25 C
ಪುತ್ತೂರು, ಬೆಳ್ತಂಗಡಿ
September 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಯುವವಾಹಿನಿ ವೇಣೂರು ಘಟಕದ ವಿನೂತನ ಯೋಜನೆ “ಬೆಳಕು” ಕಾರ್ಯಕ್ರಮ

ವೇಣೂರು : ಯುವವಾಹಿನಿ ವೇಣೂರು ವಿನೂತನ ಯೋಜನೆ “ಬೆಳಕು” ಕಾರ್ಯಕ್ರಮ ಜೂ.26 ರಂದು ಪೇರಿ – ಹೊಸಂಗಡಿ ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿ ನಡೆಯಿತು. ಸಭೆಯು ಮೊದಲಿಗೆ ಪ್ರಾರ್ಥನೆಯೊಂದಿಗೆ ಆರಂಭಗೊಂಡು ನಂತರ ಸದಸ್ಯತ್ವ ಮತ್ತು ಆಸರೆ ಯೋಜನೆಯ ಬಗ್ಗೆ ಚರ್ಚಿಸಿ ಬಡ ಕುಟುಂಬದ ವಿದ್ಯಾರ್ಥಿಗೆ ಸಹಾಯಧನ ಕೊಡುವುದುದೆಂದು ನಿರ್ಧರಿಸಲಾಯಿತು.

ಘಟಕದ ಕೋಶಾಧಿಕಾರಿ ಸತೀಶ್ ಚಿಗುರು ಇವರ ಪ್ರಾಯೋಜಕತ್ವದಲ್ಲಿ ಕೊಡಮಾಡಲ್ಪಟ್ಟ ಶ್ರೀಮತಿ ಬೇಬಿ ಪೇರಿ -ಹೊಸಂಗಡಿ ಬೆಳ್ತಂಗಡಿ ತಾಲೂಕು ಇವರ ಮನೆಗೆ ಉಚಿತ ವಿದ್ಯುತ್ ಸಂಪರ್ಕಕ್ಕೆ ಘಟಕದ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್ ನಾರಾವಿ, ಕಾರ್ಯದರ್ಶಿ ಶ್ರೀಮತಿ ದಕ್ಷಾ ಅಂಬಲಾ ಅಂಡಿಂಜೆ, ಮಾಜಿ ಅಧ್ಯಕ್ಷರುಗಳಾದ ನಿತೀಶ್ ಹೆಚ್, ನವೀನ್ ಪಚ್ಚೇರಿ, ಅರುಣ್ ಕೋಟ್ಯಾನ್, ಶುಭಕರ ಪೂಜಾರಿ ಸಾವ್ಯ ಮತ್ತು ವೇಣೂರು ಬಿಲ್ಲವ ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್ ಪೊಕ್ಕಿ, ಘಟಕದ ಸಲಹೆಗರಾದ ರಾಕೇಶ್ ಮೂಡುಕೋಡಿ, ಪೇರಿ -ಹೊಸಂಗಡಿ ಶ್ರೀ ಶಾರದಾಂಭ ಭಜನ ಮಂದಿರದ ಅಧ್ಯಕ್ಷರಾದ ಆನಂದ್ ಬಂಗೇರ ಮತ್ತು ಕಾರ್ಯದರ್ಶಿ ಸುಜಿತ್ ಕುಮಾರ್ , ಸದಸ್ಯರಾದ , ರಶ್ಮಿ ಹರಿಪ್ರಸಾದ್, ಘಟಕದ ಪ್ರವೀಣ್ ಕೋಟ್ಯಾನ್ ನಾರಾವಿ, , ಮಹಿಳಾ ನಿರ್ದೇಶಕರುಗಳಾದ ಗುಣವತಿ ಡಿ, ಜಯಂತಿ, ಸಂಗಮ್ ಪೇರಿ, ಸೂರಜ್ ಪೇರಿ, ಅಂಕಿತ್ ಬಂಗೇರ ಕೊಡಿಂಗೇರಿ, ಬಾಬು ಕೋಟ್ಯಾನ್, ಸನತ್, ಸಂದೀಪ್, ಸಂದೇಶ್ ಹಾಗೂ ಪದಾಧಿಕಾರಿಗಳ ಉಪಸ್ಥಿತಿ ಯಲ್ಲಿ ಚಾಲನೆಯನ್ನು ನೀಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

ಘಟಕದ ಕೋಶಾಧಿಕಾರಿ ಸತೀಶ್ ಚಿಗುರು ಇವರನ್ನು ಪೇರಿ -ಹೊಸಂಗಡಿ ಶ್ರೀ ಶಾರದಾಂಭ ಭಜನ ಮಂದಿರದ ಪರವಾಗಿ ಸನ್ಮಾನಿಸಲಾಯಿತು.

ಘಟಕದ ವ್ಯಕ್ತಿತ್ವ ವಿಕಾಸನ ನಿರ್ದೇಶಕರಾದ ಸುಜಿತ್ ಕುಮಾರ್ ಸ್ವಾಗತಿಸಿ, ಘಟಕದ ಕಾರ್ಯದರ್ಶಿ ಶ್ರೀಮತಿ ದಕ್ಷಾ ಅಂಬಲ ಧನ್ಯವಾದವಿತ್ತರು.

Related posts

ಶ್ರೀ ಕ್ಷೇತ್ರ ಧ.ಗ್ರಾ. ಯೋ. ಗ್ರಾಮೀಣ ಶ್ರೇಷ್ಟ್ರತ ತರಬೇತಿ ಕೇಂದ್ರದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಮತ್ತು ಕಾಲೇಜು ಕೋರ್ಸುಗಳ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

Suddi Udaya

ಧರ್ಮಸ್ಥಳಕ್ಕೆ ಬಂದಿದ್ದ ಮಹಿಳೆಯ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

Suddi Udaya

ಕುವೆಟ್ಟು ಗ್ರಾ.ಪಂ.ನಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಕಲ್ಲೇರಿಯ ಪವರ್ ಮ್ಯಾನ್ ಸಂದೀಪ್ ಎಂ ರವರು ಮಂಗಳೂರಿನ ಮಲ್ಲಿಕಟ್ಟೆ ಕಾರ್ಯ ಮತ್ತು ಪಾಲನಾ ಶಾಖೆಗೆ ಪದೋನ್ನತಿ

Suddi Udaya

ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ: ಧ್ವಜಾರೋಹಣ

Suddi Udaya
error: Content is protected !!