September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯಲ್ಲಿ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.

ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಕೇಂದ್ರದ ಬಂಧುಗಳಾದ ವಿದುಷಿ ಶ್ರೀಮತಿ ಚೈತ್ರ ಭಟ್, ನಾಟಕ ತರಬೇತುದಾರರಾದ ಯಶವಂತ್ ಹಾಗೂ ಯಕ್ಷಗಾನ ತರಬೇತುದಾರರಾದ ಅರುಣ್ ಭಾಗವಹಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ.ಆರ್. ಅವರ ಮಾರ್ಗದರ್ಶನದಲ್ಲಿ ವಿವಿಧ ಸಂಘಗಳ ಉದ್ಘಾಟನೆ ನೆರವೇರಿತು. ಅತಿಥಿಗಳ ಪರಿಚಯವನ್ನು ಶ್ರೀಮತಿ ಗೀತಾ ಪಿ. ಅವರು ಮಾಡಿಕೊಟ್ಟರೆ, ಸಂಘಗಳ ಸಂಯೋಜಕಿ ಶಿಕ್ಷಕಿ ಶ್ರೀಮತಿ ಚೇತನ ರವರು ಸಂಘಗಳ ಉದ್ದೇಶ ಹಾಗೂ ಚಟುವಟಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಗಣಿತ ಮತ್ತು ವಿಜ್ಞಾನ ಸಂಘ, ಲಿಟರರಿ ಕ್ಲಬ್, ಇ.ಎಲ್.ಸಿ. ಕ್ಲಬ್, ಎಚ್.ಆರ್.ಡಿ. ಹಾಗೂ ಇಂಟರಾಕ್ಟ್ ಕ್ಲಬ್, ಆರ್ಟ್ ಅಂಡ್ ಕ್ರಾಫ್ಟ್ ಕ್ಲಬ್, ವಾಲ್ ಮ್ಯಾಗಜಿನ್ ಕ್ಲಬ್ ಹಾಗೂ ಕ್ರೀಡಾ ಕ್ಲಬ್‌ಗಳ ವಾರ್ಷಿಕ ಕಾರ್ಯಯೋಜನೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು.

ಎಲ್ಲಾ ಕ್ಲಬ್‌ಗಳ ಸಂಯೋಜಕರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀಪ್ತಾ ನಿರೂಪಣೆಯಲ್ಲಿ ಸಹಕರಿಸಿದರು. ಸಾನ್ವಿ ಎಸ್. ಬಂಗೇರ ಸ್ವಾಗತಿಸಿ, ರಿತಿಕಾ ಶೈಣೈ ವಂದಿಸಿದರು. ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.

Related posts

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಉತ್ತಮ ಯಂತ್ರೋಪಕರಣ ಖರೀದಿ ಪ್ರಶಸ್ತಿ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಥಮ ಚಿಕಿತ್ಸಾ ಕಾರ್ಯಾಗಾರ

Suddi Udaya

ಬೆಳ್ತಂಗಡಿಯಲ್ಲಿ ನೂತನ ಶಾಖೆ ‘ಕೋಟಕ್ ಲೈಫ್’ ಉದ್ಘಾಟನೆ

Suddi Udaya

ಕುಪ್ಪೆಟ್ಟಿ :ಕುಪ್ಪೆಟ್ಟಿ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ(CRP)ಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಧ್ಯಾ ಬಿ. ಗೋಳಿತೊಟ್ಟು ಶಾಲೆಗೆ ವರ್ಗಾವಣೆ

Suddi Udaya

ಕೊಕ್ಕಡ: ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ

Suddi Udaya

ಶಾಸಕ ಹರೀಶ್ ಪೂಂಜರವರ ವಿಶೇಷ ಪ್ರಯತ್ನ-ರೂ 2ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬೊಳ್ಳಾಜೆ- ಡೆಂಜೋಲಿ-ಪಡಂಗಡಿ ರಸ್ತೆ ಕಾಮಗಾರಿಗೆ ಚಾಲನೆ

Suddi Udaya
error: Content is protected !!