27.1 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಂಘ-ಸಂಸ್ಥೆಗಳು

ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ವತಿಯಿಂದ ಹೃದಯ ರೋಗಿಗೆ ಧನಸಹಾಯ ಹಸ್ತಾಂತರ

ಕಳೆಂಜ : ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ವತಿಯಿಂದ ಕಾರುಣ್ಯ ಸ್ಪರ್ಶಂ ಯೋಜನೆಯಡಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಚಿನ್ನಮ್ಮ, ಕೊಚ್ಚುಪರಂಬಿಲ್, ಕೆರೆಕೋಡಿ ಮನೆ ಅವರ ಚಿಕಿತ್ಸೆಗೆ ರೂ.50,000 ಧನಸಹಾಯವನ್ನು ಜೂ.28ರಂದು ಅವರ ಸೊಸೆಯಾದ ಸೌಮ್ಯ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಗಸ್ಟೀನ್ ಟಿ.ಎ. ಮಾತನಾಡಿ, “ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ನಮ್ಮ ಸಂಘಟನೆಯ ಪ್ರಮುಖ ಧ್ಯೇಯವಾಗಿದೆ. ಮುಂದೆಯೂ ಇಂತಹ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಗೌರವಾಧ್ಯಕ್ಷ ಸೆಬಾಸ್ಟಿಯನ್ ಪಿ.ಟಿ. ಅವರು, “ಸದಸ್ಯರು ಹಾಗೂ ದಾನಿಗಳ ಉದಾರ ಸಹಕಾರದಿಂದ ಈ ನೆರವು ನೀಡಲು ಸಾಧ್ಯವಾಗಿದೆ. ಸಹಕರಿಸಿದ ಎಲ್ಲರಿಗೂ ಸಂಘದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು” ಎಂದು ಹೇಳಿದರು.

ಕಾರ್ಯದರ್ಶಿ ಶಿಜೋ ಜೋಸೆಫ್ ಅವರು, “ಕಾರುಣ್ಯ ಸ್ಪರ್ಶಂ ಯೋಜನೆಗೆ ಸ್ಪಂದಿಸಿ ನೆರವು ನೀಡಿದ ಎಲ್ಲಾ ದಾನಿಗಳು, ಸದಸ್ಯರು ಹಾಗೂ ಹಿತೈಷಿಗಳ ಸಹಕಾರದಿಂದ ಈ ಮಾನವೀಯ ಕಾರ್ಯ ಯಶಸ್ವಿಯಾಗಿದೆ. ಮುಂದೆಯೂ ಅಗತ್ಯವಿರುವವರಿಗೆ ನೆರವಾಗುವ ಸಮಾಜಮುಖಿ ಕಾರ್ಯಗಳನ್ನು ಸಂಘದ ವತಿಯಿಂದ ಮುಂದುವರಿಸಲಾಗುವುದು” ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು ಉಪಸ್ಥಿತರಿದ್ದರು.

Related posts

ನಿಡ್ಲೆ: ಅಗ್ರಿಲೀಫ್ ಕುಟುಂಬದ ವತಿಯಿಂದ ರೈತರ ಜೊತೆ ವಿಶ್ವದ ಕಡೆ ರೈತ-ಸಂಸ್ಥೆ ಸಮನ್ವಯ ಸಭೆ

Suddi Udaya

ಅತ್ಯಂತ ಕುತೂಹಲ ಕೆರಳಿಸಿದ ಮಡಂತ್ಯಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಚುನಾವಣೆ : ಅಧ್ಯಕ್ಷರಾಗಿ ಜೋಯಲ್ ಗಾಡ್ಫಿ ಮೆಂಡೋನ್ಸಾ, ಹಾಗೂ ಉಪಾಧ್ಯಕ್ಷರಾಗಿ ಕಾಂತಪ್ಪ ಗೌಡ ಆಯ್ಕೆ

Suddi Udaya

ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಸೇವಾದಳ ಅಧ್ಯಕ್ಷರಾಗಿ ಇಸುಬು ಯು.ಕೆ ನೇಮಕ

Suddi Udaya

ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ವತಿಯಿಂದ ಆರ್ಥಿಕ ಸಹಾಯಧನ ವಿತರಣೆ

Suddi Udaya

ನೆರಿಯ ವಲಯದ ಭಜನಾ ಪರಿಷತ್ತಿನ ಸಭೆ

Suddi Udaya

ಮಾಲಾಡಿ ಗ್ರಾ.ಪಂ ನೂತನ ಅಧ್ಯಕ್ಷ ಪುನೀತ್ ಕುಮಾರ್ ಮತ್ತು ಸದಸ್ಯ ವಸಂತ ಪೂಜಾರಿ ಕಾಂಗ್ರೇಸ್ ಸೇರ್ಪಡೆ

Suddi Udaya
error: Content is protected !!