24.2 C
ಪುತ್ತೂರು, ಬೆಳ್ತಂಗಡಿ
September 25, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿ

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಅಪ್ರಾಪ್ತ ಬಾಲಕರ ಮೇಲೆ ಪ್ರಕರಣ ದಾಖಲು

ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5.6 ವರ್ಷದ ಮಗುವಿನ ಮೇಲೆ ಎರಡು ಮಂದಿ ಅಪ್ರಾಪ್ತ ಬಾಲಕರು ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಬೆಳಕಿಗೆ ಬಂದಿದ್ದು ಬಾಲಾರೋಪಿಗಳ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ.

2023 ರಲ್ಲಿ ಸಂತ್ರಸ್ತ ಬಾಲಕಿ 5.6 ವರ್ಷದ ಸಂದರ್ಭ ಈ ಕೃತ್ಯ ನಡೆದಿದ್ದು ಸಂತ್ರಸ್ತ ಮಗುವಿನ ಸಂಬಂಧಿ ಹಾಗೂ ಸ್ಥಳೀಯ ಬಾಲಕ ಜೊತೆಗೂಡಿ ಆಕೆಯ ಮೇಲೆ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾರೆ. ಆರೋಪಿಗಳಲ್ಲಿ ಒರ್ವನನ್ನು(16) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೋರ್ವ ಆರೋಪಿ ಅಪ್ರಾಪ್ತ ಬಾಲಕ(18) ಮುಂಬಯಿ ನಗರಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಮೊಬೈಲ್ ಫೋನ್ ಗೆಳೆಯನಿಗೆ ನೀಡಿದ ಸಮಯದಲ್ಲಿ ಅದರಲ್ಲಿ ಸೆರೆ ಹಿಡಿಯಲಾದ ದೃಶ್ಯಾವಳಿಗಳನ್ನು ಗಮನಿಸಿ ಸ್ನೇಹಿತ ಈ ವಿಚಾರವನ್ನು ಸಂತ್ರಸ್ತ ಮಗುವಿನ ತಾಯಿಗೆ ವಿಚಾರ ಮುಟ್ಟಿಸಿದ ಸಂದರ್ಭ ಪ್ರಕರಣ ಬೆಳಕಿಗೆ ಬಂದು ಅವರು ವೇಣೂರು ಪೊಲೀಸ್ ಠಾಣೆಗೆ ಜೂ.23ರಂದು ದೂರು ನೀಡಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಕಲಂ 376,376AB,376DB,506 ಜೊತೆಗೆ 34 IPC ಮತ್ತು ಕಲಂ 6 ಪೋಕ್ಸೋ ಕಾಯಿದೆ-2012 ರಂತೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Related posts

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಶಶಿಧರ್ ಶೆಟ್ಟಿ ನವಶಕ್ತಿ ಆಯ್ಕೆ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ಡಾ. ಶ್ಯಾಮ ಪ್ರಸಾದ್ ಮುಖರ್ಜಿರವರ 125 ನೇ ಜನ್ಮದಿನಾಚರಣೆ

Suddi Udaya

ಬೆಳ್ತಂಗಡಿ: ಅಂಬ್ಯೂಲೆನ್ಸ್ ಚಾಲಕನ ಮೇಲೆ ಹಲ್ಲೆ

Suddi Udaya

ಉಜಿರೆ: ಸರಳ ಸಂಸ್ಕೃತ ವ್ಯಾಕರಣ ಪುಸ್ತಕ ಬಿಡುಗಡೆ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ: ಮಹಾರಥೋತ್ಸವ: ಅರುಣ್ ಕುಮಾರ್ ಪುತ್ತಿಲ ಭಾಗಿ

Suddi Udaya

ಅಂಡಿಂಜೆ ಗ್ರಾ.ಪಂ. ಕಾರ್ಯದರ್ಶಿ ಶ್ರೀಮತಿ ಚಂಪಾ ನಿಧನ

Suddi Udaya
error: Content is protected !!