September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪುದುವೆಟ್ಟು: ಶ್ರೀಧ.ಮಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರಿಂದ ಶ್ರಮದಾನ

ಪುದುವೆಟ್ಟು : ಸ್ಥಳೀಯ ಶ್ರೀಧ.ಮಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇಂದು(ಜೂ.23) ಪೋಷಕರು ಮತ್ತು ಶಿಕ್ಷಕರ ಸಹಭಾಗಿತ್ವದಲ್ಲಿ ಶ್ರಮದಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಸುಮಾರು 60ಕ್ಕೂ ಹೆಚ್ಚು ಪೋಷಕರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದು ಶಾಲೆಯ ಆವರಣದಲ್ಲಿ ಬೆಳೆದಿದ್ದ ಕಳೆ ಗಿಡಗಳನ್ನು ತೆರವುಗೊಳಿಸಿ, ಶಾಲಾ ಪರಿಸರವನ್ನು ಸುಂದರಗೊಳಿಸಲಾಯಿತು.


ಕಾರ್ಯಕ್ರಮದ ನೇತೃತ್ವವನ್ನು ಶಾಲೆಯ ಮುಖ್ಯ ಶಿಕ್ಷಕ ಶೀನಪ್ಪ ಗೌಡ ಹಾಗೂ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶಶಿಧರ ಜಿ ವಹಿಸಿದ್ದರು. ಶಾಲೆಯ ಎಲ್ಲಾ ಶಿಕ್ಷಕರು ಶ್ರಮದಾನದಲ್ಲಿ ಭಾಗವಹಿಸಿ ಪೋಷಕರೊಂದಿಗೆ ಕೈಜೋಡಿಸಿದರು. ಸಮುದಾಯ ಮತ್ತು ಶಾಲೆಯ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸ್ತುತ್ಯಾರ್ಹ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

Related posts

ಧರ್ಮಸ್ಥಳ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಕು. ಶೌರ್ಯ ಎಸ್ ವಿ ಬರೆದಿರುವ ಚೊಚ್ಚಲ ಪುಸ್ತಕ ಪ್ರೀತಿ ಏಕೆ ಭೂಮಿ ಮೇಲಿದೆ ಬಿಡುಗಡೆ

Suddi Udaya

ಬೆಳ್ತಂಗಡಿ: ಲಯನ್ಸ್ ಜಿಲ್ಲಾ ರಾಜ್ಯಪಾಲ, ಖ್ಯಾತ ಉದ್ಯಮಿ ಸಂಜೀತ್ ಶೆಟ್ಟಿ ರವರ ಅಧಿಕೃತ ಭೇಟಿ ಹಾಗೂ ಸ್ಥಾಪಕರ ದಿನಾಚರಣೆ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ಕಂಪ್ಯೂಟರ್‌ ಟ್ಯಾಲಿ ತರಬೇತಿ

Suddi Udaya

ಜಿಲ್ಲಾ ಮಟ್ಟದ ವಿಜ್ಞಾನ ಕೋಡ್ ಕ್ರಾಫ್ಟ್ ಮೇಳ: ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ವಿದ್ಯಾರ್ಥಿಅಭಿಜ್ಞಾ 5ನೇ ಸ್ಥಾನ

Suddi Udaya

ಮುಳಿಯ ಗೋಲ್ಡ್ & ಡೈಮಂಡ್ಸ್‌ನಿಂದ ‘ಮಾನ್ಸೂನ್ ಸೇಲ್’ – ಚಿನ್ನದ ಆಭರಣಗಳು 0%, VA/ಮೇಕಿಂಗ್ ನಲ್ಲಿ 100% ರಿಯಾಯಿತಿ

Suddi Udaya

ಮೇಲಂತಬೆಟ್ಟು: ಮನೆಯ ಮೇಲೆ ಕುಸಿದು ಬಿದ್ದ ಧರೆ: ಮನೆ ಸಂಪೂರ್ಣ ಹಾನಿ

Suddi Udaya
error: Content is protected !!