29.4 C
ಪುತ್ತೂರು, ಬೆಳ್ತಂಗಡಿ
September 21, 2026
Uncategorized

ಬಿ.ವಿಜಯ ಕುಮಾರ್ ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾ ನಿರೀಕ್ಷೀ ಕರು ಬೆಂಗಳೂರು ಇವರು ನೀಡುವ ಪ್ರತಿಷ್ಠಿತ ಪೊಲೀಸ್ ಚಿನ್ನದ ಪದಕಕ್ಕೆ ಆಯ್ಕೆ

ಬೆಳ್ತಂಗಡಿ : ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಅತ್ತುತ್ತಮ ಸಾಧನೆಗಾಗಿ
ಬೆಳ್ತಂಗಡಿ ನಗರದ ಕೆಲ್ಲಗುತ್ತು ನಿವಾಸಿ ಪ್ರಸ್ತುತ ಉಡುಪಿ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಸಿವಿಲ್ ಹೆಡ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿರುವ ಬಿ.ವಿಜಯ ಕುಮಾರ್ ಅವರು ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾ ನಿರೀಕ್ಷೆಕರು ಬೆಂಗಳೂರು ಇವರು ಕೊಡುವ 2026 ನೇ ಸಾಲಿನ ಪ್ರತಿಷ್ಠಿತ ಪೊಲೀಸ್ ಚಿನ್ನದ ಪದಕಕ್ಕೆ ಅಯ್ಕೆ ಆಗಿರುತ್ತಾರೆ
ಬಿ.ವಿಜಯ ಕುಮಾರ್ ಅವರು ಈ ಮೊದಲು 2022ರಲ್ಲಿ
ಮುಖ್ಯ ಮಂತ್ರಿ ಯವರ ಚಿನ್ನದ ಪದಕ ಹಾಗೂ 2024ರಲ್ಲಿ ಭಾರತದ ರಾಷ್ಟ್ರ ಪತಿಗಳ ಶ್ಲಾಘನೀಯ ಪದಕಕ್ಕೆ ಪಾತ್ರರಾಗಿದ್ದರು.


ಇವರು ಮೂಲತಃ ಬೆಳ್ತಂಗಡಿ ಕಸಬಾ ಗ್ರಾಮದ ಕೆಲ್ಲಗುತ್ತು
ದಿ|ಗೋಪಾಲ್ ಕೃಷ್ಣ ಮತ್ತು ಶಾರದ ದಂಪತಿಗಳ ಪುತ್ರ ರಾಗಿರುತ್ತಾರೆ. ಇವರು ಸುಮಾರು 33 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ. ಇವರು ಈ ಮೊದಲು ಉಳ್ಳಾಲ, ಪಣಂಬೂರು, ಕದ್ರಿ, ಉರ್ವ, ಪುತ್ತೂರು ನಗರ, ಉಡುಪಿ ನಗರ, ಉಡುಪಿ ಸಂಚಾರ ಮಹಿಳಾ ಠಾಣೆ, ಡಿ ಸಿ ಅರ್ ಬಿ ಮುಂತಾದ ಕಡೆ ಸೇವೆ ಸಲ್ಲಿಸಿರುತ್ತಾರೆ.

Related posts

ಮಸೀದಿ ಬಳಿ ನಿಲ್ಲಿಸಿದ್ದ ಧರ್ಮಗುರುಗಳ ಬೈಕ್ ಕಳವು : ಕಳ್ಳತನ ಕೃತ್ಯ ಸಿಸಿ ಕ್ಯಾಮರದಲ್ಲಿ ಸೆರೆ

Suddi Udaya

ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನ ವತಿಯಿಂದ 20 ನೇ ವರ್ಷದ ಪುಸ್ತಕ ವಿತರಣೆ : ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ – ನಿವೃತ್ತ ಯೋಧರಿಗೆ ಗೌರವಾರ್ಪಣೆ

Suddi Udaya

ಚಾರ್ಮಾಡಿ ಘಾಟ್‌ನಲ್ಲಿ ಟಿಟಿ ವಾಹನ ಪಲ್ಟಿ: 9 ಮಂದಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

Suddi Udaya

ಎಸ್‌ಡಿಎಂ ಆರೋಹಂ-2026 ಸಮಾರೋಪ ಸಮಾರಂಭ

Suddi Udaya

ಕೊಯ್ಯೂರು ಮಾಧವ ಶೆಟ್ಟಿಗಾರ್ಮನೆ ಬಳಿ ಗುಡ್ಡ ಕುಸಿತಸ್ಥಳಕ್ಕೆ ಗ್ರಾ.ಪಂ ಕಾಯ೯ದಶಿ೯ ಪರಮೇಶ್ವರ್ ಭೇಟಿ – ಪರಿಶೀಲನೆ

Suddi Udaya

ಬೆಳ್ತಂಗಡಿ ಎಸ್. ಡಿ .ಎಮ್ ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!