August 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಉಜಿರೆ ರಬ್ಬರ್ ಸೊಸೈಟಿ ಮಹಾಸಭೆ: ರೂ. 24 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ. 9 ಡಿವಿಡೆಂಟ್

ಉಜಿರೆ: ಸದಸ್ಯರ ಸೇವೆಯೇ ಜೀವಾಳ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂಘವು ವರದಿ ವರ್ಷದಲ್ಲಿ 24 ಲಕ್ಷ ರೂ.ಗಿಂತ ಅಧಿಕ ಲಾಭಗಳಿಸಿದ್ದು,ಸದಸ್ಯರಿಗೆ ಶೇ.9 ಡಿವಿಡೆಂಟ್ ನೀಡಲು ನಿರ್ಣಯಿಸಿದೆ ಎಂದು ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದರು.

ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಜೂ.30ರಂದು ಜರಗಿದ ಸಂಘದ 41ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಬ್ಬರ್ ತೋಟಗಳನ್ನು ಹಲವಾರು ಬೆಳೆಗಾರರು ಲೀಸ್ ಗೆ ಕೊಟ್ಟಿದ್ದು,ಅಲ್ಲಿ ರಬ್ಬರ್ ಮರಗಳನ್ನು ಒಟ್ಟಾರೆಯಾಗಿ ಟ್ಯಾಪಿಂಗ್ ಮಾಡಿದ್ದು ಅವುಗಳನ್ನು ಕಡಿಯುವ ಸ್ಥಿತಿ ಉಂಟಾಗಿದೆ. ರಬ್ಬರ್ ಹೊಸ ತೋಟ ನಿರ್ಮಾಣದಲ್ಲೂ ಕೃಷಿಕರ ಆಸಕ್ತಿ ಕಡಿಮೆಯಾಗಿದ್ದು, ಮುಂದಿನ ಕೆಲವು ವರ್ಷ ಸಾಕಷ್ಟು ಸವಾಲು ಎದುರಿಸಬೇಕಾಗಿದೆ. ಸದಸ್ಯರು ಸಂಘಕ್ಕೆ ಅಗತ್ಯ ಸಹಕಾರ ನೀಡುವುದು ಅಗತ್ಯವಾಗಿದೆ ಎಂದರು.

3952 ಸದಸ್ಯರನ್ನು ಹೊಂದಿರುವ ಸಂಘವು 1.34 ಕೋಟಿ ರೂ.ಗಿಂತ ಪಾಲು ಭಂಡವಾಳ ಹೊಂದಿದೆ. ಸಂಘದಲ್ಲಿ 21 ಕೋಟಿ ರೂ.ಗಿಂತ ಅಧಿಕ ಠೇವಣಿಗಳಿವೆ. 285.60ಕೋಟಿ ರೂ.ಮಾರಾಟ ವ್ಯವಹಾರ ನಡೆಸಲಾಗಿದೆ. ಸಂಘವು ತಾಲೂಕು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಒಟ್ಟು 33 ಖರೀದಿ ಶಾಖೆಗಳನ್ನು ಹೊಂದಿದೆ. ಪ್ರಸಕ್ತ ವರ್ಷದಲ್ಲಿ14,844 ಟನ್ ರಬ್ಬರ್ ಖರೀದಿಸಲಾಗಿದ್ದು ಗ್ರಾಹಕರಿಗೆ ಕಿಲೋವೊಂದರ ಸರಾಸರಿ 188.93ರೂ. ಧಾರಣೆ ಸಿಕ್ಕಿದೆ. ರಬ್ಬರ್ ಹಾಲು ಖರೀದಿಯಲ್ಲಿ 3.90 ಕೋಟಿ ರೂ.ವ್ಯವಹಾರ ನಡೆದಿದೆ ಎಂದು ಹೇಳಿದರು.

ಸದಸ್ಯರಿಂದ ಖರೀದಿಸಿದ ರಬ್ಬರನ್ನು ದೇಶಾದ್ಯಂತ ಮಾರಾಟ ಮಾಡಲಾಗಿದ್ದು ಸದಸ್ಯರ ಉತ್ಪನ್ನಗಳಿಗೆ ಉತ್ತಮ ಧಾರಣೆ ಸಿಗುವಂತೆ ಸಂಘವು ನಿರಂತರ ಪ್ರಯತ್ನದಲ್ಲಿದೆ. ಸುಮಾರು 150ಕ್ಕಿಂತಲೂ ಮೇಲ್ಪಟ್ಟ ಉತ್ಪಾದಕರೊಂದಿಗೆ ನೇರ ವ್ಯವಹಾರ ನಡೆಸಲಾಗುತ್ತಿದೆ ಭಾರತದ ಹೆಸರಾಂತ ಟಯರ್ ಕಂಪನಿಗಳೊಂದಿಗೆ ವ್ಯವಹಾರ ಮಾಡಲಾಗುತ್ತಿದೆ ಎಂದರು.


ಮುಂದಿನ ಯೋಜನೆಗಳು: ಸಂಘವು ನಡೆಸುತ್ತಿರುವ ಎಲ್ಲಾ ಖರೀದಿ ಕೇಂದ್ರಗಳನ್ನು ಕಂಪ್ಯೂಟರಿಕರಣಗೊಳಿಸಿ ಆನ್ಲೈನ್ ಮಾಡುವುದು. ಸಂಘದ ವ್ಯವಹಾರ ವಿಸ್ತರಿಸುವ ನಿಟ್ಟಿನಲ್ಲಿ ತಾಲೂಕಿನ ಒಳಗೆ ಹಾಗೂ ಹೊರಗಡೆ ಅಗತ್ಯವಿದ್ದಲ್ಲಿ ಸೇವಾ ಕೇಂದ್ರಗಳನ್ನು ತೆರೆಯುವುದು, ಸುಧಾರಿತ ಕೃಷಿ ಕ್ರಮವನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ತಜ್ಞರಿಂದ ರೈತರ ತೋಟದಲ್ಲಿ ಪ್ರಾತ್ಯಕ್ಷಿತೆಗಳನ್ನು ಏರ್ಪಡಿಸುವುದು, ಸುಸಜ್ಜಿತ ಗೋದಾಮು ನಿರ್ಮಾಣ, ಖರೀದಿ ಕೇಂದ್ರಗಳಿಗೆ ಸ್ವಂತ ನಿವೇಶನ ಖರೀದಿ, ರಬ್ಬರು ಬೆಳೆಗಾರರ ಸಂಘಟನೆಯನ್ನು ಬಲಪಡಿಸುವುದು, ರಬ್ಬರು ಒದಗಿಸುವ ಸದಸ್ಯರಿಗೆ ರಿಯಾಯಿತಿ ದರದಲ್ಲಿ ರಬ್ಬರ್ ಕೃಷಿ ವಸ್ತುಗಳನ್ನು ಒದಗಿಸುವುದು ಇತ್ಯಾದಿ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.


ನಿರ್ದೇಶಕ ಬಾಲಕೃಷ್ಣ ಗೌಡ ಸ್ವಾಗತಿಸಿದರು. ಎಚ್.ಪದ್ಮ ಗೌಡ ವಂದಿಸಿದರು. ಸಿಇಒ ರಾಜು ಶೆಟ್ಟಿ ವರದಿ ವಾಚಿಸಿದರು.
ಉಪಾಧ್ಯಕ್ಷ ಅನಂತ ಭಟ್ ಎಂ., ನಿರ್ದೇಶಕರಾದ ಜಯಶ್ರೀ ಡಿ.ಎಂ., ಆರ್.ಸುಭಾಷಿಣಿ, ಬೈರಪ್ಪ,ರಾಮ ನಾಯ್ಕ, ಸೋಮನಾಥ ಬಂಗೇರ, ಗ್ರೇಸಿಯನ್ ವೇಗಸ್, ಪದ್ಮಗೌಡ ಎಚ್.,ಕೆ.ಜೆ.ಅಗಸ್ಟೀನ್, ತಿಮ್ಮಪ್ಪ ಗೌಡ, ಭರತ್ ಕುಮಾರ್, ಶಾಜಿ ಪಿ.ಎ., ಶಶಿಧರ ಡೋಂಗ್ರೆ, ವಿಶೇಷ ಆಹ್ವಾನಿತರಾದ ಅಬ್ರಾಹಾಂ ಬಿ.ಎಸ್., ಹರೀಶ್ ರಾವ್ ಉಪಸ್ಥಿತರಿದ್ದರು. ನಿಯೋಜಿತ ಸಿಇಒ ಹರಿಪ್ರಸಾದ್ ಹಾಗೂ ಸಿಬ್ಬಂದಿ ಸಹಕರಿಸಿದರು. ನಿದೇ೯ಶಕರಾದ ಪದ್ಮ ಗೌಡ ಹೆಚ್. ವಂದಿಸಿದರು.

Related posts

ಬೆಳ್ತಂಗಡಿ ಮುಳಿಯ ಗೋಲ್ಡ್ & ಡೈಮಂಡ್ ವತಿಯಿಂದ ತಾಲ್ಲೂಕು ಮಟ್ಟದ ಹಗ್ಗಜಗ್ಗಾಟ ಸ್ಪರ್ಧೆ: ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Suddi Udaya

18 ಬಿಜೆಪಿ ಶಾಸಕರ ಅಮಾನತು ವಾಪಸ್ ಪಡೆಯುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ: ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಶ್ರೀ ಕ್ಷೇತ್ರ ಬಂಗಾಡಿ ಸತ್ಯ ಸಾರಮಾನಿ ಕಾನದ ಕಟದ ಜನ್ಮಭೂಮಿ’ ವಾರ್ಷಿಕ ಪರ್ವ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ

Suddi Udaya

ಸೋಮಂತಡ್ಕದಲ್ಲಿ ರಾಮನಾಮ ಸಂಕೀರ್ತನೆ ಕಾರ್ಯಕ್ರಮ: ಕರಸೇವಕ ಸುರೇಶ್ ಭಟ್ ಕೊಲ್ಯ ರವರಿಗೆ ಗೌರವಾರ್ಪಣೆ

Suddi Udaya

ನಿಡ್ಲೆ ಸರ್ಕಾರಿ ಪ್ರೌಢಶಾಲೆಗೆ ಶೇ. 88.2 ಫಲಿತಾಂಶ

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಹಿ.ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

Suddi Udaya
error: Content is protected !!