September 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಚೌಪಲ್ ಕಾರ್ಯಕ್ರಮಕ್ಕೆ ಬೆಳ್ತಂಗಡಿಯಲ್ಲಿ ಚಾಲನೆ

ಬೆಳ್ತಂಗಡಿ: ಭಾರತ ಸರಕಾರದ ಮಹತ್ವಾಂಕ್ಷಿ ಯೋಜನೆ ದೇಶದ್ಯಾಂತ ನಡೆಯಲಿರುವ ಚೌಪಾಲ್ ಕರಕುಶಲ ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜೂ.24 ರಂದು ಚಾಲನೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಅವರು ಸರಕಾರ ಯೋಜನೆಗಳ ಸವಲತ್ತುಗಳನ್ನು ಪಡೆದುಕೊಂಡು ನಮ್ಮ ಊರಲ್ಲೇ ದುಡಿಮೆ ಮಾಡಬಹುದು. ಹಿಂದೆ ಸಮುದಾಯಕ್ಕೆ ಸೀಮಿತಗೊಂಡಿದ್ದ ಕೆಲಸಗಳನ್ನು ಇಂದು ಎಲ್ಲಾ ವರ್ಗದವರು ಅವಲಂಭಿಸಿ ಬದುಕಿನ ರಹಾದಾರಿಯನ್ನು ಕಂಡುಕೊಂಡಿದ್ದಾರೆ. ಒಂದು ಕಾಲದಲ್ಲಿ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು ಆದರೆ ಇಂದು ನಮ್ಮ ವಸ್ತುಗಳು ರಫ್ತು ಆಗುತ್ತಿದ್ದು ಭಾರತ ಬದಲಾಗುತ್ತಿದೆ. ಯಂತ್ರಗಳಿAದ ತಯಾರಿಸಿದ ವಸ್ತುಗಳ ಸೌಂದರ್ಯ, ಕಲೆಗಿಂತ ಸ್ವತಃ ಕೈಯಿಂದ ತಯಾರಿಸಿದ ವಸ್ತುಗಳ ಆಕರ್ಷಣೆ ಹೆಚ್ಚು. ನಮ್ಮ ಮನಸ್ಥಿ ಸ್ವಂತ ಯೋಚನೆಯ ಛಲಭರಿತ ಕರ್ತವ್ಯಗಳು ನಮ್ಮದಾಗಲಿ. ಪ್ರಧಾನಿ ನರೇಂದ್ರ ಮೋದಿಯವರ “ಲೋಕಲ್ ಫಾರ್ ವೋಕಲ್” ಮೂಲಕ ಸ್ಥಳೀಯವಾಗಿ ತಯಾರಾಗುವ ಉತ್ಪನ್ನಗಳಿಗೆ ಬೆಂಬಲ ನೀಡುವುದು ಮತ್ತು ಅವುಗಳನ್ನು ಹೆಮ್ಮೆಯಿಂದ ಪ್ರಚಾರ ಮಾಡಲು ಅವರು ಆರಂಭಿಸಿದ ‘ಆತ್ಮನಿರ್ಭರ ಭಾರತ’ ಅಭಿಯಾನದ ಒಂದು ಪ್ರಮುಖ ಭಾಗವಾಗಿದೆ ಎಂದು ಹೇಳಿದರು.

ಭಾರತ ಸರಕಾರದ ಜವಳಿ ಸಚಿವಾಲಯ ಸಹಾಯಕ ನಿದೇರ್ಶಕಿ ರಾಜೇಶ್ವರಿ ಅವರು ಪ್ರಸ್ತಾವಿಕವಾಗಿ ಮಾತನಾಡಿ ಮುದ್ರಾ ಸಾಲ, ಮಾರ್ಜಿನ್ಮನಿ ಸೌಲಭ್ಯ, ಪೆಹಚಾನ ಗುರುತಿನ ಚೀಟಿ, ಬಿಮಾ ಯೋಜನೆಗಳ, ಕರಕುಶಲ ಕಲಾವಿದರಿಗೆ ಜಾಗೃತಿ ಮೂಡಿಸುವಿಕೆ ಹಾಗೂ ಚೌಪಾಲ್‌ನ ಮಹತ್ವತೆ ತಿಳಿಸಿದರು.

ಎನ್‌ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್, ಜಿಲ್ಲಾ. ಪಂಚಾಯತ್ ಯೋಜನ ನಿರ್ದೇಶಕ ಕೆ.ಇ.ಜಯರಾಂ, ತಾಲೂಕು ಪಂಚಾಯತ್ ವ್ಯವಸ್ಥಾಪಕಿ ನಿಶಾ, ಅಮೂಲ್ಯಆರ್ಥಿಕಾ ಮತ್ತು ಸಾಕ್ಷರಾತ ಇಲಾಖೆಯ ಉಷಾ ಕಾಮತ್ ಹಾಗೂ ತಾಲೂಕು ಎನ್‌ಆರ್‌ಎಲ್‌ಎಂ ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ ವೇದಿಕೆಯಲ್ಲಿದ್ದರು. ಶಿಬಿರಾರ್ಥಿಗಳಿಗೆ ಗಿಡಗಳನ್ನು ವಿತರಿಸಲಾಯಿತು. ಸಂಜೀವಿನಿ ಒಕ್ಕೂಟದ ವಲಯ ಮೇಲ್ವಿಚಾರಕ ಜಯಾನಂದ ಅಂಕಾಜೆ ಕಾರ್ಯಕ್ರಮ ನಿರ್ವಹಿಸಿದರು.

ಏನಿದು ಚೌಪಾಲ್:
ಭಾರತ ಸರ್ಕಾರದ ಜವಳಿ ಸಚಿವಾಲಯವು ದೇಶದ ಸಾಂಪ್ರದಾಯಿಕ ಕರಕುಶಲ ಕಲಾವಿದರನ್ನು ಸಬಲೀಕರಣಗೊಳಿಸಲು ಮತ್ತು ಅವರಿಗೆ ಸ್ಥಳೀಯವಾಗಿ ನೆರವು ಒದಗಿಸಲು ‘ಚೌಪಾಲ್’ ಕಾರ್ಯಕ್ರಮವನ್ನು ಆರಂಭಿಸಿದೆ. ಇದರ ಅಡಿಯಲ್ಲಿ ಕರಕುಶಲ ಜಿಲ್ಲೆಗಳಲ್ಲಿ ಖಾಯಂ ವೇದಿಕೆಗಳನ್ನು ಸ್ಥಾಪಿಸಿ, ತರಬೇತಿ ಮತ್ತು ಡಿಜಿಟಲ್ ಸೇವೆಗಳನ್ನು ಒದಗಿಸಲಾಗುತ್ತಿದೆ. ನೇಕಾರರು ಹಾಗೂ ಕುಶಲಕರ್ಮಿಗಳಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವುದು, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಬೆಳೆಸುವುದು ಮತ್ತು ಡಿಜಿಟಲ್ ವ್ಯವಸ್ಥೆಗೆ ಅವರನ್ನು ಜೋಡಿಸುವ ಉದ್ದೇಶ ಹೊಂದಲಾಗಿದೆ. ಚೌಪಾಲ್ ಕಾರ್ಯಕ್ರಮದ ಭಾಗವಾಗಿ ಆಡಿಯೋ-ದೃಶ್ಯ ಸಾಮಗ್ರಿಗಳು (ಆಡಿಯೋ-ವಿಶುಯಲ್) ಮತ್ತು ಅಗತ್ಯ ಉಪಕರಣಗಳನ್ನು ಒಳಗೊಂಡಿರುವ ‘ಚೌಪಾಲ್ ಕಿಟ್’ಗಳನ್ನು ವಿತರಿಸಲಾಗುತ್ತದೆ. ದೇಶದ ೧೦೦ ಮಹತ್ವಾಕಾಂಕ್ಷೆ ಕರಕುಶಲ ಜಿಲ್ಲೆಗಳಲ್ಲಿ ಈ ಚೌಪಾಲ್ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಈ ಕಾರ್ಯಕ್ರಮವು ಕರಕುಶಲ ಸಂಪ್ರದಾಯಗಳ ಜಾಗೃತಿ ಮತ್ತು ಸುಸ್ಥಿರ ಕ್ಲಸ್ಟರ್‌ಗಳ ರಚನೆಗೆ ಸಹಾಯ ಮಾಡುತ್ತದೆ.

Related posts

ಸೋಣಂದೂರು: ಜಿಲ್ಲಾಮಟ್ಟದ ಪುರುಷರ 55 ಕೆಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟ

Suddi Udaya

ಬೆಳ್ತಂಗಡಿ ಸಂಜಯ್ ಗ್ಲೋಬಲ್ ಫೌಂಡೇಶನ್ ಇದರ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಅಯೋಧ್ಯೆ ನಗರದ ಶ್ರೀ ರಾಮ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಫಲ್ಗುಣಿ ಮಹಿಳಾ ಮಂಡಳಿ ವತಿಯಿಂದ ರಾಮತಾರಕ ಮಂತ್ರ ಪಠಣ ಹಾಗೂ ಹರಿಕಥಾ ಸತ್ಸಂಗ

Suddi Udaya

ತಹಶೀಲ್ದಾರ್ ಆದೇಶದ ಬೆನ್ನಲ್ಲೇ ಅನಧಿಕೃತ ಕಟ್ಟಡ ತೆರವು

Suddi Udaya

ಶಿವಮೊಗ್ಗದಲ್ಲಿ ಬಿಎಮ್.ಎಸ್ ಕುಟುಂಬ ಸಂಗಮ: ದ.ಕ. ಜಿಲ್ಲೆಯಿಂದ 200ಕ್ಕೂ ಹೆಚ್ಚು ಕಾರ್ಯಕರ್ತರ ಭಾಗಿ

Suddi Udaya

ಬಂದಾರು ಬಟ್ಲಡ್ಕ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ಆಚರಣೆ

Suddi Udaya
error: Content is protected !!