September 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ಜೂ.28: ಕಕ್ಕಿಂಜೆಯಲ್ಲಿ ಬ್ರಿಲಿಯಂಟ್ “ಕಿಡ್ಸ್ ವರ್ಲ್ಡ್” ಶುಭಾರಂಭ: ಮುದ್ದು ಕಂದಮ್ಮಗಳ ಆರೈಕೆ, ಬೆಳಿಗ್ಗೆಯಿಂದ-ಸಂಜೆಯ ತನಕ ಆಟ-ಪಾಠ

ಚಾರ್ಮಾಡಿ: ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯ ಸೀತಾ ಕಾಂಪ್ಲೆಕ್ಸ್ನಲ್ಲಿ ಮಕ್ಕಳ ಸುರಕ್ಷತೆ ಮತ್ತು ಉತ್ತಮ ಪೋಷಣೆಯ ವಾತಾವರಣವನ್ನು ಒದಗಿಸಲಿರುವ ಬ್ರಿಲಿಯಂಟ್ ಕಿಡ್ಸ್ ವರ್ಲ್ಡ್ ಜೂ.28ರಂದು ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ವಿದ್ಯಾರಂಜಿತ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದ್ಘಾಟನೆಯನ್ನು ಗುರುವಾಯನಕೆರೆ ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ನೆರವೇರಿಸಲಿರುವರು. ಮುಖ್ಯ ಅತಿಥಿಗಳಾಗಿ ಚಾರ್ಮಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ., ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೊರಗಪ್ಪ ಗೌಡ ಅರಣೆಪಾದೆ, ಚಾರ್ಮಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಹೀಂ, ಸೀತಾ ಕಾಂಪ್ಲೆಕ್ಸ್ನ ಮಾಲಕ ಲೋಕಯ್ಯ ಗೌಡ ಭಾಗವಹಿಸಲಿರುವರು.


ಬ್ರಿಲಿಯಂಟ್ ಕಿಡ್ಸ್ ವರ್ಲ್ಡ್ನ ವಿಶೇಷತೆಗಳು:

  • 1 ವರ್ಷ ಮೇಲ್ಪಟ್ಟ ಕಂದಮ್ಮಗಳನ್ನು ಸಮಯ ಬೆಳಿಗ್ಗೆ 8ರಿಂದ ಸಂಜೆ 6ಗಂಟೆಯ ತನಕ ಆಟ-ಪಾಠಗಳೊಂದಿಗೆ ನೋಡಿಕೊಳ್ಳಲಾಗುವುದು.
  • ಎಲ್.ಕೆ.ಜಿ.ಯಿಂದ 10ನೇ ತರಗತಿವರೆಗೆ ಹಾಗೂ ಪಿಯುಸಿ ಕಾಮರ್ಸ್ಗೆ ಟ್ಯೂಷನ್ ಅನ್ನು ಕೊಡಲಾಗುವುದು.
  • 10ನೇ ತರಗತಿಗೆ ಪ್ರತ್ಯೇಕ ವಿಕೇಂಡ್ ಬ್ಯಾಚ್‌ಗಳನ್ನು ನಡೆಸಲಾಗುವುದು.

ಮುದ್ದು ಕಂದಮ್ಮಗಳ ಆರೈಕೆ ನಮ್ಮ ಜವಾಬ್ದಾರಿ:
ನಮ್ಮ ಸಂಸ್ಥೆಯು ಎಲ್.ಕೆ.ಜಿ.-10ನೇ ತರಗತಿ ಹಾಗೂ ಪಿಯುಸಿ ಕಾಮರ್ಸ್ ವಿಭಾಗಕ್ಕೆ ಟ್ಯೂಷನ್ ಅನ್ನು ನಡೆಸುತ್ತಾ ಬರುತ್ತಿದ್ದು, ಯಶಸ್ವಿ ಒಂದು ವರ್ಷವನ್ನು ಪೂರೈಸಿದೆ. ಪ್ರಸ್ತುತ ವರ್ಷದಲ್ಲಿ ವೃತ್ತಿ ಬದುಕಿನಲ್ಲಿ ಕಾರ್ಯನಿರತರಾಗಿರುವ ಎಳೆಯ ಮಕ್ಕಳ ಪೋಷಕರಿಗೆ ರಿಲೀಫ್ ನೀಡಲು, ಮುದ್ದು ಕಂದಮ್ಮಗಳನ್ನು ಆರೈಕೆ ಮಾಡುವ ಹೊಣೆಗಾರಿಕೆಯನ್ನು ಹೊರುವ “ಬ್ರಿಲಿಯಂಟ್ ಕಿಡ್ಸ್ ವರ್ಲ್ಡ್” ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ. ಕಳೆದೊಂದು ವರ್ಷಗಳಿಂದ ನೀಡಿದ ಪ್ರೀತಿ, ಪ್ರೋತ್ಸಾಹ ಬ್ರಿಲಿಯಂಟ್ ಕಿಡ್ಸ್ ವರ್ಲ್ಡ್ ಮೇಲು ಇರಲಿ ಎಂದು ಕೋರುತ್ತೇನೆ.
-ವಿದ್ಯಾ ರಂಜಿತ್, ಮುಖ್ಯಸ್ಥರು, ಬ್ರಿಲಿಯಂಟ್ ಕಿಡ್ಸ್ ವರ್ಲ್ಡ್

Related posts

ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ

Suddi Udaya

ಸಾಮಾಜಿಕ & ಶೈಕ್ಷಣಿಕ ಸಮೀಕ್ಷೆ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗೆ ಮನವಿ

Suddi Udaya

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆ: ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಶಾಸಕ ಹರೀಶ್ ಪೂಂಜ ರವರ ಸೇವಾರ್ಥದಲ್ಲಿ 108 ಸೀಯಾಳಭಿಷೇಕ

Suddi Udaya

ಇಂದಬೆಟ್ಟು: ಅತಿಕ್ರಮಣ ತೆರವುಗೊಳಿಸಲು ತಹಶೀಲ್ದಾರ್ ಮಾಡಿದ ಪ್ರಕ್ರಿಯೆಯನ್ನು ರದ್ದುಗೊಳಿಸಿದ ಹೈಕೋರ್ಟು

Suddi Udaya

ದೇಲಂಪುರಿ ಶ್ರೀ ಮಹಾಗಪತಿ ದೇವಸ್ಥಾನಕ್ಕೆ ವೀರಮ್ಮ ಸಂಜೀವ ಸಾಲಿಯಾನ್ ರವರಿಂದ ಮರದ ಕುರ್ಚಿ ಕೊಡುಗೆ

Suddi Udaya

ತಾಲೂಕು ಮಟ್ಟದ ಎರಡು ದಿನದ ತುಳು ಸಾಹಿತ್ಯ ರಚನಾ ಕಮ್ಮಟದ ಸಮಾರೋಪ

Suddi Udaya
error: Content is protected !!