27.6 C
ಪುತ್ತೂರು, ಬೆಳ್ತಂಗಡಿ
September 24, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಮಂಡ್ಯದಲ್ಲಿ ನಡೆದ ಕೊಲೆ ಪ್ರಕರಣ: ಆರೋಪಿ ಜಯಚಂದ್ರ ಬಂಧನ

ಬೆಳ್ತಂಗಡಿ: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಶೆಟ್ಟಿಹಳ್ಳಿಯಲ್ಲಿ ಜೂ.22 ರಂದು ಕ್ಷುಲ್ಲಕ ಕಾರಣಕ್ಕೆ ಗಣೇಶ್ (35) ಎಂಬಾತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಗ್ರಾಮಾಡಳಿತಾಧಿಕಾರಿ ಜಯಚಂದ್ರನನ್ನು ಕೆ. ಎಂ. ದೊಡ್ಡಿ ಪೋಲೀಸರು ಆರೋಪಿಯನ್ನು ಶೆಟ್ಟಿಹಳ್ಳಿಯಲ್ಲಿ ಜೂ. 24 ರಂದು ಮಧ್ಯಾಹ್ನ ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂದಿಸಿದ್ದಂತೆ ಮಹಜರು ಪ್ರಕ್ರಿಯೆ ನಡೆಸಿದ ಪೊಲೀಸರು ಆರೋಪಿ ಜಯಚಂದ್ರನನ್ನು ವಿಚಾರಣೆ ನಡೆಸುತ್ತಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕೆಮಿಂಜೆ ಗ್ರಾಮ ಆಡಳಿತ ಅಧಿಕಾರಿ ಆಗಿರುವ ಜಯಚಂದ್ರ ಈ ಹಿಂದೆ ಬೆಳ್ತಂಗಡಿ ತಾಲೂಕಿನ ಬಾರ್ಯ, ತೆಕ್ಕಾರು ಗ್ರಾಮದಲ್ಲಿ ವಿ.ಎ.ಆಗಿ ಕರ್ತವ್ಯ ನಿರ್ವಹಿಸಿದ್ದ. ಬೆಳ್ತಂಗಡಿ ಆಡಳಿತ ಸೌಧದದಲ್ಲಿ ಕೇಸ್ ವರ್ಕರ್ ಆಗಿರುವ ವೇಳೆ 94 ಸಿ ಅಕ್ರಮ ಸಕ್ರಮ ದಾಖಲೆಗಳ ಗೋಲ್ ಮಾಲ್ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮೂರು ತಿಂಗಳು ಜೈಲಿನಲ್ಲಿದ್ದ ಬಳಿಕ ಪುತ್ತೂರು ತಾಲೂಕಿಗೆ ವರ್ಗಾವಣೆಯಾಗಿದ್ದ.

Related posts

ರೆಖ್ಯದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ: ವಾರಿಸುದಾರರ ಪತ್ತೆಗೆ ಧರ್ಮಸ್ಥಳ ಪೊಲೀಸರ ಪ್ರಕಟಣೆ

Suddi Udaya

ಅಪಘಾತದಲ್ಲಿ ಮೃತರಾದ ಪ್ರೈಸ್ ಮ್ಯಾಥ್ಯೂ ರವರಿಗೆ ಬೆಳ್ತಂಗಡಿಯಲ್ಲಿ ಅಂತಿಮ ನಮನ: ಅಂತ್ಯಸಂಸ್ಕಾರಕ್ಕಾಗಿ ಕೇರಳದ ಇರಟ್ಟಿಗೆ ಪಾರ್ಥಿವ ಶರೀರ ರವಾನೆ

Suddi Udaya

ವಲಯ ಮಟ್ಟದ ಬಾಲಕ- ಬಾಲಕಿಯರ ತ್ರೋಬಾಲ್ ಪಂದ್ಯಾಟ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಬೆಳ್ತಂಗಡಿ ಶಾಲಾ ಮಕ್ಕಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಮುಂಡಾಜೆ: ಮಾದಕ ವಸ್ತುಗಳ ವಿರೋಧಿ ದಿನಾಚರಣೆ

Suddi Udaya

ವೇಣೂರು ಕಾಲೇಜು ವಿದ್ಯಾರ್ಥಿನಿ ಅಸೌಖ್ಯದಿಂದ ನಿಧನ: ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ

Suddi Udaya

ಕಳ್ಳತನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿದ ವಾರಂಟ್ ಆರೋಪಿಯನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

Suddi Udaya
error: Content is protected !!