30.7 C
ಪುತ್ತೂರು, ಬೆಳ್ತಂಗಡಿ
September 27, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿರಾಜ್ಯ ಸುದ್ದಿವರದಿಸಂಘ-ಸಂಸ್ಥೆಗಳು

ಅಗ್ನಿವೀರ್ ಗೆ ಆಯ್ಕೆಯಾದ ಹತ್ಯಡ್ಕದ ಭರತ್‌ಗೆ ಕಪಿಲ ಕೇಸರಿ ಯುವಕ ಮಂಡಲದಿಂದ ಸನ್ಮಾನ

ಹತ್ಯಡ್ಕ: ಕೇಂದ್ರ ಸರ್ಕಾರದ ‘ಅಗ್ನಿಪಥ್’ ಯೋಜನೆಯಡಿ ಭಾರತೀಯ ಸಶಸ್ತ್ರ ಪಡೆಗೆ (ಅಗ್ನಿವೀರ್) ಆಯ್ಕೆಯಾದ ಹತ್ಯಡ್ಕ ಗ್ರಾಮದ ಹೊಸತೋಟ ಮುಂಡ್ರೆಲು ನಿವಾಸಿ ಭರತ್ ಅವರಿಗೆ ಕುಂಟಲಪಲ್ಕೆ ಕಪಿಲ ಕೇಸರಿ ಯುವಕ ಮಂಡಲದ ವತಿಯಿಂದ ಜೂ. 28ರಂದು ಅವರ ಸ್ವಗೃಹದಲ್ಲಿ ಗೌರವಪೂರ್ವಕ ಸನ್ಮಾನ ಕಾರ್ಯಕ್ರಮ ಜರುಗಿತು.

ಹೇಮಾವತಿ ಹಾಗೂ ಸುಂದರ ಗೌಡ ದಂಪತಿಯ ಪ್ರಥಮ ಪುತ್ರನಾದ ಭರತ್ ಮತ್ತು ಅವರ ತಾಯಿ ಹೇಮಾವತಿ ಅವರನ್ನು ಯುವಕ ಮಂಡಲದ ಪದಾಧಿಕಾರಿಗಳು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹತ್ಯಡ್ಕ ಗ್ರಾಮದ ನಿವೃತ್ತ ಯೋಧರಾದ ಮೋಹನ ಶೆಟ್ಟಿ ಮುದ್ದಿಗೆ ಹಾಗೂ ಮಹಾಬಲ ಎಂ ಮುದ್ದಿಗೆ ಅವರು, ತಮ್ಮ ಸೇನಾ ಅವಧಿಯ ಸ್ಮರಣೀಯ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಭರತ್ ಅವರಿಗೆ ಮುಂದಿನ ಸೇನಾ ಜೀವನಕ್ಕೆ ಶುಭ ಹಾರೈಸಿದರು.

ಕಾರ್ಯಾಗಾರದಿಂದ ಸಿಕ್ಕಿತು ಸ್ಪೂರ್ತಿ: ಸನ್ಮಾನ ಸ್ವೀಕರಿಸಿ ಮಾತನಾಡಿದ ಯುವಕ ಭರತ್, “ಈ ಹಿಂದೆ ಕಪಿಲ ಕೇಸರಿ ಯುವಕ ಮಂಡಲದ ವತಿಯಿಂದ ಸೇನೆಗೆ ಸೇರಬಯಸುವ ಯುವಕರಿಗಾಗಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಾಗಾರ ನನಗೆ ದೊಡ್ಡ ಸ್ಪೂರ್ತಿ ನೀಡಿತು. ಆ ಕಾರ್ಯಾಗಾರದಲ್ಲಿ ಸಿಕ್ಕ ಮಾರ್ಗದರ್ಶನದಿಂದಲೇ ನಾನು ಅಗ್ನಿವೀರ್ ಆಯ್ಕೆ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಯಿತು” ಎಂದು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕಪಿಲ ಕೇಸರಿ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಗೌಡ ಬೊಳ್ಳೋಡಿ, ಸಂಘಟನೆಯ ಪದಾಧಿಕಾರಿಗಳು ಹಾಗೂ ಊರಿನ ಯುವಕರು ಉಪಸ್ಥಿತರಿದ್ದರು. ಕಪಿಲ ಕೇಸರಿ ಸಂಸ್ಥೆಯ ಕಾರ್ಯದರ್ಶಿ ಸುಮಂತ್ ಗೌಡ ಅಳಕ್ಕೆ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.

Related posts

ನೆರಿಯ: ಬೈಕ್ – ಸ್ಕೂಟರ್ ಡಿಕ್ಕಿ: ಸ್ಕೂಟರ್ ಸವಾರನಿಗೆ ಗಂಭೀರ ಗಾಯ

Suddi Udaya

ಲಾಯಿಲದಲ್ಲಿ ವಾಹನ ದಟ್ಟಣೆ

Suddi Udaya

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಧ್ವಜಾರೋಹಣದೊಂದಿಗೆ ಪ್ರಾರಂಭ

Suddi Udaya

ಪಡಂಗಡಿ ಗ್ರಾ.ಪಂ. ಗ್ರಂಥಾಲಯಕ್ಕೆ ಪ್ರವೀಣ್ ರೈ ರವರಿಂದ 54 ಪುಸ್ತಕಗಳ ಕೊಡುಗೆ

Suddi Udaya

ಬೆಳ್ತಂಗಡಿ: ನೀರಿಕ್ಷಾ ಎನ್ ನಾವರ ಚಾರ್ಟರ್ಡ್ ಅಕೌಂಟೆಂಟ್ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

Suddi Udaya

ಉಜಿರೆ ಎಸ್ ಡಿ ಎಂ ತಾಂತ್ರಿಕ ಕಾಲೇಜು ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರಶಿಕ್ಷಣ ಕಾರ್ಯಕ್ರಮ

Suddi Udaya
error: Content is protected !!