September 25, 2026
ಆರೋಗ್ಯಚಿತ್ರ ವರದಿತಾಲೂಕು ಸುದ್ದಿ

ಧಮ೯ಸ್ಥಳ: 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ

ಧಮ೯ಸ್ಥಳ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ, ಉಜಿರೆ ಮತ್ತು ಆಸ್ಪತ್ರೆಗಳು ಇದರ ಆಶ್ರಯದಲ್ಲಿ
12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ – 2026 ಜೂ.21ರಂದು ‘ಅಮೃತವರ್ಷಿಣಿ’ ಸಭಾಭವನ ಧರ್ಮಸ್ಥಳದಲ್ಲಿ
ಜರುಗಿತು.

ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ, ಉಜಿರೆಯ ಅಧ್ಯಕ್ಷರಾದ ಡಾ|| ಡಿ. ವೀರೇಂದ್ರ ಹೆಗ್ಗಡೆ ವಹಿಸಿದ್ದರು. ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಉಪಕುಲಪತಿಗಳಾದ ಡಾ. ಭಗವಾನ್ ಬಿ. ಸಿ. ಕಾಯ೯ಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಪ್ರತಾಪ ಸಿಂಹ ನಾಯಕ್ ಭಾಗವಹಿಸಿದ್ದರು.
ವಿಶೇಷ ಆಹ್ವಾನಿತರಾಗಿ ಡಾ. ಷಣ್ಮುಖಪ್ಪ ಪ್ರಭಾರ ನಿರ್ದೇಶಕರು, ಪಠ್ಯಕ್ರಮ ಅಭಿವೃದ್ಧಿ ಕೇಂದ್ರ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ಬೆಂಗಳೂರು, ಡಿ. ಸುರೇಂದ್ರ ಕುಮಾರ್ – ಉಪಾಧ್ಯಕ್ಷರು, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಉಜಿರೆ, ಡಾ. ಸತೀಶ್ಚಂದ್ರ ಎಸ್. ಕಾರ್ಯದರ್ಶಿಗಳು, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಉಜಿರೆ, ಡಿ. ಹರ್ಷೇಂದ್ರ ಕುಮಾರ್ ಕಾರ್ಯದರ್ಶಿಗಳು, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಉಜಿರೆ ಉಪಸ್ಥಿತರಿದ್ದರು.

ಕಾಯ೯ಕ್ರಮದಲ್ಲಿ ಡಾ. ಶಿವಪ್ರಸಾದ್ ಶೆಟ್ಟಿ ಮುಖ್ಯವೈದ್ಯಾಧಿಕಾರಿಗಳು ಶಾಂತಿವನ, ಡಾ. ಪ್ರಶಾಂತ್ ಶೆಟ್ಟಿ ಪ್ರಾಂಶುಪಾಲರು, ಡಾ. ಐ. ಶಶಿಕಾಂತ್ ಜೈನ್ ನಿರ್ದೇಶಕರು ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ, ಪ್ರಾಣಾಯಾಮ, ಧ್ಯಾನ, ನಡೆಯಿತು.
ಭಾಷಿಣಿ ಮತ್ತು ತಂಡದವರ ಪ್ರಾಥ೯ನೆ ಬಳಿಕ ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಡಾ.‌ಅನನ್ಯಾ ಕಾರ್ಯಕ್ರಮ ನಿರೂಪಿಸಿದರು. ಉಪಪ್ರಾಂಶುಪಾಲ ಡಾ. ಸುಜಾತಾ ಕೆ.ಜೆ ವಂದಿಸಿದರು.

Related posts

ಬೆಳ್ತಂಗಡಿ ಸ.ಪ್ರ.ದರ್ಜೆ ಕಾಲೇಜಿನಲ್ಲಿ ಹೂಡಿಕೆದಾರರ ಅರಿವು ಜಾಗೃತಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ: ಗೃಹಜ್ಯೋತಿ ಯೋಜನೆಗೆ ಜೂ.18ರಿಂದ ನೋಂದಣಿ

Suddi Udaya

ಕಣಿಯೂರು: ಯುವಕೇಸರಿ ತಂಡದ ವತಿಯಿಂದ ಧನಸಹಾಯ

Suddi Udaya

ಶಿಶಿಲ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಲಯನ್ಸ್ ಕ್ಲಬ್ ವತಿಯಿಂದ ಸುಲ್ಕೇರಿ ಕೋಲ್ಯಾಯದಲ್ಲಿ ನದಿಯ ಅಣೆಕಟ್ಟಿಗೆ ಸಿಲುಕಿಕೊಂಡಿದ್ದ ಮರದ ದಿಮ್ಮಿ, ಕಸಕಡ್ಡಿಗಳ ತೆರವು ಕಾರ್ಯ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ 3ನೇ ವರ್ಷದ ಶಾರದೋತ್ಸವ, ಪೂರ್ವಾಭಾವಿ ಸಭೆ

Suddi Udaya
error: Content is protected !!