23.8 C
ಪುತ್ತೂರು, ಬೆಳ್ತಂಗಡಿ
September 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನೆಲ್ಯಾಡಿಯಲ್ಲಿ ಉದನೆ ವಲಯ ಮಟ್ಟದ ಮಾತೃಸಂಗಮ ‘ಫಿದೆಲಿಯುಂ–2026’

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಉದನೆ ವಲಯ ಮಟ್ಟದ ಮಾತೆಯರ ಒಕ್ಕೂಟದ ವಾರ್ಷಿಕ ಮಾತೃಸಂಗಮ ‘ಫಿದೆಲಿಯುಂ–2026’ ಕಾರ್ಯಕ್ರಮವು ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ವಂದನೀಯ ಫಾ. ಜೋಬಿ ಪುಲ್ಲಾಟ್ ಉದ್ಘಾಟಿಸಿ, ಉತ್ತಮ ಸಮಾಜ ಮತ್ತು ಕುಟುಂಬ ನಿರ್ಮಾಣದಲ್ಲಿ ಮಾತೆಯರ ಧಾರ್ಮಿಕ ಹಾಗೂ ಮೌಲ್ಯಾಧಾರಿತ ಪಾತ್ರದ ಮಹತ್ವವನ್ನು ಹೇಳಿದರು. ಇಂದಿನ ಮಕ್ಕಳ ಬೆಳವಣಿಗೆಯಲ್ಲಿ ಮಾತೆಯರು ಪ್ರೇರಕಶಕ್ತಿಯಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನಾಲ್ಕು ಮತ್ತು ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಫಾ. ರಿಜೊ ಒಡೋಪಲ್ಲಿ, ಸಿಸ್ಟರ್ ಲಿಸ್ ಮ್ಯಾಥ್ಯೂ ಎಸ್.ಎಚ್., ರೇಖಾ ಅಡ್ಡಹೊಳೆ, ಸಿಮಿ ಆರ್ಲ, ಸುಜಾ ಜೇಮ್ಸ್ ಹಾಗೂ ಫಾ. ಶಾಜಿ ಮ್ಯಾಥ್ಯೂ ವಿವಿಧ ವಿಚಾರಗಳನ್ನು ಮಂಡಿಸಿದರು.

ಮಿನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ನೆಲ್ಯಾಡಿ, ಆರ್ಲ, ಇಚಿಲಂಪಾಡಿ, ಉದನೆ, ಶಿರಾಡಿ, ಅಡ್ಡಹೊಳೆ ಹಾಗೂ ಅರಸೀನಮಕ್ಕಿ ಚರ್ಚ್‌ಗಳ ಮಾತೆಯರು ಭಾಗವಹಿಸಿದರು.

Related posts

ಬಂದಾರು: ಆದಿಪೂಜಿತ ಸಿದ್ದಿವಿನಾಯಕ ಕನ್ನಡ ಭಕ್ತಿಗೀತೆ ಆಡಿಯೋ ಬಿಡುಗಡೆ

Suddi Udaya

ಉಜಿರೆ: ಹರೀಶ್ ಭಂಡಾರಿ ನಿಧನ

Suddi Udaya

ಇಂದಬೆಟ್ಟು: ಮನೆಗೆ ನುಗ್ಗಿದ ಬೃಹತ್ ಗಾತ್ರದ ಹೆಬ್ಬಾವು

Suddi Udaya

ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಬೆಳ್ತಂಗಡಿ ಆಡಳಿತ ಸೌಧಕ್ಕೆ ಮಂಗಳೂರು ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ: ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ

Suddi Udaya

ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯ ಸಂದರ್ಭ ಸುರೇಶ ಪುತ್ತೂರಾಯರಿಗೆ ಸನ್ಮಾನ

Suddi Udaya
error: Content is protected !!