30.5 C
ಪುತ್ತೂರು, ಬೆಳ್ತಂಗಡಿ
September 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೂ.26: ಸೌಮ್ಯತಿಲಕ್ ಶೆಟ್ಟಿ ಇವರ ‘ಮಸಿಯ ಮಾತು’ ಕವನ ಸಂಕಲನ ಬಿಡುಗಡೆ

ಮೂಡುಬಿದಿರೆ: ವಿದ್ಯಾಗಿರಿಯ ಆಳ್ವಾಸ್ ಸ್ವಾಯತ್ತ ಪದವಿಪೂರ್ವ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸೌಮ್ಯತಿಲಕ್ ಶೆಟ್ಟಿ ಇವರ ಚೊಚ್ಚಲ ಕವನ ಸಂಕಲನ ‘ಮಸಿಯ ಮಾತು’ ಬಿಡುಗಡೆ ಸಮಾರಂಭ ಜೂ.26 ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಅವರು ಕೃತಿಯನ್ನು ಲೋಕಾರ್ಪಣೆಗೊಳಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಎಕ್ಸಲೆಂಟ್ ಸಂಸ್ಥೆಯ ವಿಶ್ರಾಂತ ಕುಲಸಚಿವರು ಹಾಗೂ ಆಡಳಿತ ನಿರ್ದೇಶಕರಾದ ಡಾ। ಬಿ. ಪಿ. ಸಂಪತ್ ಕುಮಾರ್ ಭಾಗವಹಿಸಲಿದ್ದಾರೆ.
ಮೂಡುಬಿದಿರೆ ತಾಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವೇಣುಗೋಪಾಲ ಶೆಟ್ಟಿ ಕೆ. ಕೃತಿಯನ್ನು ಪರಿಚಯಿಸಲಿದ್ದಾರೆ. ಉಜಿರೆಯ ಹವ್ಯಾಸಿ ಬರಹಗಾರ್ತಿ ಆಶಾ ಅಡೂರ್ ಶುಭಾಶಂಸನೆಗೈಯಲಿದ್ದಾರೆ.

ಇದೇ ವೇಳೆ ಅಳದಂಗಡಿಯ ಆಮಂತ್ರಣ ಸೇವಾ ಪ್ರತಿಷ್ಠಾನದ ಮ್ಯಾನೆಜಿಂಗ್ ಟ್ರಸ್ಟಿ ವಿಜಯ ಕುಮಾರ್ ಜೈನ್ ಸೇರಿದಂತೆ ಹಲವು ಗಣ್ಯರು ಗೌರವ ಉಪಸ್ಥಿತರಿರಲಿದ್ದಾರೆ. ಆಳ್ವಾಸ್ ಪಿಯು ಕಾಲೇಜಿನ ಕನ್ನಡ ವಿಭಾಗದ ಡಾ| ಸುಧಾರಾಣಿ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.

ಇದು ಲೇಖಕಿ ಸೌಮ್ಯತಿಲಕ್ ಶೆಟ್ಟಿ ಇವರ ಮೊದಲ ಸಾಹಿತ್ಯ ಕೃತಿಯಾಗಿದ್ದು, ಸಾಹಿತ್ಯಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸೌಮ್ಯತಿಲಕ್ ಶೆಟ್ಟಿ ಮತ್ತು ತಿಲಕ್ ಶೆಟ್ಟಿ ವಿನಂತಿಸಿದ್ದಾರೆ.

Related posts

ಕಾಂಗ್ರೆಸ್ ನ ಓಲೈಕೆ ರಾಜಕಾರಣದಿಂದ ಶರಣ್ ಪಂಪುವೆಲ್ ರವರ ಮೇಲೆ ಕೇಸು ಖಂಡನೀಯ : ನವೀನ್ ನೆರಿಯ

Suddi Udaya

ಬಳಂಜ : ಮುಜ್ಜಿಮೇರು ಮನೆಯ ಒಬ್ಬು ಪೂಜಾರಿ ನಿಧನ

Suddi Udaya

ಮದ್ದಡ್ಕದಲ್ಲಿ ನ್ಯಾಯಬೆಲೆ ಅಂಗಡಿ ಶುಭಾರಂಭ

Suddi Udaya

ತುಳು ಭಾಷೆಗೆ ಐತಿಹಾಸಿಕ ಗೌರವ: ರಾಜ್ಯ ಸರ್ಕಾರದ ಸರ್ವ ಶ್ರೇಷ್ಠ ಸಾಧನೆ-ಸಂತೋಷ್ ಕುಮಾರ್

Suddi Udaya

ಧರ್ಮಸ್ಥಳ ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ನಿಧನಕ್ಕೆ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಶಿವಮೊಗ್ಗ ಜೈಲಿನಿಂದ ಚಿನ್ನಯ್ಯ ಬಿಡುಗಡೆ

Suddi Udaya
error: Content is protected !!