23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸರ್ಕಾರಿ ಇಲಾಖಾ ಸುದ್ದಿ

ಲೋಕೋಪಯೋಗಿ ಇಲಾಖೆಯಿಂದ ಅಳವಡಿಸಿದ ಬ್ಯಾನರ್‌ನಲ್ಲಿ ಎಡವಟ್ಟು

ಬೆಳ್ತಂಗಡಿ: ತಾಲೂಕಿನ ಗ್ರಾಮಗಳ ಸ್ಥಳೀಯ ಸ್ಥಳಗಳ ಸರಿಯಾದ ಮಾಹಿತಿ ಇಲ್ಲದಿದ್ದರೆ ಏನೆಲ್ಲಾ ಎಡವಟ್ಟು ಆಗುತ್ತದೆ ಎಂಬುವುದಕ್ಕೆ ಲೋಕೋಪಯೋಗಿ ಇಲಾಖೆಯವರು ಗುರಿಪಳ್ಳ ಅಂಬಡಬೆಟ್ಟು ಸೇತುವೆ ಬಳಿ ಅಳವಡಿಸಿದ ಬ್ಯಾನರ್ ಸಾಕ್ಷಿ.

ತಾಲೂಕಿನ ಉಜಿರೆ-ಇಂದಬೆಟ್ಟು ಜಿಲ್ಲಾ ಮುಖ್ಯ ರಸ್ತೆಯಲ್ಲಿನ ಅಂಬಡಬೆಟ್ಟು ಎಂಬಲ್ಲಿ ಸೇತುವೆ ಪುನರ್ ನಿರ್ಮಾಣ ಕಾಮಗಾರಿ ಸಂಬಂಧ ವಾಹನ ಸಂಚಾರವನ್ನು ನಿರ್ಬಂಧಿಸಿ, ಮಾರ್ಗ, ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಅವರ ಆದೇಶದ ಮೇರೆಗೆ ದಿನಾಂಕ 09.06.2026 ರನ್ವಯ ಬೆಳ್ತಂಗಡಿ ಉಪ ವಿಭಾಗದ ಲೋಕೋಪಯೋಗಿ ಇಲಾಖೆ ಅಳವಡಿಸಿದ ಬ್ಯಾನರ್ ನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿರದ ಊರುಗಳ ಹೆಸರನ್ನು ಮುದ್ರಿಸಿರುವುದು ಕಂಡು ಬಂದಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಬ್ಯಾನರ್ ನಲ್ಲಿ ಏನಿದೆ?;-
1.ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ದ್ವಾರದಿಂದ-ಸೂರ್ಯ ದೇವಸ್ಥಾನ ಮಾರ್ಗವಾಗಿ – ಕೇಳ್ತಜೆ ಮುಖಾಂತರ ಸಂಚರಿಸುವುದು.

2. ಬೆಳ್ತಂಗಡಿ- ಕಿಲ್ಲೂರು-ಕಾಜೂರು ರಸ್ತೆಯ ಇಂದಬೆಟ್ಟು ಗ್ರಾಮದಿಂದ ನೇತ್ರಾವತಿ ಎಸ್.ಟಿ. ಕಾಲೋನಿ ಮಾರ್ಗವಾಗಿ ಬೆಳ್ಳೂರು ಕ್ರಾಸ್ ರಸ್ತೆಯಾಗಿ ರಾಜ್ಯ ಹೆದ್ದಾರಿ 276ರ ರಸ್ತೆಯಾದ ಸುಳ್ಯ, ಪೈಚಾರು, ಬೆಳ್ಳಾರೆ, ಸವಣೂರು, ಕುದ್ಮಾರು, ಆಲಂಕಾರು, ಸುರುಳಿ, ಮಾದೇರಿ, ಪಟ್ರಮೆ, ಧರ್ಮಸ್ಥಳ, ಮುಂಡಾಜೆ, ದಿಡುಪೆ ರಸ್ತೆಯನ್ನು ಸಂಪರ್ಕಿಸುವುದು.

Related posts

ಧರ್ಮಸ್ಥಳ: ಸಂತಾನಪ್ರದ ನಾಗಕ್ಷೇತ್ರದಲ್ಲಿ ಶ್ರೀ ನಾಗದೇವರ ಬಿಂಬ ಹಾಗೂ ನಾಗರಕ್ತೇಶ್ವರಿ ಪ್ರತಿಷ್ಠೆ ದೈವಗಳ ಪುನರ್ ಪ್ರತಿಷ್ಠೆ ಮಹೋತ್ಸವ: ಹೊರೆಕಾಣಿಕೆ ಸಮರ್ಪಣೆ

Suddi Udaya

ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ:ಪತ್ರಕರ್ತರ ಸಂಘದ ನೂತನ ಕಟ್ಟಡ ಹಾಗೂ ನಿವೇಶನಕ್ಕೆ ರೂ.20 ಲಕ್ಷ ಅನುದಾನ: ಹರೀಶ್ ಪೂಂಜ

Suddi Udaya

ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ

Suddi Udaya

ಬೆಳ್ತಂಗಡಿ: ತೋಟಗಾರಿಕಾ ಇಲಾಖೆಯಲ್ಲಿ ಜೇನು ಕೃಷಿ ತರಬೇತಿ-ಜೇನು ಪೆಟ್ಟಿಗೆ ವಿತರಣೆ

Suddi Udaya

ಬೀಜಾಡಿಯ ಯೋಧ ಅನೂಪ್ ಪೂಜಾರಿಯವರ ಶವ ಪೆಟ್ಟಿಗೆಗೆ ಹೆಗಲು ಕೊಟ್ಟ ಸಂಸದ ಕ್ಯಾ| ಬ್ರಿಜೇಶ್ ಚೌಟ

Suddi Udaya

ಕುಕ್ಕಾವು ಕೊಪ್ಪಂದಗುಂಡಿಯಲ್ಲಿ ರಸ್ತೆಗೆ ಬಿದ್ದ ಮರ: ದ್ವಿಚಕ್ರ ಸವಾರರಿಗೆ ಗಾಯ

Suddi Udaya
error: Content is protected !!