25 C
ಪುತ್ತೂರು, ಬೆಳ್ತಂಗಡಿ
September 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಜೈನ್ ಮಿಲನ್ ಮಾಸಿಕ ಸಭೆ

ಬೆಳ್ತಂಗಡಿ : ಜೈನ್ ಮಿಲನಿನ ಮಾಸಿಕ ಕಾರ್ಯಕ್ರಮವು ಶ್ರೀ ಧ.ಮಂ.ಪದವಿ ಪೂರ್ವ ಕಾಲೇಜಿನಲ್ಲಿ ಜರಗಿತು. ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಶ್ರೀ ಧ.ಮಂ.ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸ ಕರಾದ ಡಾ.ಮಹಾವೀರ ಜೈನ ಮಾತನಾಡಿ ಜೈನಧರ್ಮದ ಕರ್ಮ, ಅಹಿಂಸೆ, ಅನೇಕಾಂತಗಳೆಂಬ ಮೂರು ಪ್ರಮುಖ ಸಿದ್ಧಾಂತಗಳನ್ನು ಪ್ರಸ್ತಾಪಿತಸುತ್ತದೆ, ಇದರಲ್ಲಿ ಕರ್ಮಸಿದ್ಧಾಂತ ಪ್ರಧಾನವಾಗಿದೆ. ಜೀವಿಗಳ ಬದುಕಿನ ಎಲ್ಲಾ ಸುಖ, ದುಃಖ ಸಾವು, ನೋವುಗಳ ಅನುಭವಗಳಿಗೆ ಅವರವರ ಆತ್ಮನಿಗೆ ಬಂಧವಾದ ಕರ್ಮವೇ ಕಾರಣವಾಗಿದೆ, ಕರ್ಮಗಳು ಸ್ವಯಾರ್ಜಿತವಾಗಿದೆ. ಎಂಟು ಕರ್ಮಗಳು ಮುಖ್ಯವಾಗಿದ್ದು ಇದನ್ನು 148 ಬೇಧಗಳಾಗಿ ವಿಂಗಡಿಸಲಾಗಿದೆ‌. ಇದರಲ್ಲಿ ಮುಖ್ಯವಾದ ಏಳು ಕರ್ಮಗಳನ್ನು ಜೀವಿಯು ತನ್ನ ಸ್ವಪ್ರಯತ್ನನಿಂದ ಶುಭ ಅಥವಾ ಅಶುಭಗಳಾಗಿ ಪರಿವರ್ತಿಸಬಹುದು ಆದರೆ ಆಯುಕರ್ಮವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಭಾರತೀಯ ಜೈನ್ ಮಿಲನ್ ವಲಯ -8ರ ನಿರ್ದೇಶಕರಾದ ಬಿ. ಸೋಮಶೇಖರ್ ಶೆಟ್ಟಿ ಮಾತನಾಡಿ ಸಂಘಟನೆಯ ಮಹತ್ವದ ಮತ್ತು ಸದಸ್ಯರ ಸಕ್ರೀಯ ಭಾಗವಹಿಸುವಿಕೆಯ ಬಗ್ಗೆ ತಿಳಿಸಿದರು. ಬೆಳ್ತಂಗಡಿ ಜೈನ್ ಮಿಲನ್ ಅಧ್ಯಕ್ಷರಾದ ಡಾ. ಸನ್ಮತಿ ಕುಮಾರ್ ಬೆಳ್ತಂಗಡಿ ಜೈನ್ ಮಿಲನಿನ ಮಂದಿನ ಕಾರ್ಯಯೋಜನೆಯು ಬಗ್ಗೆ ತಿಳಿಸಿದರು.

ಜ್ಯೋತಿ ಕುಮಾರಿ ಎಂ. ಎನ್ ಹಿಂದಿನ ಸಭೆಯ ವರದಿಯನ್ನು ಮಂಡಿಸಿದರು. ರವೀಶ್ ಕುಮಾರ್ ಅತಿಥಿಗಳ ಪರಿಚಯವನ್ನು ಮಾಡಿದರು. ಬೆಳ್ತಂಗಡಿ ಜೈನ್ ಮಿಲನ್ ಕಾರ್ಯದರ್ಶಿ ಸುಮನ್ ಯು. ಎಸ್ ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಕುಮಾರ್ ಜೈನ್ ವಂದಿಸಿದರು.

Related posts

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಪ್ರಣಾಳಿಕೆಯಲ್ಲಿರುವ ಅಂಶಗಳೇನು?

Suddi Udaya

ಶಿಶಿಲ : ರಸ್ತೆಗೆ ಬಿದ್ದ ಮರ , ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಮರ ತೆರವು

Suddi Udaya

ಮಚ್ಚಿನ ಸ.ಹಿ.ಪ್ರಾ. ಶಾಲೆಗೆ ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಭೇಟಿ ; ಶೌಚಾಲಯ ಕಾಮಗಾರಿ ಪರಿಶೀಲನೆ

Suddi Udaya

ಉರುವಾಲು ಕಾರಿಂಜ ಶ್ರೀ ವನಶಾಸ್ತವು ಮತ್ತು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರಿಗೆ ಮನವಿ ಸಲ್ಲಿಸಿ ಸಮಾಲೋಚನೆ

Suddi Udaya

ಗುರುವಾಯನಕೆರೆ: 30ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ: ಗೌರವಾಧ್ಯಕ್ಷರಾಗಿ ಶಶಿರಾಜ್ ಶೆಟ್ಟಿ, ಅಧ್ಯಕ್ಷರಾಗಿ ರಿಜೇಶ್ ಕುಮಾರ್ ಆಯ್ಕೆ

Suddi Udaya

ಎಸ್ ಡಿ ಎಂ ಪಾಲಿಟೆಕ್ನಿಕ್ ನಲ್ಲಿ ಪ್ರೌಢ ಶಾಲಾ ಶಿಕ್ಷಕರಿಗೆ ತಾಂತ್ರಿಕ ಶಿಕ್ಷಣದ ಅವಶ್ಯಕತೆಯ ಕುರಿತು ಕಾರ್ಯಾಗಾರ

Suddi Udaya
error: Content is protected !!