27.6 C
ಪುತ್ತೂರು, ಬೆಳ್ತಂಗಡಿ
September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ವಿಶ್ವ ಯೋಗ ದಿನಾಚರಣೆ

ಬೆಳ್ತಂಗಡಿ : ಕುಪ್ಪೆಟ್ಟಿಯ ಶ್ರೀ ದುರ್ಗಾಗಣೇಶ ಸಭಾಭವನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಉಪ್ಪಿನಂಗಡಿ ನಗರದ ವತಿಯಿಂದ 12ನೇ ವಿಶ್ವ ಯೋಗ ದಿನಾಚರಣೆಯನ್ನು ಜೂ.21ರಂದು ಹಮ್ಮಿಕೊಳ್ಳಲಾಗಿತ್ತು.

ಪ್ರದೀಪ್ ನಾಯ್ಕ ಮತ್ತು ತಂಡದಿಂದ ಭಜನಾ ಕಾರ್ಯಕ್ರಮ ಬಳಿಕ ಯೋಗಬಂಧುಗಳಾದ ಯೋಗೀಶ್ ಅಮೃತವಚನ ಹಾಗೂ ಸೌಮ್ಯ ಪಂಚಾಂಗ ಪಠಣವನ್ನು ನಡೆಸಿಕೊಟ್ಟರು. ಮಾನಸಿಕ ಸಿದ್ಧತೆಯನ್ನು ಕುಮಾರ ಯಶನ್ ನಡೆಸಿ, ಪ್ರಾತ್ಯಕ್ಷಿಕೆಯಲ್ಲಿ ಶ್ರೀಮತಿ ಶಶಿ ಮತ್ತು ಹರೀಶ್ ಸಹಕರಿಸಿದರು. ಯೋಗ ದಿನಾಚರಣೆಯ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ದುರ್ಗಾಗಣೇಶ ಸಭಾಭವನದ ಅಧ್ಯಕ್ಷ ರೋಹಿತ್ ಶೆಟ್ಟಿ ನೆರವೇರಿಸಿ ಭಜನಾ ಮಂಡಳಿಯ ಸದಸ್ಯರಾದ ಚಿದಾನಂದ ನಾಯ್ಕ್ ಹಾಗೂ ಸಮಿತಿಯ ತಾಲ್ಲೂಕು ಪ್ರಮುಖರು ಹಾಗೂ ಹಿರಿಯ ಯೋಗ ಬಂಧುಗಳು ಉಪಸ್ಥಿತರಿದ್ದರು.

ಮುಖ್ಯ ಅತಿಥಿಯಾಗಿ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಶುಭಹಾರೈಸಿದರು. ಬೌದ್ದಿಕ್ ಅವಧಿಯಲ್ಲಿ ನಿತ್ಯ ಯೋಗದ ಲಾಭಗಳ ಜೊತೆಗೆ ನಿರಂತರ ಯೋಗಾಭ್ಯಾಸವನ್ನು ಮುಂದುವರೆಸುವಂತೆ ಡಾ.ಅನಿಶ್ ಕುಮಾರ್, ಶಿಕ್ಷಕರು – ಶಬರೀಶ ಶಾಖೆ ನೆಲ್ಯಾಡಿ ಇವರು ಕರೆ ನೀಡಿದರು.

ಬಳಿಕ ಆಯುಷ್ ಪಠ್ಯಕ್ರಮದ ಅಭ್ಯಾಸಗಳ ವಿವರಣೆಯನ್ನು ಸಮಿತಿಯ ನಮ್ಮ ಮನೆ ಶಾಖೆ, ಗುರುವಾಯನಕೆರೆಯ ಸಂಚಾಲಕಿ ಸುಮಲತಾ ನೀಡಿದರು. ಪ್ರಾತ್ಯಕ್ಷಿಕೆಯಲ್ಲಿ ಯೋಗಬಂಧುಗಳಾದ ಶ್ರೀಮತಿ ಉಷಾ ಹಾಗೂ ಸುಬ್ರಹ್ಮಣ್ಯ ಸಹಕರಿಸಿದರು. ಅಭ್ಯಾಸಗಳ ಅವಧಿಯಲ್ಲಿ ಸಾಮೂಹಿಕ ಯೋಗ ನಮನ, ಜ್ಯೋತಿರ್ಮಂತ್ರ ಹಾಗೂ ಐಕ್ಯ ಮಂತ್ರವನ್ನು ಪಠಿಸಲಾಯಿತು. ಸಮಿತಿಯ ನಮ್ಮ ಮನೆ ಗುರುವಾಯನಕೆರೆ ಶಾಖೆಯ ಯೋಗಬಂಧು ಶ್ರೀಮತಿ ದಮಯಂತಿ ವಂದಿಸಿದರು, ಮದ್ದಡ್ಕ ಶಾಖೆಯ ಶ್ರೀಮತಿ ವತ್ಸಲ ಎಂ.ಭಟ್ ಕಾರ್ಯಕ್ರಮ ನಿರೂಪಿಸಿದರು. ಉಪ್ಪಿನಂಗಡಿ, ಆಲಂಕಾರು, ನೆಲ್ಯಾಡಿ, ಗುರುವಾಯನಕೆರೆ ಹಾಗು ಮದ್ದಡ್ಕ ಭಾಗದ 130ಕ್ಕೂ ಮಿಕ್ಕಿ ಯೋಗ ಹಾಗೂ ಸ್ಥಳೀಯ ಯೋಗೇತರ ಬಂಧುಗಳು ಭಾಗವಹಿಸಿದರು. ಸಮಿತಿಯ ಮಂಗಳೂರು ಮಹಾನಗರದ ಮಾರ್ಗದರ್ಶಕರಾದ ಆನಂದ ಕುಂಟಿನಿ, ಉಪ್ಪಿನಂಗಡಿ ನಗರ ಸಂಚಾಲಕರಾದ ಸಂತೋಷ್ ಕುಮಾರ್, ಶಿಕ್ಷಣ ಪ್ರಮುಖರಾದ ಪ್ರದೀಪ್ ಹಾಗೂ ಶಾಖಾ ಪ್ರಮುಖರುಗಳು, ಹಿರಿಯ ಯೋಗ ಬಂಧುಗಳ ಮಾರ್ಗದರ್ಶನದಲ್ಲಿ ನಡೆಯಿತು.

Related posts

ಬಡಗಕಾರಂದೂರು: ನಿವೃತ್ತ ಶಿಕ್ಷಕಿ ಗೆ ಬೀಳ್ಕೊಡುಗೆ ಸಮಾರಂಭ

Suddi Udaya

ತುಳುವಿಗೆ ಅಧಿಕೃತ ಮಾನ್ಯತೆ: ತುಳುನಾಡಿನ ದಶಕಗಳ ಕನಸು ನನಸು: ಅಭಿನಂದನ್ ಹರೀಶ್ ಕುಮಾರ್

Suddi Udaya

ಕೊಕ್ರಾಡಿ ಅತ್ರಿಜಾಲ್ ಕುತ್ಲೂರು ರಸ್ತೆಯ ಸೇತುವೆ ಕುಸಿತ

Suddi Udaya

ಧರ್ಮಸ್ಥಳ: 26ನೇ ವರ್ಷದ ಭಜನಾ ಕಮ್ಮಟದ 4ನೇ ದಿನದ ಕಾರ್ಯಕ್ರಮ

Suddi Udaya

ಆಟಿಡೊಂಜಿ ಕೆಸರ್ದ ಗೊಬ್ಬು ವತಿಯಿಂದ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್‌ರಿಗೆ ಗೌರವಾರ್ಪಣೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಭೇಟಿ

Suddi Udaya
error: Content is protected !!