ಬೆಳ್ತಂಗಡಿ; ಜೆಡಿಎಸ್ ಪಕ್ಷದ ಬೆಳ್ತಂಗಡಿ ತಾಲೂಕಿನ ಹಿರಿಯ ಕಟ್ಟಾಳು, ಅನೇಕ ವರ್ಷಗಳಿಂದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಮುಂಡಾಜೆ ಗ್ರಾಮದ ಒಂಜರೆಬೈಲು ನಿವಾಸಿ ರಾಮಾಚಾರಿ (68) ಅವರು ಹೃದಯಾಘಾತದಿಂದ ನ.9 ರಂದು ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಕೇರಳದ ಕೊಟ್ಟಾಯಂ ನಿವಾಸಿಯಾಗಿದ್ದ ಅವರು ಧರ್ಮಸ್ಥಳದ ಅಜಿಕುರಿಗೆ ಬಂದಿದ್ದರು. ಅಲ್ಲಿಂದ ಬಳಿಕ ಮುಂಡಾಜೆಗೆ ಬಂದು ನೆಲೆಸಿದ್ದರು. ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರಾಗಿ ಕುಡಿಯುವ ನೀರು, ಗ್ರಾಮೀಣ ರಸ್ತೆ ಹಾಗೂ ಮೋರಿಗಳ ರಚನೆ ಇತ್ಯಾಧಿಯಾಗಿ ಸರಕಾರದ ಅನೇಕ ಕಾಮಗಾರಿಗಳನ್ನು ನಿರ್ವಹಿಸಿದ್ದರು.
ಇತ್ತೀಚಿಗಿನ ಕೆಲ ವರ್ಷಗಳಿಂದ ಮುಂಡಾಜೆ ಗ್ರಾಮ ಪಂಚಾಯತ್ ನ ಉದ್ಯೋಗ ಮಿತ್ರರಾಗಿ(ಉದ್ಯೋಗ ಖಾತರಿ) ಸೇವೆ ಸಲ್ಲಿಸುತ್ತಿದ್ದರು. ಕೆಲದಿನಗಳ ಹಿಂದೆ ಅನಾರೋಗ್ಯ ಕಾಣಿಸಿಕೊಂಡು ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದರು. ಮೂರು ದಿನಗಳ ಹಿಂದೆ ಮತ್ತೆ ಅನಾರೋಗ್ಯ ಕಾಣಸಿಕೊಂಡು ಆಸ್ಪತ್ರೆಗೆ ತೆರಳಿದ್ದವರಿಗೆ ಸೋಮವಾರ ಬೆ ಳಗ್ಗಿನ ಜಾವಾ ಹೃದಯಾಘಾತವಾಗಿ ಸಾವನ್ನಪ್ಪಿದರು.ಮೃತರು ಪತ್ನಿಚಂದ್ರಾವತಿ, ಮಕ್ಕಳಾದ ಮಧುಸೂಧನ್, ಸುಭಾಷ್ ಮತ್ತು ಗುರುರಾಜ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಅವರ ಮೃತದೇಹ 8.00 ಗಂಟೆಗೆ ಮಂಗಳೂರಿನಿಂದ ಹೊರಟು ಮುಂಡಾಜೆ ಗ್ರಾಮದ ಒಂಜರೆಬೈಲು ಮನೆಗೆ ತರಲಾಗುವುದು. ಸಾರ್ವಜನಿಕ ದರ್ಶನದ ಬಳಿಕ ಒಂಜರೆಬೈಲಿನ ಸ್ವಂತ ಜಾಗದಲ್ಲೇ ಅಂತ್ಯಸಂಸ್ಕಾರ ನಡಸಲಾಗುವುದು ಎಂದು ಮನೆಯವರು ತಿಳಿಸಿದ್ದಾರೆ.















