September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ಉಜಿರೆ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆ

ಉಜಿರೆ: ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆ ಜೂನ್ ೨೧ರಂದು ಜರುಗಿತು.

ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ| ಪ್ರತೀತ್ ದೀಪ ಬೆಳಗಿಸಿ ಉದ್ಘಾಟಿಸಿ ಯೋಗದಿಂದ ಮನಸ್ಸು ಮತ್ತು ದೇಹ ಲವಲವಿಕೆಯಿಂದ ಇರುತ್ತದೆ. ಯೋಗ ಎಂದರೆ ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವನ್ನು ಸಾಧಿಸುವ ಒಂದು ಪ್ರಾಚೀನ ಭಾರತೀಯ ಪದ್ಧತಿ. “ಯೋಗ” ಎಂಬ ಪದವು ಸಂಸ್ಕೃತದ ಯುಜ್ ಧಾತುವಿನಿಂದ ಬಂದಿದ್ದು, ಅದರ ಅರ್ಥ “ಸೇರುವುದು” ಅಥವಾ “ಒಗ್ಗೂಡುವುದು ಎಂದು ಅರ್ಥ ಎಂದರು.

ರತ್ನ ಮಾನಸದ ನಿಲಯಪಾಲಕ ಯತೀಶ್ ಕುಮಾರ್ ವಿದ್ಯಾರ್ಥಿಗಳಿಗೆ ಯೋಗದ ಮುಖ್ಯ ಪ್ರಯೋಜನಗಳು ದೇಹದ ಲವಚಿಕತೆ (Flexibility) ಹೆಚ್ಚಿಸುತ್ತದೆ. ಸ್ನಾಯುಗಳ ಬಲವನ್ನು ವೃದ್ಧಿಸುತ್ತದೆ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.ಏಕಾಗ್ರತೆ ಮತ್ತು ಮನಶ್ಶಾಂತಿಯನ್ನು ಹೆಚ್ಚಿಸುತ್ತದೆ. ಆರೋಗ್ಯಕರ ಜೀವನಶೈಲಿಗೆ ಸಹಕಾರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ವಿದ್ಯಾಕಿರಣ್ ಕೇವಲ ಇವತ್ತು ಮಾತ್ರ ಯೋಗ ಮಾಡಿದರೆ ಸಾಲದು ಪ್ರತಿನಿತ್ಯ ನಮ್ಮ ಜೀವನದ ಒಂದು ಅಂಗವಾಗಿ ಯೋಗವನ್ನು ಮಾಡಬೇಕು ಎಂದರು.

ವೇದಿಕೆಯಲ್ಲಿ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಕಾಲೇಜಿನ ತರಬೇತಿ ನೀಡಿದ ವಿದ್ಯಾರ್ಥಿಗಳಾದ ನಂದಿತ ವೆಟ್ರಿವೆಲ್ ಪ್ರಾಂಜಲಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕರಾದ ಚಂದ್ರಶೇಖರ ಭಟ್ ಸ್ವಾಗತಿಸಿದರು. ಜ್ಞಾನೇಶ್ ವಂದಿಸಿದರು. ರವೀಶ್ ಕಾರ್ಯಕ್ರಮ ನಿರೂಪಿಸಿದರು

Related posts

ವಾಣಿ ಕಾಲೇಜು: ಅಕ್ಷರವಾಣಿ ಭಿತ್ತಿಪತ್ರಿಕೆ ಅನಾವರಣ

Suddi Udaya

ಕಾಂಗ್ರೆಸ್ ಪಕ್ಷದ ಬೆಂಬಲಿಗರು ಫೇಸ್ ಬುಕ್‌ನಲ್ಲಿ ನನ್ನ ಬಗ್ಗೆ ಸುಳ್ಳು ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಇದು ನನ್ನ ಸ್ಪರ್ಧೆಯಿಂದ ಅವರಿಗೆ ಹಿನ್ನಡೆಯಾಗುವ ಭಯ: ಜೆಡಿಎಸ್ ಅಭ್ಯರ್ಥಿ ಆಶ್ರಫ್‌ ಆಲಿಕುಂಞಿ

Suddi Udaya

ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಯುವ ಸಾಧಕಿಯೊಂದಿಗೆ ಸಂವಾದ ಕಾರ್ಯಕ್ರಮ

Suddi Udaya

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ಮೈರೋಳ್ತಡ್ಕ ಸ.ಉ. ಶಾಲೆಗೆ ಅಂಡೆಕೇರಿ ಬದ್ರಿಯಾ ಜುಮಾ ಮಸೀದಿ ವತಿಯಿಂದ ಶುದ್ಧ ನೀರಿನ ಘಟಕ ಕೊಡುಗೆ

Suddi Udaya

ಉಜಿರೆ ಪ್ರಕೃತಿ ಚಿಕಿತ್ಸಾ ಕಾಲೇಜಿನ ವಿದ್ಯಾರ್ಥಿಯ‌ ಖಾತೆಯಿಂದ ರೂ. 3.14ಲಕ್ಷ ನಗದು ಅಪಹರಣ

Suddi Udaya
error: Content is protected !!