August 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದ ಮಹಾಸಭೆ ಹಾಗೂ ಒಕ್ಕೂಟ ಬಲವರ್ಧನೆ ತರಬೇತಿ

ಬೆಳ್ತಂಗಡಿ : ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟ ನೇತೃತ್ವದಲ್ಲಿ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ‌ಹಾಗೂ ಒಕ್ಕೂಟ ಬಲವರ್ಧನೆ ತರಬೇತಿಯನ್ನು ಜೂ.25 ರಂದು ಸಾನ್ತೋಮ್ ಟವರ್ ಬೆಳ್ತಂಗಡಿ ಇಲ್ಲಿ ಆಯೋಜಿಸಲಾಗಿತ್ತು.

ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಎಲಿಯಮ್ಮ ತೋಮಸ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮಹಿಳಾ ಸಬಲೀಕರಣ ಯೋಜನೆಯ ಸಂಯೋಜಕಿ ಶ್ರೀಮತಿ ಸಿಸಿಲ್ಯಾ ತಾವ್ರೊರವರು ಒಕ್ಕೂಟಗಳ ಸದಸ್ಯರು ನಾಯಕತ್ವ ವಹಿಸಿ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಮುಂದಾಗಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಡಿ.ಕೆ.ಆರ್. ಡಿ. ಎಸ್ ಸಂಸ್ಥೆಯ ನಿರ್ದೇಶಕರಾದ ವಂ.ಫಾ| ಆದರ್ಶ್ ಪಿ.ಎಸ್ ರವರು ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಸಮಿತಿ ಸದಸ್ಯರ ಜವಾಬ್ದಾರಿಗಳು ಮತ್ತು ಕರ್ತವ್ಯಗಳು ಮತ್ತು ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡಿದರು. 2026 ರಿಂದ 2029 ರವರೆಗಿನ ಸ್ನೇಹ ಕಿರಣ್ ಜಿಲ್ಲಾ ಒಕ್ಕೂಟದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಉಷಾ ಜೋಯ್, ಉಪಾಧ್ಯಕ್ಷರಾಗಿ ಫಿಲೋಮಿನ ಸಿಜೆ, ಕಾರ್ಯದರ್ಶಿಯಾಗಿ ವೈಶಾಲಿ, ಜೊತೆ ಕಾರ್ಯದರ್ಶಿಯಾಗಿ ಚಂದನ ಕೋಶಾಧಿಕಾರಿಯಾಗಿ ಮಂಜುಳ ಜಾನ್ ಹಾಗೂ ಸಮಿತಿ ಸದಸ್ಯರಾಗಿ ಮಿನಿ ತೋಮಸ್, ಉಷಾ, ಡೈಸಿ, ಪ್ರಿನ್ಸಿ ಇವರನ್ನು ಆಯ್ಕೆ ಮಾಡಲಾಯಿತು. ಪ್ರಿನ್ಸಿ ಸ್ವಾಗತಿಸಿ, ಜಿನ್ಸಿ ರಾಜೇಶ್ ವಂದಿಸಿದರು. ಸ್ನೇಹ ಕಿರಣ್ ಒಕ್ಕೂಟದ 18 ಸದಸ್ಯರು ಭಾಗವಹಿಸಿದ್ದರು.

Related posts

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಆಡಳಿತ ಮಂಡಳಿಯ ಚುನಾವಣೆ: ಅಂಡಿಂಜೆಯಲ್ಲಿ ಸಹಕಾರ ಭಾರತಿ ಸಭೆ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನೂತನ ಪ್ರಾಚಾರ್ಯರಾಗಿ ಡಾ.ವಿಶ್ವನಾಥ ಪಿ. ಅಧಿಕಾರ ಸ್ವೀಕಾರ

Suddi Udaya

ಜ.25: ಉಜಿರೆ ವಿಜಯನಗರ ಅಜಿತ್‌ನಗರ (ಕಲ್ಲೆ) ದಲ್ಲಿ ಶ್ರೀ ವನದುರ್ಗಾ, ಶ್ರೀ ನಾಗರಕ್ತೇಶ್ವರಿ ಸಾನಿಧ್ಯ ಕ್ಷೇತ್ರದಲ್ಲಿ ವಾರ್ಷಿಕ ಆರಾಧನೆ

Suddi Udaya

ಮುಡಿಪು ಜವಾಹರ್ ನವೋದಯ ಶಾಲೆಗೆ ಎಸ್.ಡಿ.ಎಂ ಶಾಲೆಯ ವಿದ್ಯಾರ್ಥಿ ಕು| ಯತಿಕ್ ಕೆ. ಎಸ್ ಆಯ್ಕೆ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ: ತಡೆ ನೀಡಲು ನಿರಾಕರಿಸಿದ ಹೈಕೋರ್ಟ್

Suddi Udaya

ಸಾವ್ಯ ಶುಭೋದಯ ಹಿಂದೂ ಸೇವಾ ಟ್ರಸ್ಟ್ ವತಿಯಿಂದ 15ನೇ ವರ್ಷದ ಶನಿಪೂಜೆ

Suddi Udaya
error: Content is protected !!