28.1 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ರಬ್ಬರ್ ಸೊಸೈಟಿಯ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಪ್ರಸಾದ್ ಐ.ಎಸ್, ವಿಶೇಷಾಧಿಕಾರಿಯಾಗಿ ರಾಜು ಶೆಟ್ಟಿ ಅಧಿಕಾರ ಸ್ವೀಕಾರ

ಉಜಿರೆ: ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಉಜಿರೆ ಇದರ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಹರಿಪ್ರಸಾದ್ ಐ.ಎಸ್ ಹಾಗೂ ವಿಶೇಷಾಧಿಕಾರಿಯಾಗಿ ರಾಜು ಶೆಟ್ಟಿ ಅವರು ಜು 1ರಂದು ಅಧಿಕಾರ ಸ್ವೀಕರಿಸಿದರು.

ಕಳೆದ 35 ವರ್ಷಗಳಿಂದ ರಬ್ಬರು ಸೊಸೈಟಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ರಾಜು ಶೆಟ್ಟಿಯವರು ಸೇವೆ ಸಲ್ಲಿಸಿ ವೃತ್ತಿಯಿಂದ ನಿವೃತ್ತಿಯಾಗಿದ್ದು ಅವರ ಸ್ಥಾನಕ್ಕೆ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಹರಿಪ್ರಸಾದ್ ಅವರನ್ನು ಆಡಳಿತ ಮಂಡಳಿ ನೇಮಕಗೊಳಿಸಿದೆ.

ನಿವೃತ್ತಿ ಹೊಂದಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿಯವರು ಸೇವೆಯಲ್ಲಿ ಅಪಾರ ಅನುಭವ ಹೊಂದಿದ್ದು ಅವರನ್ನು ಸಂಸ್ಥೆಯ ವಿಶೇಷ ಅಧಿಕಾರಿಯಾಗಿ ನೇಮಕಗೊಳಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀಧರ ಜಿ ಭಿಡೆ, ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಹಾಗೂ ಆಡಳಿತ ಮಂಡಳಿಯ ಸದಸ್ಯರು,ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ: ಟಿಟಿ ಹಾಗೂ ಟಿಪ್ಪರ್ ಡಿಕ್ಕಿ: ಚಾಲಕ, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

Suddi Udaya

ನ್ಯಾಯತರ್ಪು: ರಕ್ತೇಶ್ವರಿಪದವು ಸ.ಕಿ.ಪ್ರಾ. ಶಾಲೆಯಲ್ಲಿ ಪೋಷಕ-ಶಿಕ್ಷಕರ ಮಹಾಸಭೆ

Suddi Udaya

ಉಜಿರೆ: ಮಾಚಾರು ದರ್ಖಾಸು ನಿವಾಸಿ ಸುಂದರಿ ನಿಧನ

Suddi Udaya

ಉಜಿರೆ ಎಸ್.ಡಿ.ಎಂ ಕಾಲೇಜು: ಸಾಧಕರ ದಿನ-229 ವಿದ್ಯಾರ್ಥಿ ಸಾಧಕರಿಗೆ ಪ್ರಶಸ್ತಿ ಪತ್ರ ವಿತರಣೆ

Suddi Udaya

ತ್ರೋಬಾಲ್ ಪಂದ್ಯಾಟದಲ್ಲಿ ವಾಣಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ವೇಣೂರು ಯುವ ಸೇವಾ ಸಂಗಮ ವತಿಯಿಂದ ಸುಲ್ಕೇರಿ ಶ್ರೀರಾಮ ಶಾಲೆಗೆ ರೂ. 1ಲಕ್ಷ ದೇಣಿಗೆ

Suddi Udaya
error: Content is protected !!