29.4 C
ಪುತ್ತೂರು, ಬೆಳ್ತಂಗಡಿ
September 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಅಭಾಸಾಪ ವತಿಯಿಂದ ಉಪನ್ಯಾಸ ಕಾರ್ಯಕ್ರಮ

ಬೆಳ್ತಂಗಡಿ : ಅಖಿಲ ಭಾರತೀಯ ಸಾಹಿತ್ಯ ಪರಿಷತ್( ರಿ) ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿ ಘಟಕ ಇದರ ಆಶ್ರಯದಲ್ಲಿ ಸಾಹಿತ್ಯ ಮೂಲ ಸಾಮಾಜಿಕ ಶಿಷ್ಟಾಚಾರ ಉಪನ್ಯಾಸ ಕಾರ್ಯಕ್ರಮವು ಅಭ್ಯಾಸ ಪದವಿ ಪೂರ್ವ ಕಾಲೇಜು ಪ್ರಗತಿನಗರ ಕಾಶಿಬೆಟ್ಟು ಇಲ್ಲಿ ನಡೆಯಿತು.

ಸಾಹಿತ್ಯ ಮೂಲ ಸಾಮಾಜಿಕ ಶಿಷ್ಟಾಚಾರದ ಬಗ್ಗೆ, ಸಂಪನ್ಮೂಲ ವ್ಯಕ್ತಿ ಡಾ ಎಮ್.ಎನ್. ರವಿ ಮಂಡ್ಯ ಇವರು ಕೌಟುಂಬಿಕ ಶಿಷ್ಟಾಚಾರ, ಸಾಮಾಜಿಕ ಶಿಷ್ಟಾಚಾರ, ಔದ್ಯೋಗಿಕ ಶಿಷ್ಟಾಚಾರ ವಿಷಯಗಳ ಬಗ್ಗೆ ಸಂಪೂರ್ಣವಾಗಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಭ್ಯಾಸ್ ಕಾಲೇಜಿನ ಅಧ್ಯಕ್ಷ ಎಂ ಎಸ್ ಕಾರ್ತಿಕೇಯ ಇವರು ಇಂದಿನ ದಿನಮಾನದಲ್ಲಿ ಬೇಕಾದ ಶಿಷ್ಟಾಚಾರದ ಅವಶ್ಯಕತೆಗಾಗಿ ಈ ಕಾರ್ಯಕ್ರಮ ತುಂಬಾ ಅತ್ಯವಶ್ಯ ಎಂದರು. ಇದೇ ಸಂದರ್ಭ ಅಭ್ಯಾಸ್ ಕಾಲೇಜಿನ ಸ್ಟಡಿ ಮೆಟೀರಿಯಲ್ ಅನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಗೈದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಅಧ್ಯಕ್ಷ ಪ್ರೊ ಗಣಪತಿ ಕುಳ ಮರ್ವ ಸ್ವಾಗತಿಸಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಸ್ತಾವನೆ ಗೈದರು.

ಅಭಾಸಾಪ ಮಹಿಳಾ ಘಟಕದ ಅಧ್ಯಕ್ಷೆ ಆಶಾ ಅಡೂರ್, ಸಮಿತಿ ಸದಸ್ಯೆ ಅಕ್ಷತಾ ಅಡೂರ್ ಕಾರ್ಯಕ್ರಮ ಕ್ಕೆ ಸಹಕರಿಸಿದರು. ಅಭಾಸಾಪ ಸಮಿತಿ ಸದಸ್ಯರಾದ ತ್ರಿವಿಕ್ರಮ ಹೆಬ್ಬಾರ್, ಅಭ್ಯಾಸ್ ಸಂಸ್ಥೆಯ ಉಪ ಪ್ರಾಂಶುಪಾಲರಾದ ಚಂದ್ರ ಶೇಖರ್ ಗೌಡ, ಇತರ ಉಪನ್ಯಾಸಕರು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.


ಅಭಾಸಾಪ ಜತೆಕಾರ್ಯದರ್ಶಿ ಕಾರ್ಯಕ್ರಮ ನಿರೂಪಿಸಿದರು, ಸುದೀರ್‌ ಧನ್ಯವಾದವನ್ನಿತ್ತರು.

Related posts

ಕನ್ಯಾಡಿ ll ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

Suddi Udaya

ವೇಣೂರು : ದಿ| ಸತೀಶ್ ಆಚಾರ್ಯ ರವರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

Suddi Udaya

ಮಾಲಾಡಿ: ಕೊಲ್ಪೆದಬೈಲು ಶಕ್ತಿನಗರ ನಿವಾಸಿ ಕುಂಞಿಮೋಣು ನಿಧನ

Suddi Udaya

ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ಚಂಡಿಕಾ ಹೋಮ, ದುರ್ಗಾಪೂಜೆ

Suddi Udaya

ಬಳಂಜ : ಕಜೆಕೋಡಿ ನಿವಾಸಿ ಧರ್ಣಪ್ಪ ಶೆಟ್ಟಿ ನಿಧನ

Suddi Udaya

ಎಕ್ಸೆಲ್ ವಿದ್ಯಾರ್ಥಿನಿ ವರ್ಣಿಕ ಎಚ್. ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ

Suddi Udaya
error: Content is protected !!