September 24, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಕೇಂದ್ರ ಕಮಿಟಿಯ ನೂತನ ಸಮಿತಿ ರಚನೆ

ಬೆಳ್ತಂಗಡಿ:ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೋಳಿ ಸಾಕಾಣಿಕೆ ರೈತರ ಹಿತರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ‘ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟ’ದ ಮಹತ್ವದ ಸಭೆಯು ಇತ್ತೀಚೆಗೆ ಬೆಳ್ತಂಗಡಿಯ ಶ್ರೀ ಗುರು ನಾರಾಯಣ ಸಭಾಭವನದಲ್ಲಿ ಯಶಸ್ವಿಯಾಗಿ ಜರುಗಿತು. ಸಭೆಯಲ್ಲಿ ಒಕ್ಕೂಟದ ಕೇಂದ್ರ ಸಮಿತಿಯ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ರೈತರ ಸಮಸ್ಯೆಗಳ ಪರಿಹಾರಕ್ಕೆ ಪಣ:

ಸಭೆಯಲ್ಲಿ ಕೋಳಿ ಸಾಕಾಣಿಕೆದಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ನಡೆಸಲಾಯಿತು. ರೈತರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ, ಮುಂಬರುವ ದಿನಗಳಲ್ಲಿ ಸಂಬಂಧಪಟ್ಟ ಕಂಪನಿಗಳ ಮಾಲೀಕರು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಮುಕ್ತ ಮಾತುಕತೆ ನಡೆಸಿ, ಶಾಶ್ವತ ಪರಿಹಾರ ಕಂಡುಕೊಳ್ಳಲು ಸಭೆಯಲ್ಲಿ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಯಿತು. ರೈತರ ಏಳಿಗೆ ಮತ್ತು ಅವರ ಹಕ್ಕುಗಳ ರಕ್ಷಣೆಗಾಗಿ ಹೊಸ ಸಮಿತಿಯು ಬದ್ಧತೆಯಿಂದ ಕಾರ್ಯನಿರ್ವಹಿಸಲಿದೆ ಎಂದು ಒಕ್ಕೂಟವು ಭರವಸೆ ನೀಡಿದೆ.

ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.   ಅಧ್ಯಕ್ಷರಾಗಿ ಸೈಯದ್ ಹಸನ್, ಉಪಾಧ್ಯಕ್ಷರಾಗಿ ಕೂಸಪ್ಪ ಶೆಟ್ಟಿ, ಪ್ರದೀಪ್ ಕುಮಾರ್ ವಾಲ್ಪಡಿ, ಪ್ರಕಾಶ್ ರಾಮಕುಂಜ,  ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಿನ್ ಕುಮಾರ್ ಬಿ. ಕೆ., ಜೊತೆ ಕಾರ್ಯದರ್ಶಿಗಳಾಗಿ ಜಯರಾಮ್ ಶೆಟ್ಟಿ, ಅಶ್ವಿನಿ ಬಿ., ಕೋಶಾಧಿಕಾರಿಯಾಗಿ ಕೇಶವ ಕೊಯ್ಯೂರು, ಸಂಘಟನಾ ಕಾರ್ಯದರ್ಶಿಗಳಾಗಿ ಸುರೇಂದ್ರ ಬೆದ್ರ, ರಿತೇಶ್ ಸ್ಟ್ರೆಲ್ಲಾ ಕೊಕ್ಕಡ, ರಾಜೇಶ್ ಸುವರ್ಣ ನೈನಾಡು, ಅಬ್ದುಲ್ ಅಜೀಜ್, ರವೀಂದ್ರ ಕಾಂಚನ ಪುತ್ತೂರು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೂರಜ್ ಬೆದ್ರ, ರಾಜೇಶ್ ಪಟ್ರಮೆ, ದಾಮೋದರ ವಗ್ಗ, ಮೋಹನ್ ದಾಸ್ ಶೆಟ್ಟಿ ಕಡಬ , ಹರಿಪ್ರಸಾದ್ ಹೆಡ್ಯ, ರವಿ ಕಾಶಿಪಟ್ನ, ಪ್ರಸಾದ್ ರೈ, ಲಾರೆನ್ಸ್ ಎಮ್.ಆರ್ ಚಿಬಿದ್ರೆ ಆಯ್ಕೆಯಾದರು.

Related posts

ತಾಲೂಕು ಮಟ್ಟದ ಮಾದರಿ ತಯಾರಿ ಸ್ಪರ್ಧೆ: ಬೆಳ್ತಂಗಡಿ ಎಸ್. ಡಿ. ಎಂ. ಆಂ.ಮಾ. ಶಾಲೆಯ ವಿದ್ಯಾರ್ಥಿ ಪ್ರತೀಕ್ ವಿ. ಶೆಟ್ಟಿ ಪ್ರಥಮ ಸ್ಥಾನ

Suddi Udaya

ನೇತ್ರಾವತಿ ನದಿಯಲ್ಲಿ ಮೊಸಳೆ ಪತ್ತೆ

Suddi Udaya

ತಾಲೂಕು ಜನಜಾಗೃತಿ ವೇದಿಕೆ ಸಭೆ: ನೂತನ ಅಧ್ಯಕ್ಷರಾಗಿ ಗಿರೀಶ್ ಕೆ.ಎಸ್ ವೇಣೂರು ಆಯ್ಕೆ

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ: ಮುಂಡಾಜೆ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಕೊಯ್ಯೂರು ಸ.ಪ.ಪೂ. ಕಾಲೇಜಿನಿಂದ ವರ್ಗಾವಣೆಗೊಂಡ ಪ್ರಾಂಶುಪಾಲರು ಬಾಲಕೃಷ್ಣ ಬೇರಿಕೆಯವರಿಗೆ ಬೀಳ್ಕೊಡುಗೆ

Suddi Udaya
error: Content is protected !!