22.9 C
ಪುತ್ತೂರು, ಬೆಳ್ತಂಗಡಿ
August 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಸ್.ಡಿ.ಎಂ ಪಾಲಿಟೆಕ್ನಿಕ್: ಪ್ರಾರಂಭೋತ್ಸವ ಸಮಾರಂಭ

ಉಜಿರೆ: ಉತ್ತಮ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳು ಬೇಕಾದಷ್ಟು ಸಿಗುತ್ತಾರೆ. ಆದರೆ ಉತ್ತಮ ವ್ಯಕ್ತಿತ್ವ ಹೊಂದಿರುವ ವಿದ್ಯಾರ್ಥಿಗಳು ಸಮಾಜದಲ್ಲಿ ಶಾಶ್ವತ ಗೌರವ ಪಡೆಯುತ್ತಾರೆ. ಕಲಿಯುವ ಪ್ರತಿಯೊಂದು ವಿಷಯ ನಮ್ಮ ಉದ್ಯೋಗಕ್ಕೆ ನೆರವಾಗುವುದರ ಜೊತೆಗೆ ಇಲ್ಲಿ ಬೆಳೆಸಿಕೊಳ್ಳುವ ಆತ್ಮವಿಶ್ವಾಸ, ಪ್ರಾಮಾಣಿಕತೆ, ಶಿಸ್ತು ಹಾಗೂ ಮಾನವಿಯತೆ ನಿಮ್ಮ ಇಡೀ ಜೀವನವನ್ನು ರೂಪಿಸುತ್ತದೆ ಎಂದು ಉಜಿರೆಯ ಸೋನಿಯಾ ಯಶೋವರ್ಮ ಅಭಿಪ್ರಾಯಪಟ್ಟರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರವೇಶೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಗಾಳಿ ಜೋರಾಗಿ ಬೀಸುವಾಗ ಎಲ್ಲಾ ಪಕ್ಷಿಗಳು ಮರಗಳಲ್ಲಿ ಆಸರೆ ಪಡೆಯುತ್ತವೆ. ಆದರೆ ಗರುಡ ಮಾತ್ರ ಆ ಗಾಳಿಯನ್ನು ಬಳಸಿಕೊಂಡು ಇನ್ನೂ ಎತ್ತರಕ್ಕೆ ಹಾರಡುತ್ತದೆ. ಹಾಗೆ ಸಮಸ್ಯೆಗಳು ಎಲ್ಲರಿಗೂ ಬರುತ್ತವೆ. ಆದರೆ ಅದನ್ನೇ ಅವಕಾಶವನ್ನಾಗಿ ಪರಿವರ್ತಿಸಿಕೊಂಡರೆ ನಾವು ಜೀವನದಲ್ಲಿ ಎತ್ತರಕ್ಕೆ ಬರಬಹುದು. ಹಾಗಾಗಿ ಅವಕಾಶಗಳನ್ನು ಸ್ವೀಕರಿಸಲು ಹಿಂದೆ ಸರಿಯಬೇಡಿ.

ಕಾಲೇಜು ಜೀವನ ಅಂದ್ರೆ ಕೇವಲ ತರಗತಿಯಲ್ಲ ಇದು ಸ್ನೇಹ ಕಟ್ಟುವ ಸಮಯ. ತಮ್ಮನ್ನು ತಾವೇ ಕಂಡುಕೊಳ್ಳುವ ಸಮಯ. ನಾಯಕತ್ವ ಕಲಿಯುವ ಸಮಯ, ಕನಸುಗಳನ್ನು ಗುರಿಗಳಾಗಿ ಪರಿವರ್ತಿಸುವ ಸಮಯ ಹಾಗಾಗಿ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ. ಯಾವಾಗಲೂ ಪರೀಕ್ಷೆಗಾಗಿ ಓದಬೇಡಿ ಜೀವನಕ್ಕಾಗಿ ಕಲಿಯಿರಿ. ಉದ್ಯೋಗಕ್ಕಾಗಿ ಮಾತ್ರವಲ್ಲದೆ ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿಯಾಗಿ ಎಂದು ನೂತನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ ಮಾತನಾಡಿ, ಪಾಲಿಟೆಕ್ನಿಕ್ ಎಂದರೆ ಬಹು ಕೌಶಲ್ಯವುಳ್ಳವರು. ವಿದ್ಯಾರ್ಥಿಗಳು ಬೌದ್ಧಿಕ ಸಾಮರ್ಥ್ಯದ ಜೊತೆಗೆ ಪ್ರಾಯೋಗಿಕ ಅನುಭವಗಳಲ್ಲೂ ಸಬಲರಾಗಬೇಕು . ಇಂದು ಸ್ಪರ್ಧಾತ್ಮಕ ಯುಗದಲ್ಲಿರುವುದರಿಂದ ವಿದ್ಯಾರ್ಥಿಗಳು ತಾಂತ್ರಿಕಕವಾಗಿ ಪರಿಣಿತರಾಗಿ, ಕೃಯಾತ್ಮಕ ಯೋಚನೆ ಮತ್ತು ಸಮೂಹ ಸಂವಹನ ಕಲೆಯನ್ನು ಬೆಳೆಸಿಕೊಳ್ಳಬೇಕು. ಒಂದೇ ವಿಷಯಗಳಿಗೆ ಸೀಮಿತರಾಗದೆ ಬಹುಮುಖಿ ಜ್ಞಾನವುಳ್ಳವರು ನಾವಾಗಬೇಕು. ಸಕಾರಾತ್ಮಕ ಚಿಂತನೆಗಳ ಮನೋದೈರ್ಯ ಬೆಳೆಸಿಕೊಂಡು ಸವಾಲು ಮತ್ತು ಸಮಸ್ಯೆಗಳ ನಿವಾರಣೆಯತ್ತ ಸಾಗಬೇಕು.

ಅಂತರ್ಜಾಲದ ಸಾಮಾಜಿಕ ಜಾಲತಾಣಗಳನ್ನು ಕಲಿಕೆಯ ಕೈಗನ್ನಡಿಯಾಗಿ ಬಳಸಿಕೊಂಡು, ಪ್ರತಿನಿತ್ಯ ಹೊಸ ಹೊಸ ಅಧ್ಯಾಯನದ ಕುತೂಹಲ ನಮ್ಮಲ್ಲಿ ಬೆಳೆಯಬೇಕು. ಪ್ರತಿ ಹಂತದಲ್ಲೂ ಗೌರವ ಮತ್ತು ಕೃತಜ್ಞತಾ ಭಾವವನ್ನು ಉಳಿಸಿಕೊಳ್ಳಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳವು ಹಲವು ದಶಕಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಇಲ್ಲಿನ ಪ್ರತಿಯೊಂದು ಯೋಚನೆ ಮತ್ತು ಯೋಜನೆಗಳು ಸಮಾಜಕ್ಕೆ ಮಾದರಿಯಾಗಿದೆ. ಹೊಸ ವಿದ್ಯಾರ್ಥಿಗಳು ಇಂದು ಎಸ್‌.ಡಿ.ಎಂ ಎಂಬ ಬಹುದೊಡ್ಡ ಕುಟುಂಬದ ಸದಸ್ಯರಾಗುತ್ತಿದ್ದೀರಿ ಎಂದು ಎಂದು ಶುಭ ಹಾರೈಸಿದರು.

ಸಮಾರಂಭ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಮಾತನಾಡಿ, ಪ್ರಸ್ತುತ ಶೈಕ್ಷಣಿಕ ವರ್ಷದ ವಿವಿಧ ಚಟುವಟಿಕೆಗಳು ಮತ್ತು ಸಂಸ್ಥೆ ಬೆಳೆದು ಬಂದ ರೀತಿಯನ್ನು ವಿವರಿಸಿದರು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ, ಪಠ್ಯೇತರ ಚಟುವಟಿಕೆ, ಸಾಂಸ್ಕೃತಿಕ ಚಟುವಟಿಕೆ, ಶೈಕ್ಷಣಿಕ ಭೇಟಿ, ಕ್ಯಾಂಪಸ್ ನೇಮಕಾತಿ ವಿವಿದ ಅವಕಾಶ ಕುರಿತು ಮಾಹಿತಿ ಹಂಚಿಕೊಂಡರು.

ಕಾರ್ಯಕ್ರಮದ ವೇದಿಕೆಯಲ್ಲಿ ಪಾಲಿಟೆಕ್ನಿಕ್ ಕಾಲೇಜಿನ ವ್ಯವಸ್ಥಾಪಕರಾದ ಚಂದ್ರನಾಥ್ ಜೈನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ಸಿಬ್ಬಂದಿವರ್ಗದವರು ಭಾಗಿಯಾಗಿದ್ದರು. ಅಧ್ಯಾಪಕರ ತಂಡ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮವನ್ನು ಉಪನ್ಯಾಸಕ ಶಿವಪ್ರಸಾದ್ ಸ್ವಾಗತಿಸಿ, ಉಪನ್ಯಾಸಕ ಶಂಕರ್ ಭಟ್ ವಂದಿಸಿದರು. ಕಾರ್ಯಕ್ರಮವನ್ನು ಕಾಲೇಜಿನ ಉಪನ್ಯಾಸಕ ಸಂಪತ್ ಕುಮಾರ್ ನಿರೂಪಿಸಿದರು.

Related posts

ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ 12 ವರ್ಷ: ಕಾಯರ್ತಡ್ಕ ಉಮಾಮಹೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ಚೆನ್ನೆಮಣೆ ಗೊಬ್ಬು ಪಂಥೊ ಮತ್ತು ಸಂಧಿ ಪಾರ್ದನ ಸುಗಿಪ್ಪು ಪಂಥೊದ ಸಮಾರೋಪ ಸಮಾರಂಭ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿಯ ವಿಶೇ‍ಷ ಪೂಜೆ

Suddi Udaya

ಕಲ್ಮoಜದಲ್ಲಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಉದ್ಘಾಟನೆ

Suddi Udaya
error: Content is protected !!