28.1 C
ಪುತ್ತೂರು, ಬೆಳ್ತಂಗಡಿ
September 30, 2026
ಅಭಿನಂದನೆಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿ

ಚೆನ್ನೈನಲ್ಲಿ ಧೂಳೆಬ್ಬಿಸಿದ ದಕ್ಷಿಣ ಕನ್ನಡದ ಹುಡುಗಿಯರು,ಆಲ್ ಇಂಡಿಯಾ ಥ್ರೋಬಾಲ್ ಕೂಟದಲ್ಲಿ ಪ್ರಚಂಡ ಸಾಧನೆ ಮುಳಿಯ ಜ್ಯುವೆಲ್ಸ್ ನಿಂದ ಸಮವಸ್ತ್ರ ಕೊಡುಗೆ

ಬೆಳ್ತಂಗಡಿ: ಕ್ರೀಡಾ ಕ್ಷೇತ್ರಕ್ಕೆ ದಕ್ಷಿಣ ಕನ್ನಡದ ಸಾಧನೆಯನ್ನು ಮತ್ತೊಮ್ಮೆ ನೆನಪು ಮಾಡುವಂತಹ ಕೆಲಸವನ್ನು ದಕ್ಷಿಣ ಕನ್ನಡದ ಪ್ರತಿಭಾನ್ವಿತ ಯುವತಿಯರ ತಂಡ ಮಾಡಿದೆ. ದಕ್ಷಿಣ ಕನ್ನಡದಿಂದ ದೂರದ ತಮಿಳುನಾಡು ತೆರಳಿ ಅಲ್ಲಿ ಪ್ರಥಮ ಸ್ಥಾನ ಪಡೆದು ಕನ್ನಡಿಗರ ಶಕ್ತಿ ತೋರಿಸಿ, ದಕ್ಷಿಣ ಕನ್ನಡಕ್ಕೆ ಕೀರ್ತಿ ತಂದಿದ್ದಾರೆ.

ಜೂ.27-28 ರಂದು ಚೆನ್ನೈನಲ್ಲಿ ಆಲ್ ಇಂಡಿಯಾ ಇಂಟರ್ ಕ್ಲಬ್ ಥ್ರೋಬಾಲ್ ಕೂಟದಲ್ಲಿ ರಾಜ್ಯದಿಂದ ದಕ್ಷಿಣ ಕನ್ನಡ ಜಿಲ್ಲೆಯ ಫ್ರೆಂಡ್ಸ್ ಉಳ್ಳಾಲ ಅಕಾಡೆಮಿ ತಂಡವು ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ತಂಡವನ್ನು ಚೈತನ್ಯ ಪುತ್ತೂರು ಮುನ್ನಡೆಸಿದ್ದರು. ವೈಷ್ಣವಿ ಉಡುಪಿ ಅವರು ಅತ್ಯುತ್ತಮ ಆಲ್ ರೌಂಡರ್ ಪ್ರಶಸ್ತಿ ಪಡೆದುಕೊಂಡರು.

ತಂಡವು ಚೈತನ್ಯ ಪುತ್ತೂರು ,ವೈಷ್ಣವಿ ಉಡುಪಿ ವಿಜಯಲಕ್ಷ್ಮಿ ಉಡುಪಿ, ಆಶಿಕಾ ಬಂದಾರು, ಪ್ರತೀಕ್ಷಾ ಕಾರಿಂಜ,ಜಯಶ್ರೀ ಕಾರಿಂಜ, ಕೀರ್ತಿ ಸಂಪ್ಯ, ಕೀರ್ತಿ ಸುಂಕದಕಟ್ಟೆ,ಅಶ್ವಿನಿ ಉಡುಪಿ,ಅಭಿಜ್ಞ ಉಡುಪಿ, ದಿವ್ಯ ಬೆದ್ರ, ಪ್ರಿಯಾ ಮೈಸೂರು,ಕೀರ್ತನಾ ಮೈಸೂರು, ತಂಡದ ತರಬೇತುಗಾರರಾಗಿ ಪ್ರಜ್ವಲ್ ನಡ , ಪ್ರಜಾಕ್ಷ ಪಟ್ರಮೆ,ಸೃಜನ್ ಗೇರುಕಟ್ಟೆ ಅವರನ್ನು ಒಳಗೊಂಡಿತ್ತು. ಕ್ರೀಡಾಪಟುಗಳಿಗೆ ರಾಜ್ಯದ ಶ್ರೇಷ್ಠ ಸ್ವರ್ಣೋದ್ಯಮ ಮಳಿಗೆ ಮುಳಿಯ ಜ್ಯುವೆಲ್ಸ್ ಸಂಸ್ಥೆಯು ಸಮವಸ್ತ್ರದ ಪ್ರಾಯೋಜಕತ್ವ ವಹಿಸಿದೆ.

Related posts

ವೇಣೂರು: ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಅಧಾ ಆಚರಣೆ

Suddi Udaya

ಕನ್ಯಾಡಿ: ಶ್ರೀ ರಾಮ‌ ನಾಮ ಸಪ್ತಾಹದಲ್ಲಿ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಭಜನಾ ಸೇವೆ

Suddi Udaya

ಕಳೆಂಜ: ಆರ್ವಿ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಶಿಬರಾಜೆ ಅಂಗನವಾಡಿ ಮಕ್ಕಳಿಗೆ ಕುರ್ಚಿ ಕೊಡುಗೆ

Suddi Udaya

ಪಿಯು ಮರುಮೌಲ್ಯಮಾಪನ: ವಾಣಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ರಿತೀಷ ರಾಜ್ಯಕ್ಕೆ 10ನೇ ಸ್ಥಾನ

Suddi Udaya

ಕಲ್ಮಂಜ ಶ್ರೀ ಸತ್ಯನಾರಾಯಣ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ

Suddi Udaya

ಡಾ.ಎಸ್.ಡಿ ಶೆಟ್ಟಿ ನಿಧನಕ್ಕೆ ದ. ಕ.ಜಿಲ್ಲಾ ಕ.ಸಾ.ಪ ಸಂತಾಪ

Suddi Udaya
error: Content is protected !!