September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಜಿರೆ ಪಿಯಂಶ್ರೀ ಶಾಲೆಯ ಎಲ್‌ಕೆಜಿ-ಯುಕೆಜಿ ಪೋಷಕರ ಸಭೆ: ನೂತನ ಅಧ್ಯಕ್ಷರಾಗಿ ಜಗನ್ನಾಥ ದೇವಾಡಿಗ, ಉಪಾಧ್ಯಕ್ಷೆಯಾಗಿ ಹರಿಣಿ ಜೈನ್ ಆಯ್ಕೆ

ವೇಣೂರು: ಬಜಿರೆ ಪಿಯಂಶ್ರೀ (PM Schools for Rising India) ಶಾಲೆಯಲ್ಲಿ ಇಂದು ಎಲ್‌ಕೆಜಿ, ಯುಕೆಜಿ ವಿದ್ಯಾರ್ಥಿ ಪೋಷಕರ ಸಭೆಯು ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಲೋಕೇಶ್ ಕೋರ್ಲೋಡಿ ಮಾತನಾಡಿ, ನಿಕಟಪೂರ್ವ ಸಮಿತಿಯ ಕಾರ್ಯಗಳನ್ನು ಶ್ಲಾಘಿಸಿದರು. ಶಾಲೆಯ ಅಭಿವೃದ್ಧಿ, ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ನೂತನ ಸಮಿತಿಗೆ ತಿಳಿಸಿದರು.


ಸಭೆಯಲ್ಲಿ 2026-27ನೇ ಸಾಲಿಗೆ ಎಲ್‌ಕೆಜಿ, ಯುಕೆಜಿ ಅಭಿವೃದ್ಧಿ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ಜಗನ್ನಾಥ ದೇವಾಡಿಗ ಆಯ್ಕೆಯಾಗಿದ್ದು, ಉಪಾಧ್ಯಕ್ಷೆಯಾಗಿ ಹರಿಣಿ ಜೈನ್ ಪುನರಾಯ್ಕೆಯಾದರು. ಸದಸ್ಯರುಗಳಾಗಿ ಕೃಷ್ಣಪ್ಪ ದೇವಾಡಿಗ, ಎಚ್. ಮಲ್ಲಿಕಾರ್ಜುನ್, ಪದ್ಮನಾಭ ಕುಲಾಲ್, ದುಗ್ಗಪ್ಪ ನಾಯ್ಕ್, ರಜಿನಿ ಪಿ., ಸುಷ್ಮಾ ಜೈನ್, ಹರಿಣಿ ಹೆಗ್ಡೆ, ತುಳಸಿ ಜಿ. ಆಯ್ಕೆಯಾದರು.

ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಶಿವಾನಂದ ಗೌಡ ಮಾತನಾಡಿ, ಮನೆಯಲ್ಲಿ ಮಕ್ಕಳಿಗೆ ಪೋಷಕರು ಶಿಸ್ತು ಮೂಡಿಸಬೇಕು, ಮಕ್ಕಳ ಎದುರು ಮೊಬೈಲ್ ಬಳಕೆ ಮಿತಿಗೊಳಿಸಬೇಕು ಎಂದ ಅವರು, ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ತಿಳಿಸಿದರು.


ನೂತನ ಅಧ್ಯಕ್ಷ ಜಗನ್ನಾಥ ದೇವಾಡಿಗ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆಯಿತ್ತರು. ಮುಖ್ಯಶಿಕ್ಷಕಿ ರಶ್ಮಿ ಶೆಟ್ಟಿ ಸ್ವಾಗತಿಸಿ, ಶಾಲೆಯ ನಿಯಮಗಳ ತಿಳಿಸಿದರು.
ಎಸ್‌ಡಿಎಂಸಿ ಸದಸ್ಯೆ ಶ್ರೀಮತಿ ಪ್ರಮೀಳಾ, ಶಿಕ್ಷಕ ವೃಂದ, ಸಿಬ್ಬಂದಿ ವರ್ಗ, ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಸವಿತಾ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಸಫ್ರಿನಾ ವಂದಿಸಿದರು.

Related posts

ನಾಳೆ (ಮೇ 7): ಬೆಳ್ತಂಗಡಿ ತಾಲೂಕಿನ ವಿವಿಧೆಡೆ ವಿದ್ಯುತ್ ನಿಲುಗಡೆ

Suddi Udaya

ಹಿರಿಯ ಸಾಹಿತಿ, ಪತ್ರಕರ್ತ ಉಜಿರೆ ಶ್ರೀಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ನಾ ವುಜಿರೆ ನಿಧನ

Suddi Udaya

ಮೇ 3 – 4: ನಡ ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂದಿರದ ವಠಾರದಲ್ಲಿ ಲೋಕಕಲ್ಯಾಣಾರ್ಥ “ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ”: ವೈಭಯುತ ಶೋಭಾಯಾತ್ರೆ

Suddi Udaya

ಬಂದಾರಿನಲ್ಲಿ ಸಿಡಿಮದ್ದು ಸ್ಫೋಟಗೊಂಡು ಆಟವಾಡುತ್ತಿದ್ದ ಬಾಲಕನಿಗೆ ಗಾಯ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಿಂತನಾ ದಿನಾಚರಣೆ

Suddi Udaya

ಅ.16: ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ನಿಮಿತ್ತ ‘ಅಟ್ಟಳಿಗೆಯ ಸ್ತಂಭ ನ್ಯಾಸ’ ಕಾರ್ಯಕ್ರಮ

Suddi Udaya
error: Content is protected !!