November 9, 2026
ನಿಧನ

ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮಾಚಾರಿ ಮುಂಡಾಜೆ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ: ಜೆಡಿಎಸ್ ಪಕ್ಷದ ಬೆಳ್ತಂಗಡಿ ತಾಲೂಕಿನ ಹಿರಿಯ ಕಟ್ಟಾಳು, ಅನೇಕ‌ ವರ್ಷಗಳಿಂದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಮುಂಡಾಜೆ ಗ್ರಾಮದ ಒಂಜರೆಬೈಲು ನಿವಾಸಿ ರಾಮಾಚಾರಿ (68) ಅವರು ಹೃದಯಾಘಾತದಿಂದ ನ.9 ರಂದು ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೂಲತಃ ಕೇರಳದ ಕೊಟ್ಟಾಯಂ ನಿವಾಸಿಯಾಗಿದ್ದ ಅವರು ಧರ್ಮಸ್ಥಳದ ಅಜಿಕುರಿಗೆ ಬಂದಿದ್ದರು.
ಅಲ್ಲಿಂದ ಬಳಿಕ ಮುಂಡಾಜೆಗೆ ಬಂದು ನೆಲೆಸಿದ್ದರು.

ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರಾಗಿ ಕುಡಿಯುವ ನೀರು, ಗ್ರಾಮೀಣ ರಸ್ತೆ ಹಾಗೂ ಮೋರಿಗಳ ರಚನೆ ಇತ್ಯಾಧಿಯಾಗಿ ಸರಕಾರದ ಅನೇಕ ಕಾಮಗಾರಿಗಳನ್ನು ನಿರ್ವಹಿಸಿದ್ದರು‌‌. ಇತ್ತೀಚಿಗಿನ ಕೆಲ ವರ್ಷಗಳಿಂದ ಮುಂಡಾಜೆ ಗ್ರಾಮ ಪಂಚಾಯತ್ ನ ಉದ್ಯೋಗ ಮಿತ್ರರಾಗಿ (ಉದ್ಯೋಗ ಖಾತರಿ) ಸೇವೆ ಸಲ್ಲಿಸುತ್ತಿದ್ದರು.
ಕೆಲದಿನಗಳ ಹಿಂದೆ ಅನಾರೋಗ್ಯ ಕಾಣಿಸಿಕೊಂಡು ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದರು. ಮೂರು ದಿನಗಳ ಹಿಂದೆ ಮತ್ತೆ ಅನಾರೋಗ್ಯ ಕಾಣಸಿಕೊಂಡು ಆಸ್ಪತ್ರೆಗೆ ತೆರಳಿದ್ದವರಿಗೆ ಸೋಮವಾರ ಬಳಗ್ಗಿನ ಜಾವಾ ಹೃದಯಾಘಾತವಾಗಿ ಸಾವನ್ನಪ್ಪಿದರು.

ಮೃತರು ಪತ್ನಿ ಚಂದ್ರಾವತಿ, ಮಕ್ಕಳಾದ ಮಧುಸೂಧನ್, ಸುಭಾಷ್ ಮತ್ತು ಗುರುರಾಜ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಅವರ ಮೃತದೇಹ 8.00 ಗಂಟೆಗೆ ಮಂಗಳೂರಿನಿಂದ ಹೊರಟು ಮುಂಡಾಜೆ ಗ್ರಾಮದ ಒಂಜರೆಬೈಲು ಮನೆಗೆ ತರಲಾಗುವುದು. ಸಾರ್ವಜನಿಕ ದರ್ಶನದ ಬಳಿಕ ಒಂಜರೆಬೈಲಿನ ಸ್ವಂತ ಜಾಗದಲ್ಲೇ ಅಂತ್ಯಸಂಸ್ಕಾರ ನಡಸಲಾಗುವುದು ಎಂದು ಮನೆಯವರು ತಿಳಿಸಿದ್ದಾರೆ.

Related posts

ಮಿತ್ತಬಾಗಿಲು: ವಿಷಸೇವಿಸಿ ಆತ್ಯಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ಮುಂಡಾಜೆ ಗೋಪಾಲ ಶಾಸ್ತ್ರಿ ನಿಧನ

Suddi Udaya

ನಡ ಗ್ರಾಮದ ಕೊಯ್ಯಗುಡ್ಡೆ ನಿವಾಸಿ ಜಯರಾಮ ಗೌಡ ನಿಧನ

Suddi Udaya

ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ, ಬೆಳ್ತಂಗಡಿ ಗುರುದೇವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಸರಕಾರದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿದ್ದ ಕೆ. ವಸಂತ ಬಂಗೇರ ವಿಧಿವಶ

Suddi Udaya

ಗೇರುಕಟ್ಟೆ ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲರು ವಿ. ಲಕ್ಷ್ಮೇ ಗೌಡ ಹೃದಯಾಘಾತದಿಂದ ನಿಧನ

Suddi Udaya

ನಿಡ್ಲೆ: ವಿಶ್ವನಾಥ ಪೂಜಾರಿ ನಿಧನ

Suddi Udaya
error: Content is protected !!