24.2 C
ಪುತ್ತೂರು, ಬೆಳ್ತಂಗಡಿ
September 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ಗ್ರಾಮೀಣ ಮಟ್ಟದ ಪುಸ್ತಕೋತ್ಸವ ಪುಸ್ತಕ ಪ್ರದರ್ಶನ ಮತ್ತು ಮಾರಾಟ

ಗುರುವಾಯನಕೆರೆ ಶ್ರೀ ಶಾರದಾ ಕಲಾಮಂಟಪ ಗೆಳೆಯರ ಬಳಗ ಇದರ ಆಶ್ರಯದಲ್ಲಿ ಜ್ಞಾನ ಗಂಗಾ ಪುಸ್ತಕ ಮಳಿಗೆ ಪುತ್ತೂರು ಇದರ ಸಹಯೋಗದೊಂದಿಗೆ ಜೂ.26ರಿಂದ 28 ರವರೆಗೆ ನಡೆಯುವ ಗ್ರಾಮೀಣ ಮಟ್ಟದ ಪುಸ್ತಕೋತ್ಸವ, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಶ್ರೀನಾಥ್ ಎಂ ಪಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ, ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಪುಸ್ತಕ ಓದುವವರು ವಿರಳವಾಗುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಗ್ರಾಮೀಣ ಮಟ್ಟದ ಪುಸ್ತಕೋತ್ಸವ ಆಯೋಜನೆಗೊಂಡಿರುವುದು ಶ್ಲಾಘನೀಯವಾಗಿದೆ. ಪ್ರತಿ ಶಾಲಾ ಕಾಲೇಜುಗಳಲ್ಲಿ ಇಂತಹ ಪುಸ್ತಕ ಪ್ರದರ್ಶನ ನಡೆದರೆ ವಿದ್ಯಾರ್ಥಿಗಳು ಓದುವ ಅಭಿರುಚಿಯನ್ನು ಹೊಂದಲು ಸಹಾಯಕವಾಗುತ್ತದೆ. ಗ್ರಾಮೀಣ ಮಟ್ಟದಲ್ಲಿ ಮನೆಮನೆಗೆ ಪುಸ್ತಕ ತಲುಪಿಸುವ ಯೋಜನೆಗಳು ಕಾರ್ಯಗತವಾಗಬೇಕಾಗಿದೆ ಎಂದರು.

ಮುಖ್ಯ ಅತಿಥಿಗಳಾದ ಪುಂಜಾಲಕಟ್ಟೆ ಸರಕಾರಿ ಪ್ರೌಢ ಶಾಲಾ ಶಿಕ್ಷಕರಾದ ಧರಣೇಂದ್ರ ಜೈನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪುಸ್ತಕ ಓದುವ ಅಭಿರುಚಿಯನ್ನು ಹೆಚ್ಚಿಸುವ ಸಲುವಾಗಿ ಕರ್ನಾಟಕ ಸರಕಾರವು ಕೆಲವೊಂದು ಯೋಜನೆಗಳನ್ನು ಹಾಕಿಕೊಂಡಿದ್ದು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಇದರಿಂದ ಬರಹಗಾರರು ಹಾಗೂ ಪುಸ್ತಕ ಪ್ರಕಟಿಸುವವರಿಗೆ ಸಹಾಯಕವಾಗುತ್ತದೆ ಎಂದರು.

ಗುರುವಾಯನಕೆರೆ ಶಾರದಾ ಗೆಳೆಯರ ಬಳಗದ ಅಧ್ಯಕ್ಷ ತಿಲಕರಾಜ್, ಶಾರದಾ ಭಜನ ಮಂಡಳಿಯ ನಿಕಟ ಪೂರ್ವ ಅಧ್ಯಕ್ಷ ಶ್ರೀಮತಿ ರೀತಾ ವೈ ಆಚಾರ್ಯ, ಕಾರ್ಯಕ್ರಮದ ಆಯೋಜಕ ದೇವಿಪ್ರಸಾದ್ ಆಚಾರ್ಯ ಗುರುವಾಯನಕೆರೆ, ಡಾ ವೇಣುಗೋಪಾಲ ಶರ್ಮ, ಕುವೆಟ್ಟು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮಂಜುನಾಥ ಕುಂಬಳೆ ಉಪಸ್ಥಿತರಿದ್ದರು.
ಆನಂದ ಕೋಟ್ಯಾನ್ ಸ್ವಾಗತಿಸಿದರು. ಶ್ರೀಮತಿ ಸುಧಾ ಆರ್ ಸಾಲಿಯಾನ್ ಧನ್ಯವಾದವಿತ್ತರು. ಉಪನ್ಯಾಸಕ ಮಹಾಬಲ ಗೌಡ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಶಾಖೆಯ ಹತ್ತನೇ ವರ್ಷದ ಆಚರಣೆ

Suddi Udaya

ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿ ವಿವೇಕ್ ಎನ್ ಡಿ ಎ ಕ್ಲಿಯರ್

Suddi Udaya

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ತುಳುವಿಗೆ ಆಡಳಿತ ಭಾಷೆ ಸ್ಥಾನಮಾನ ಕರಾವಳಿಯ ಭಾಷೆ–ಸಂಸ್ಕೃತಿಗೆ ಸಿಕ್ಕ ಗೌರವ: ಅನಿಲ್ ಕುಮಾರ್ ಯು

Suddi Udaya

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ‘ಸ್ಫಟಿಕ’ ವಿದ್ಯಾರ್ಥಿ ಸಂಘ ಉದ್ಘಾಟನಾ ಸಮಾರಂಭ

Suddi Udaya

ಕೊಕ್ಕಡ: ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಬಿರುಸಿನ ಮತದಾನ

Suddi Udaya
error: Content is protected !!