27.6 C
ಪುತ್ತೂರು, ಬೆಳ್ತಂಗಡಿ
September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಎಸ್‌ಡಿಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ಸಪ್ತಾಹ ಸಮಾರೋಪ

ಬೆಳ್ತಂಗಡಿ: ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆ ಹಾಗೂ ಒಂದು ವಾರಗಳ ಕಾಲ ನಡೆದ ಯೋಗ ಶಿಬಿರದ ಸಮಾರೋಪ ಸಮಾರಂಭವು ಗಣ್ಯರ ಸಮ್ಮುಖದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಯಕ್ಷಗಾನ ಗುರುಗಳಾದ ಲಕ್ಷ್ಮಣ ಗೌಡ ಬೆಳಾಲು ಮಾತನಾಡಿ ” ಯೋಗ ಹಾಗೂ ಮಕ್ಕಳ ಮನಸ್ಸು ಒಂದಕ್ಕೊಂದು ಪೂರಕವಾಗಿದೆ. ಮುಂದಿನ ದಿನಗಳಲ್ಲಿ ಯಕ್ಷಗಾನ ವಿಶ್ವ ವ್ಯಾಪ್ತಿಯಾಗಲಿ” ಎಂದು ಶುಭ ಹಾರೈಸಿದರು. ಶ್ರೀ ಧರ್ಮಸ್ಥಳ ನ್ಯಾಚುರೋಪತಿ ಕಾಲೇಜಿನ ಉಪನ್ಯಾಸಕಿ ಡಾ‌. ರೆನಿತಾ ಮಾತನಾಡಿ “ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಯೋಗ ಸಹಕಾರಿ, ಜೊತೆಗೆ ಮಕ್ಕಳು ಉತ್ತಮ ಆಹಾರ ವನ್ನು ಸೇವನೆ ಮಾಡಿ ” ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ವಹಿಸಿದ್ದರು.

ವೇದಿಕೆಯಲ್ಲಿ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರರಾದ ಸಾನಿಕಾ ಹಾಗೂ ಅನಘಾ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಸಹ ಶಿಕ್ಷಕಿ ರೇವತಿ ಇವರು ಸ್ವಾಗತಿಸಿದರು. ಸಹ ಶಿಕ್ಷಕಿ ಗೀತಾ ವಂದಿಸಿದರು.
ಕಾರ್ಯಕ್ರಮದ ನಿರೂಪಣೆ ಯನ್ನು ಶಾಲಾ ಧೈಹಿಕ ಶಿಕ್ಷಣ ಶಿಕ್ಷಕ ಪ್ರಜ್ವಲ್ ನೆರವೇರಿಸಿದರು.

Related posts

ಮಚ್ಚಿನ: ನೆತ್ತರ ದ.ಕ.ಜಿ.ಪಂ. ಕಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿ ಹಬ್ಬದ ಸಂಭ್ರಮ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ಘಟಕದಿಂದ ಸರ್ವ ಧರ್ಮ ಪ್ರಾರ್ಥನೆ

Suddi Udaya

ಪಡಂಗಡಿ: ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ರಕ್ಷಾಬಂಧನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮೇ 21: ವಿದ್ಯುತ್ ನಿಲುಗಡೆ

Suddi Udaya

ಸೌಜನ್ಯಳ ಅತ್ಯಾಚಾರ, ಕೊಲೆ ಪ್ರಕರಣದ ಎಸ್ .ಐ.ಟಿ ತನಿಖೆಗೆ ಆಗ್ರಹ: ಬೆಳ್ತಂಗಡಿ ತಾಲೂಕು ಕಚೇರಿ ಎದುರು ಮಹಾಧರಣಿ ಆರಂಭ

Suddi Udaya

ಚುನಾವಣಾ ಕಾರ್ಯಕ್ಕೆ 18 ವರ್ಷದೊಳಗಿನ ಮಕ್ಕಳ ಬಳಕೆ ನಿಷೇಧ

Suddi Udaya
error: Content is protected !!