31.2 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪುದುವೆಟ್ಟು ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲೆಯಲ್ಲಿ ಯಕ್ಷಗಾನ ತರಬೇತಿ ಶಿಬಿರ’ದ ಉದ್ಘಾಟನೆ

ಪುದುವೆಟ್ಟು: ಸಂಸ್ಕೃತಿ ಮತ್ತು ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರೀಧ.ಮಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪುದುವೆಟ್ಟು ಇಲ್ಲಿ ಆಯೋಜಿಸಲಾದ ‘ಯಕ್ಷಗಾನ ತರಬೇತಿ ಶಿಬಿರ’ದ ಉದ್ಘಾಟನಾ ಸಮಾರಂಭವು ಜೂ. 30 ರಂದು ಶಾಲಾ ಆವರಣದಲ್ಲಿ ಅರ್ಥಪೂರ್ಣವಾಗಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಧರ್ಮಸ್ಥಳದ ಶ್ರೀಧ.ಮಂ. ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದರಾದ ಜನಾರ್ದನ ತೋಳ್ಪಡಿತ್ತಾಯ ಅವರು ಮಾತನಾಡಿ, “ಯಕ್ಷಗಾನವು ನಮ್ಮ ಕರಾವಳಿಯ ಹೆಮ್ಮೆಯ ಕಲೆಯಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಇಂತಹ ಕಲೆಗಳನ್ನು ಕಲಿಯುವುದರಿಂದ ವ್ಯಕ್ತಿತ್ವ ವಿಕಸನಗೊಳ್ಳುವುದಲ್ಲದೆ, ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಾಧ್ಯವಾಗುತ್ತದೆ” ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್‌ಡಿಎಂ ಕಲಾ ಕೇಂದ್ರದ ಯಕ್ಷಗಾನ ತರಬೇತುದಾರರಾದ ಅರುಣ್ ಕುಮಾರ್ ವಿದ್ಯಾರ್ಥಿಗಳಿಗೆ ತರಬೇತಿಯ ಕುರಿತು ಮಾರ್ಗದರ್ಶನ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯ ಶಿಕ್ಷಕ ಶ್ರೀ ಶೀನಪ್ಪ ಗೌಡ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಕಲಾಭಿರುಚಿಯನ್ನು ಹೊರಹಾಕಲು ಇಂತಹ ತರಬೇತಿಗಳು ಸಹಕಾರಿ ಎಂದು ತಿಳಿಸಿದರು.
ವೇದಿಕೆಯಲ್ಲಿ ಹಿರಿಯ ಶಿಕ್ಷಕಿ ಶ್ರೀಮತಿ ತೇಜಾವತಿ ಉಪಸ್ಥಿತರಿದ್ದರು. ನಿಶಾಂತ್ ಕುಮಾರ್ ಸ್ವಾಗತಿಸಿದರು, ಜಿತೀಕ್ಷ ಕಾರ್ಯಕ್ರಮ ನಿರೂಪಿಸಿದರು. ಪುಷ್ಪಲತಾ ವಂದನಾರ್ಪಣೆಗೈದರು. ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು

Related posts

ಬೆಳ್ತಂಗಡಿ ಎಸ್.ಐ.ಟಿ ವಿಚಾರಣೆಗೆ ಹಾಜರಾದ ಗಿರೀಶ್ ಮಟ್ಟಣ್ಣವರ್ ಹಾಗೂ ವಿಠಲ್ ಗೌಡ

Suddi Udaya

ಸೌತಡ್ಕ: ಸತ್ತ ಕರುವೊಂದನ್ನು ಮೋರಿಗೆ ಎಸೆದ ದುಷ್ಕಾರ್ಮಿಗಳು: ಹಿಂ.ಜಾ. ವೇದಿಕೆ ಮತ್ತು ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಸದಸ್ಯರಿಂದ ಅಂತ್ಯಸಂಸ್ಕಾರ

Suddi Udaya

ಅಳದಂಗಡಿ ಅರಮನೆಗೆ ಶಿಲಾಮಯ ಆನೆಗಳ ಮೆರುಗು: ಪ್ರಸಿದ್ಧ ಬೆಂಗಳೂರು ಉದ್ಯಮಿ ದೇವೇಂದ್ರ ಹೆಗ್ಡೆಯವರಿಂದ ಕೊಡುಗೆ

Suddi Udaya

ಮಾಜಿ ಶಾಸಕ ದಿ.ಕೆ ವಸಂತ ಬಂಗೇರರವರ 79 ನೇ ಹುಟ್ಟುಹಬ್ಬ ಪ್ರಯುಕ್ತ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ: ಜ. 15 ರಂದು ಬಂಗೇರ ಬ್ರಿಗೇಡ್ ನಿಂದ ಮದ್ದಡ್ಕ ಬಂಡಿಮಠ ಮೈದಾನದಲ್ಲಿ ಪಂದ್ಯಕೂಟ ಆಯೋಜನೆ: ಬಂಗೇರ ಬ್ರಿಗೇಡ್ ಗೌರವಾಧ್ಯಕ್ಷೆ ಪ್ರೀತಿತಾ ಬಂಗೇರರವರಿಂದ ಪತ್ರಿಕಾಗೋಷ್ಠಿ

Suddi Udaya

ಪುದುವೆಟ್ಟು ಶ್ರೀ ಧ.ಮಂ..ಹಿ. ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಸೇವಾ ನಿವೃತ್ತಿಗೊಳ್ಳುತ್ತಿರುವ ಕಳಿಯ ಪ್ರಾ.ಕೃ.ಪ.ಸ.ಸಂಘದ ಮಾರಾಟ ಸಹಾಯಕ ಶಿವರಾಮ್ ನಾಯ್ಕ್ ರಿಗೆ ಬೀಳ್ಕೊಡುಗೆ

Suddi Udaya
error: Content is protected !!