಕ್ ಎ.ಎಸ್., ನಿತ್ಯಾನಂದ ಶೆಟ್ಟಿ ಹಾಗೂ ಮಹಾಪ್ರಬಂಧಕರಾದ ಮಂಜುನಾಥ ಶೆಟ್ಟಿ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪ್ರಮೋದ್ ಹೆಗ್ಡೆ ಜಿ ರವರು ಸ್ವೀಕರಿಸಿದರು.

Related posts

ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಹೊಳೆಯಲ್ಲಿ ಮೀನುಗಳು ಸಾವು

Suddi Udaya

ರೆಖ್ಯದಲ್ಲಿ ಕಾಡಾನೆ ದಾಳಿ: ಇಡ್ಮಾಲು ನಿವಾಸಿ ಬಾಲಕೃಷ್ಣ ಗೌಡ ಬಲಿ

Suddi Udaya

ಬಜಿರೆ: ಹೊಸಪಟ್ಣ ನಿವಾಸಿ ಸಂಜೀವ ಹೆಗ್ಡೆ ನಿಧನ

Suddi Udaya

ಕಾರಿನಲ್ಲಿ ಅಕ್ರಮ ದನ ಸಾಗಾಟ : ಧರ್ಮಸ್ಥಳ ಪೊಲೀಸರಿಂದ ಆರೋಪಿಗಳ ಬಂಧನ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ನೂತನ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಮತ್ತು ತಂಡದ ಪದಪ್ರದಾನ ಸಮಾರಂಭ

Suddi Udaya

ಶಿರ್ಲಾಲು: ಗೆಜ್ಜೆಗಿರಿ ಯಾತ್ರಿ ನಿವಾಸ ಶಿಲಾನ್ಯಾಸದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!