30.5 C
ಪುತ್ತೂರು, ಬೆಳ್ತಂಗಡಿ
September 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಅಶ್ವತ್ಥೋಪನಯನ ಹಾಗೂ ವಿವಾಹ ಕಾರ್ಯಕ್ರಮ

ಮಿತ್ತವಾಗಿಲು : ಇಲ್ಲಿಯ ದುರ್ಗಾಪರಮೇಶ್ವರಿ ಹಾಗೂ ದುರ್ಗಾದೇವಿ ಸನ್ನಿಧಿಯ ಬಳಿ ನಿರ್ಮಿಸಿದ ಅಶ್ವತ್ಥಕಟ್ಟೆಯಲ್ಲಿ ಜೂ.20 ರಂದು ಅಶ್ವಥೋಪನಯನ ಕಾರ್ಯಕ್ರಮ ವೇದಮೂರ್ತಿ ಶ್ರೀವತ್ಸ ಕೆ. ಇವರ ಪುರೋಹಿತ್ಯದಲ್ಲಿ ಅದ್ದೂರಿಯಾಗಿ ನೆರವೇರಿತು.

ಜೂ. 19ರಂದು ನಡೆದ ರಾಜಗೋಪುರ ( ದುರ್ಗಾ ಗೋಪುರ ) ನಿರ್ಮಾಣದ ಸಮಾಲೋಚನೆ ಸಭೆ ನಡೆದು ರಾಜಗೋಪುರ ಅನ್ನಛತ್ರ ದೇವಸ್ಥಾನದ ಸುತ್ತ ಕಾಂಪೌಂಡ್ ನಿರ್ಮಿಸುವುದೆಂದು ತೀರ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೆಸರರು ಶರತ್ ಕೃಷ್ಣ ಪಡವೆಟ್ನಾಯ , ಯಶೋಧರ್ ಪ್ರತಿನಿಧಿ ಎಸ್ ಕೆ ಡಿ ಆರ್ ಡಿ ಪಿ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್, ನಾಮದೇವರಾವ್ ಮುಂಡಾಜೆ, ಕೊಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದಾಸಪ್ಪಗೌಡ, ಭುಜಬಲಿ ಧರ್ಮಸ್ಥಳ, ಸತೀಶ್ ಕಾಮತ್ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು, ಶರತ್ ಪರಂಜಪೆ ಕಡಿರುದ್ಯಾವರ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಕೃಷ್ಣಪ್ಪ ಪೂಜಾರಿ, ಕೇಶವ ಫಡಕೆ, ಚಂದ್ರಶೇಖರ್, ಉಮೇಶ್ವರಿ ಬೆಡಿಗುತ್ತು , ಹರಿಣಾಕ್ಷಿ ತೀಕ್ಷಿತ್ ಕಲ್ ಬೆಟ್ಟು ಉಪಸ್ಥಿತರಿದ್ದರು.

ಈ ಪುಣ್ಯ ಕಾರ್ಯದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಗವದ್ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಸುಚಿತ್ರ ಮರಾಟೆ ಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮವನ್ನು ದಾಸಪ್ಪಗೌಡ ಕಾಂಜಾನು ಸ್ವಾಗತಿಸಿ ನೇಮಿರಾಜ್ ವಂದಿಸಿದರು. ರಾಜೇಶ್ ಗೌಡ ಕಲ್ಬೆಟ್ಟು ನಿರೂಪಿಸಿದರು.
(ವರದಿ: ರತ್ನಾಕರ್ ನಾವೂರು)

Related posts

ಕುವೆಟ್ಟು: ಮದ್ದಡ್ಕ ನಿವಾಸಿ ಹೆನ್ರಿ ಡಿಸೋಜ ನಿಧನ

Suddi Udaya

ಮದ್ದಡ್ಕರಾಮನವಮಿ ಕಾರ್ಯಕ್ರಮ

Suddi Udaya

ಮೂಡಬಿದ್ರಿ : ಕೋಟೆಬಾಗಿಲು ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘ ಮತ್ತು ಶ್ರೀ ವೀರ ಮಾರುತಿ ದೇವಸ್ಥಾನ ವತಿಯಿಂದ ಆಟಿದ ಕೂಟ

Suddi Udaya

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಂಭ್ರಮದ ಜಾತ್ರೋತ್ಸವ

Suddi Udaya

ತಾಲೂಕು ಮಟ್ಟದ ಖೋ-ಖೋ ಸ್ಪರ್ಧೆ: ನಡ ಸರಕಾರಿ ಪಿ.ಯು. ಕಾಲೇಜು ಬಾಲಕರ ಹಾಗೂ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬೆಳಾಲು: ಶ್ರೀ ಅನಂತಪದ್ಮನಾಭ ದೇವಸ್ಥಾನ ವಾರ್ಷಿಕ ಮಹಾಸಭೆ ಹಾಗೂ ಲೆಕ್ಕಾಚಾರ ಮಂಡನೆ

Suddi Udaya
error: Content is protected !!