September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕನ್ಯಾಡಿ ಸೇವಾಭಾರತಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ರವರ ಭೇಟಿ

ಬೆಳ್ತಂಗಡಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ರವರನ್ನು ಜೂ.23 ರಂದು ಸೇವಾಭಾರತಿ ತಂಡದಿಂದ ಭೇಟಿ ಮಾಡಲಾಯಿತು.

ಈ ಸಂದರ್ಭದಲ್ಲಿ ಸೇವಾಭಾರತಿಯ ಹಿರಿಯ ಪ್ರಬಂಧಕ ಚರಣ್ ಕುಮಾರ್ ಎಂ ಅವರು, 2011ರ ಸರ್ಕಾರದ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ (Persons with Spinal Cord Injury – PwSCI) ಅಗತ್ಯವಿರುವ ವೈದ್ಯಕೀಯ ಸ್ವಯಂ ಆರೈಕೆ (Medical Self-Care) ಕಿಟ್‌ಗಳು ಹಾಗೂ ಸಹಾಯಕ ಸಾಧನಗಳನ್ನು ಸರ್ಕಾರದಿಂದ ಒದಗಿಸಬೇಕೆಂದು ಮನವಿ ಮಾಡಿದರು.

ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ದೈನಂದಿನ ಆರೈಕೆ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಸ್ವಾವಲಂಬಿ ಜೀವನ ನಡೆಸಲು ಈ ಸೌಲಭ್ಯಗಳು ಅತ್ಯಂತ ಅವಶ್ಯಕವಾಗಿವೆ ಎಂದು ಸಚಿವರ ಗಮನಕ್ಕೆ ತಂದರು.

ಮನವಿಯನ್ನು ಸ್ವೀಕರಿಸಿದ ಸಚಿವರು ವಿಷಯವನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Related posts

ಲಾಯಿಲ: ಗುರು ರಾಘವೇಂದ್ರ ಸ್ವಾಮಿಯ ಮಠದಲ್ಲಿ ಶ್ರೀರಾಮಚಂದ್ರ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ಸ್ವಚ್ಛತಾ ಕಾರ್ಯ

Suddi Udaya

ಸೆ. 7: ಮಡಂತ್ಯಾರುವಿನಲ್ಲಿ ವೈಭವದ ಮೊಸರು ಕುಡಿಕೆ ಉತ್ಸವ: ಸಾಧಕರಿಗೆ ಸನ್ಮಾನ,ಧಾರ್ಮಿಕ ಕಾರ್ಯಕ್ರಮ

Suddi Udaya

ಬಳಂಜ: ಬಿಲ್ಲವ ಸಂಘದಲ್ಲಿ ಮರಿಯಾಲಡೊಂಜಿ ಐತಾರ ವಿಶೇಷ ಕಾರ್ಯಕ್ರಮ: ಆಟಿಯ ವಿವಿಧ ತಿಂಡಿ ತಿನಸುಗಳ ಪ್ರದರ್ಶನ,ವಿವಿಧ ಮನೋರಂಜನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಮುಳಿಯ ಗೋಲ್ಡ್ & ಡೈಮಂಡ್ಸ್ ವತಿಯಿಂದ ನಟ ರಮೇಶ್ ಅರವಿಂದ್‌ ರವರಿಗೆ ಗೌರವ

Suddi Udaya

ಉಜಿರೆ ಎಸ್.ಡಿ.ಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಪದವಿ ಪ್ರಧಾನ ಸಮಾರಂಭ

Suddi Udaya

ಬೆಳ್ತಂಗಡಿ: ವಿವಿಧ ಸೇತುವೆ ರಚನೆ ಕಾಮಗಾರಿಗಳಿಗೆ ರೂ. 6 ಕೋಟಿ 25 ಲಕ್ಷ ಅನುದಾನ ಸರ್ಕಾರದಿಂದ ಮಂಜೂರು: ರಕ್ಷಿತ್ ಶಿವರಾಮ್

Suddi Udaya
error: Content is protected !!