August 9, 2026
ಆರೋಗ್ಯಪ್ರಮುಖ ಸುದ್ದಿಬೆಳ್ತಂಗಡಿ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್ ಪಿ ವೈ ಎಸ್ ಎಸ್ ಕರ್ನಾಟಕ, ಶ್ರೀ ಪತಂಜಲಿ ಯೋಗ ಶಿಕ್ಷಣ ಫೌಂಡೇಶನ್ ಮಂಗಳೂರು ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಬೆಳ್ತಂಗಡಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್ ಪಿ ವೈ ಎಸ್ ಎಸ್ ಕರ್ನಾಟಕ, ಶ್ರೀ ಪತಂಜಲಿ ಯೋಗ ಶಿಕ್ಷಣ ಫೌಂಡೇಶನ್ ಮಂಗಳೂರು ಇದರ ವತಿಯಿಂದ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಆಯುಷ್ ಪಠ್ಯಕ್ರಮದಂತೆ ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿಯ ಶ್ರೀ ದುರ್ಗಾಗಣೇಶ ಸಭಾಭವನದಲ್ಲಿ ಸ್ಥಳೀಯ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಆರಂಭದಲ್ಲಿ ಎಸ್ ಪಿ ವೈ ಎಸ್ ಎಸ್ ನ ನಿತ್ಯ ಅಭ್ಯಾಸದಂತೆ ಪ್ರದೀಪ್ ಮತ್ತು ತಂಡದಿಂದ ಭಜನಾ ಕಾರ್ಯಕ್ರಮ ಬಳಿಕ ಪಾಂಡುರಂಗ ಶಾಖೆಯ ಯೋಗೀಶ್ ಅಮೃತವಚನ, ನಮ್ಮಮನೆ ಶಾಖೆಯ ಸೌಮ್ಯ ಪಂಚಾಂಗ ಪಠಣವನ್ನು ನಡೆಸಿಕೊಟ್ಟರು.

ಮಾನಸಿಕ ಸಿದ್ಧತೆಯನ್ನು ಯಶನ್ ಉಪ್ಪಿನಂಗಡಿ ಶಾಖೆ ಹಾಗೂ ಪ್ರಾತ್ಯಕ್ಷಿಕೆಯನ್ನು ಶಶಿ ಮತ್ತು ಹರೀಶ ಗಾಣಿಗ ಸಭಾಭವನ ಶಾಖೆ ಉಪ್ಪಿನಂಗಡಿ ಇವರು ನಡೆಸಿಕೊಟ್ಟರು. ಬಳಿಕ ಆಯುಷ್ ಪಠ್ಯಕ್ರಮದ ಯೋಗಭ್ಯಾಸದ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ದುರ್ಗಾಗಣೇಶ ಸಭಾಭವನದ ಅಧ್ಯಕ್ಷ ರೋಹಿತ್ ಶೆಟ್ಟಿ ನೆರವೇರಿಸಿದರು. ಭಜನಾ ಮಂಡಳಿಯ ಸದಸ್ಯ ಚಿದಾನಂದ ನಾಯ್ಕ ಹಾಗೂ ಸಮಿತಿಯ ಹಿರಿಯ ಯೋಗ ಬಂಧುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉದ್ಯಮಿ ಕಿರಣ್ ಚಂದ್ರ ಶುಭಹಾರೈಸಿದರು. ಶಿಕ್ಷಕ ಪ್ರದೀಪ್, ಮಂಗಳೂರು ನಗರ ಸಂಚಾಲಕ ಆನಂದ್ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಯೋಗ ದಿನಾಚರಣೆಯ ಬಗ್ಗೆ ಬೌದ್ಧಿಕ್ ಅನ್ನು ಡಾ.ಅನಿಶ್ ಶಿಕ್ಷಕರು, ಶಬರೀಶ ಶಾಖೆ ನೆಲ್ಯಾಡಿ ಇವರು ನೀಡಿದರು.

ನಂತರ ಆಯುಷ್ ಪಠ್ಯಕ್ರಮದ ಯೋಗಾಭ್ಯಾಸದ ವಿವರಣೆಯನ್ನು ಗುರುವಾಯನಕೆರೆ ನಮ್ಮ ಮನೆ ಶಾಖೆಯ ಸಂಚಾಲಕಿ ಸುಮಲತಾ ನೀಡಿದರು. ಪಾಂಡುರಂಗ ಶಾಖೆಯ ಉಷಾ ಹಾಗೂ ಮದ್ದಡ್ಕ ಶಾಖೆಯ ಸುಬ್ರಹ್ಮಣ್ಯ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಬಳಿಕ ಸಾಮೂಹಿಕವಾಗಿ ಪತಂಜಲಿ ಗುರುಗಳಿಗೆ ಯೋಗ ನಮನ ಸಲ್ಲಿಸಲಾಯಿತು. ಜ್ಯೋತಿರ್ ಮಂತ್ರ, ಐಕ್ಯ ಮಂತ್ರ ಪಠಿಸಲಾಯಿತು. ದಮಯಂತಿ ವಂದನಾರ್ಪಣೆ ಸಲ್ಲಿಸಿದರು. ಮದ್ದಡ್ಕ ಶಾಖೆಯ ವತ್ಸಲ ಎಂ.ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸುಮಾರು ನೂರಕ್ಕೂ ಮಿಕ್ಕಿ ಯೋಗ ಬಂಧುಗಳು ಭಾಗವಹಿಸಿದರು. ಉಪ್ಪಿನಂಗಡಿ ನಗರದ ಎಲ್ಲಾ ಶಾಖೆಯ ಯೋಗ ಮತ್ತು ಯೋಗೇತರ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related posts

ಕುಕ್ಕೆ ಲಿಂಗ ವಂಶಸ್ಥರಾದ ಮಲೆಕುಡಿಯ ಜನಾಂಗದವರಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಶಾಶ್ವತ ಮೂಲನಿವಾಸಿ ಸ್ಥಾನಮಾನ ನೀಡುವಂತೆ ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಆಗ್ರಹ

Suddi Udaya

ಜನಸ್ಪಂದನ ಸಭೆಯ ಫಲಶ್ರುತಿ 108 ಹಕ್ಕು ಪತ್ರ, 54 ಮಂದಿಗೆ ನಡಾವಳಿ ವಿತರಣೆ

Suddi Udaya

ಹೊಸಪಟ್ಣ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಯನಾಡು ಗೆಳೆಯರ ಬಳಗ ಸೇವಾ ಸಂಸ್ಥೆಯ ಗೌರವಾಧ್ಯಕ್ಷ ನೆಲ್ವಿಸ್ಟರ್ ಪಿಂಟೋ ರವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜಿನ ವಿದ್ಯಾರ್ಥಿ ಅನುಕ್ಷಾ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿಯ ಯುವ ನ್ಯಾಯವಾದಿ ಪ್ರಜ್ವಲ್ ನಿಧನ

Suddi Udaya

ಜು.5: ಉಪ್ಪಿನಂಗಡಿ – ಕುಪ್ಪೆಟ್ಟಿ ಸಂಚಾರಕ್ಕೆ ಯೋಗ್ಯವಿಲ್ಲದೆ ನರಕ ಯಾತನೆ ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ : ಬಿಜೆಪಿ ಕಣಿಯೂರು ಮಹಾಶಕ್ತಿ ಕೇಂದ್ರ ವತಿಯಿಂದ ಪ್ರತಿಭಟನೆ

Suddi Udaya
error: Content is protected !!