27.6 C
ಪುತ್ತೂರು, ಬೆಳ್ತಂಗಡಿ
September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಗುರುದೇವ ಸಹಕಾರ ಸಂಘದ 28ನೇ ಶಾಖೆ ಗುರುಪುರ-ಕೈಕಂಬದಲ್ಲಿ ಉದ್ಘಾಟನೆ

ಬೆಳ್ತಂಗಡಿ : ಜನಸೇವೆಯೇ ಮೂಲಮಂತ್ರವನ್ನಾಗಿಸಿಕೊಂಡ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ, ಬೆಳ್ತಂಗಡಿಯ 28ನೇ ನೂತನ ಶಾಖೆಯು ಗುರುಪುರ-ಕೈಕಂಬದ ಅನಂತ ಮಹಲ್ ಕಾಂಪ್ಲೆಕ್ಸ್ ನಲ್ಲಿ ಜೂ. 19 ರಂದು ಶುಭಾರಂಭಗೊಂಡಿತ್ತು.

ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಭಗೀರಥ ಜಿ. ವಹಿಸಿ ಮಾತನಾಡಿ, ಮಾಜಿ ಸಚಿವ ವಸಂತ ಬಂಗೇರ, ಕೆ.ಜಿ. ಬಂಗೇರ ಮತ್ತು ಪದ್ಮನಾಭಎನ್. 2008ರಲ್ಲಿ ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಇಂದು ನಮ್ಮ ಸಂಸ್ಥೆ ಉನ್ನತ ಮಟ್ಟಕ್ಕೇರಿ ಸಹಾಕರ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುತ್ತಿದೆ. ಲಾಭದ ಉದ್ದೇಶದಿಂದ ಸಂಸ್ಥೆಯನ್ನು ಮಾಡಿಲ್ಲ. ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುತ್ತೇವೆ. ಸಂಘದ ಐದು ಶಾಖೆಗಳು ಮತ್ತು ಕೇಂದ್ರ ಕಚೇರಿ ಸ್ವಂತ ಮಾಲೀಕತ್ವದ ಮೂಲಕ ಠೇವಣಿದಾರರಿಗೆ ಧೈರ್ಯ ನೀಡುವ ವ್ಯವಸ್ಥೆ ನಮ್ಮಲ್ಲಿದೆ ಎಂದರು.

ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಎಸ್‌ಆರ್‌ಆರ್ ಮಸಾಲ ಇಂಡಸ್ಟ್ರೀಸ್ ಎಂಡಿ ಶೈಲೇಂದ್ರ ಸುವರ್ಣ ಮಾತನಾಡಿ, ಈ ಸಂಸ್ಥೆ ಹಲವಾರು ಕುಟುಂಬಗಳನ್ನು ಬೆಳಗುವಂತೆ ಮಾಡಿದೆ ಎಂದರು.

ಭದ್ರತಾ ಕೋಶವನ್ನು ಉದ್ಘಾಟಿಸಿದ ಕೈಕಂಬ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿನೋದ್ ಮಾಡ, ತಾ.ಪಂ. ಮಾಜಿ ಸದಸ್ಯ ಸುನಿಲ್ ಶುಭಹಾರೈಸಿದರು.
‘ಹೊಟೇಲ್ ಶ್ರೀರಾಮ್’ ಕೈಕಂಬದ ಮಾಲಕ ಹರಿರಾವ್ ಗಣಕ ಯಂತ್ರ ಉದ್ಘಾಟಿಸಿದರು. ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ನಿರಖು ಠೇವಣಿ ಪತ್ರ, ಗಂಜಿಮಠ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷೆ ಮಾಲತಿ ಎಂ ಉಳಿತಾಯ ಖಾತೆ ಪುಸ್ತಕವನ್ನು ವಿತರಿಸಿದರು.

ಮುಖ್ಯ ಅತಿಥಿಯಾಗಿ ಗುರುಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ಕೋಟ್ಯಾನ್, ಉದ್ಯಮಿಗಳಾದ ರೋಮನ್ಸ್‌ ಬೇಸಿಲ್ ಲೋಬೋ, ಗೋಪಾಲಕೃಷ್ಣ ಕೆ., ಎಂ.ಎಫ್. ಮುಸ್ತಾಫಾ, ಸತೀಶ್ಚಂದ್ರ ಇರುವೈಲು ಪಾಣಿಲ, ರಾಜೇಶ್ ಪೈ, ಸುನಿಲ್, ಕಂದಾವರ ಶ್ರೀ ನಾರಾಯಣ ಗುರು ಸ್ವಾಮಿಸೇವಾಸಂಘದ ಅಧ್ಯಕ್ಷ ದಿನೇಶ್, ಮಳಲಿ ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಅಧ್ಯಕ್ಷ ಕೇಶವ ಪೂಜಾರಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ ಮಳಲಿ, ಜಿ.ಪಂ. ಮಾಜಿ ಸದಸ್ಯ ಕೃಷ್ಣಅಮೀನ್, ಸಂಸ್ಥೆಯ ನಿರ್ದೇಶಕರಾದ ಸುಜಿತಾ ಬಂಗೇರ, ತನುಜಾ ಶೇಖರ್, ಸಂಜೀವ ಪೂಜಾರಿ, ಧರಣೇಂದ್ರ ಕುಮಾರ್, ಆನಂದ ಪೂಜಾರಿ ಸರ್ವೆದೋಳ, ಗಂಗಾಧರ ಮಿತ್ತಮಾರು, ಚಿದಾನಂದ ಪೂಜಾರಿ, ಬೆಳ್ತಂಗಡಿ ಗುರುನಾರಾಯಣ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಕಟ್ಟಡ ಮಾಲಕ ರಾಜೇಶ್ ಪೈ ಪರವಾಗಿ ಪುತ್ರ ಆದಿತ್ಯ ಪೈ ಅವರನ್ನು ಸಮ್ಮಾನಿಸಲಾಯಿತು. ಸಹಕರಿಸಿದ ವರಿಗೆ ಕೃತಜ್ಞತಾ ಪತ್ರ ನೀಡಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ. ಸ್ವಾಗತಿಸಿದರು.

ವಿಶೇಷಾಧಿಕಾರಿ ಮೋನಪ್ಪ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತ್ ಕುಮಾರ್ ನಿರೂಪಿಸಿ, ನಿರ್ದೇಶಕರಾದ ಚಂದ್ರಶೇಖರ್ ವಂದಿಸಿದರು. ಕೇಂದ್ರ ಕಚೇರಿ ಅಧಿಕಾರಿ ವರ್ಗ, ಇತರ ಶಾಖೆಗಳ ಶಾಖಾ ವ್ಯವಸ್ಥಾಪಕರುಗಳು, ಕೈಕಂಬ ಶಾಖೆಯ ಶಾಖಾ ವ್ಯವಸ್ಥಾಪಕಿ ಹರಿಣಾಕ್ಷಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಪ್ರಧಾನಿ ನರೇಂದ್ರ ಮೋದಿ ಯವರ ಹುಟ್ಟು ಹಬ್ಬದ ಪ್ರಯುಕ್ತ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವರಿಗೆ ವಿಶೇಷ ಪೂಜೆ

Suddi Udaya

ಬೆಳ್ತಂಗಡಿ ಭಾರತ್ ಜೋಡೋ ಟಾಸ್ಕ್ ಫೋರ್ಸ್ ತಂಡದಿಂದ ಗುರಿಪಳ್ಳದಲ್ಲಿ ಕುಸಿಯುವ ಹಂತದಲ್ಲಿರುವ ಸುರೇಶ್ ಮುಗೇರರ ಮನೆಗೆ ಭೇಟಿ

Suddi Udaya

ನಾವೂರುನಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರದ ಉದ್ಘಾಟನೆ

Suddi Udaya

ಮೇ 9: ಚಿತ್ರದುರ್ಗದಲ್ಲಿ ಬಿಎಸ್‌ವೈ ಅಭಿಮಾನೋತ್ಸವ-ಶಾಸಕ ಹರೀಶ್ ಪೂಂಜರಿಂದ ಅಭಿಮಾನೋತ್ಸವದ ಭಿತ್ತಿ ಚಿತ್ರ ಬಿಡುಗಡೆ

Suddi Udaya

ಬೆಳ್ತಂಗಡಿ ಕೇಂದ್ರ ಜುಮ್ಮಾ ಮಸೀದಿ ನೂತನ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಅಕ್ಬರ್ ಬೆಳ್ತಂಗಡಿ ಆಯ್ಕೆ

Suddi Udaya

ಗಾಳಿ-ಮಳೆ: ನಾಲ್ಕೂರು ಬಳಂಜದಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ಧರಾಶಾಯಿ

Suddi Udaya
error: Content is protected !!