28.1 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುನ್ನಿ ಕೋರ್ಡಿನೇಷನ್ ವತಿಯಿಂದ ಎಸ್‌ಐಆರ್ ಮಾಹಿತಿ ಕಾರ್ಯಾಗಾರ

ಬೆಳ್ತಂಗಡಿ: ಸುನ್ನೀ ಕೋಆರ್ಡಿನೇಷನ್ ಬೆಳ್ತಂಗಡಿ ತಾಲೂಕು ಸಮಿತಿ ಆಶ್ರಯದಲ್ಲಿ ಕುಪ್ಪೆಟ್ಟಿ ಶಾದಿ ಮಹಲ್ ಮತ್ತು ಗುರುವಾಯನಕೆರೆ ಶಾದಿಮಹಲ್ ಸಭಾಂಗಣದಲ್ಲಿ ಭಾರತ ಮತದಾರರ ಪಟ್ಟಿ ಸಮಗ್ರ ಪರಿಶೀಲನೆ (ಎಸ್‌ಐಆರ್) ಕುರಿತ ಮಾಹಿತಿ ಕಾರ್ಯಗಾರ ಜೂ.30 ರಂದು ನಡೆಯಿತು.

ಕುಪ್ಪೆಟ್ಟಿಯಲ್ಲಿ ಅಬ್ಬಾಸ್ ಬಟ್ಲಡ್ಕ ಹಾಗೂ ಗುರುವಾಯನಕೆರೆಯಲ್ಲಿ ಸಲೀಂ ಕನ್ಯಾಡಿ ಸ್ವಾಗತಿಸಿ ಪ್ರಸ್ತಾವನೆಗೈದರು. ಗುರುವಾಯನಕೆರೆಯಲ್ಲಿ ಸಯ್ಯಿದ್ ಫಝಲ್ ಜಮಲುಲ್ಲೈಲಿ ತಂಙಳ್ ವಾದಿ‌ಇರ್ಫಾನ್ ಅಧ್ಯಕ್ಷತೆ ವಹಿಸಿ ದುಆ ನೆರವೇರಿಸಿದರು.
ಎರಡೂ ಕೇಂದ್ರಗಳಲ್ಲಿ ಕಂದಾಯ ಇಲಾಖೆ ಮೂಲಕ ಬಿಎಲ್‌ಒ ಗಳ ತರಬೇತುದಾರರಾದ ಧರಣೇಂದ್ರ ಕೆ ಜೈನ್ ಹಾಗೂ ಜಗನ್ನಾಥ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನಡೆಸಿಕೊಟ್ಟರು. ಎರಡೂ ಕೇಂದ್ರಗಳಲ್ಲಿ
ಆದಂ ಅಲ್ ಮದೀನಾ, ಜಿ ಎಂ ಕುಂಞಿ ಜೋಗಿ ಬೆಟ್ಟು, ಉಮರ್ ಜಿ.ಕೆ ಗುರುವಾಯನಕೆರೆ, ಬಿ.ಎಮ್ ಹಮೀದ್ ಉಜಿರೆ, ಮುಹಮ್ಮದ್ ರಫಿ, ಉಮರ್‌ಕುಂಞಿ ನಾಡ್ಜೆ, ಅಬ್ಬೋನು ಮದ್ದಡ್ಕ, ಕೆ ಎಮ್ ಕರೀಂ ಗೇರುಕಟ್ಟೆ, ಎಂ.ಬಿ ಸಾದಿಕ್ ಮಲೆಬೆಟ್ಟು, ರಶೀದ್ ಮಡಂತ್ಯಾರು, ಅಬ್ದುಲ್ ರಝಾಕ್ ಸಖಾಫಿ, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಸಹಿತ
ವಿವಿಧ ಮೊಹಲ್ಲಾಗಳ ಖತೀಬ್, ಮುದರ್ರಿಸ್, ಹಾಗೂ ಇತರ ಧರ್ಮಗುರುಗಳು, ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ಸೆಸ್ಸೆಫ್, ಎಸ್‌ಜೆಯು, ಎಸ್.ಎಮ್.ಎ, ಎಸ್‌ಜೆಎಮ್ ಸಹಿತ ಇರುವ ಸಂಘ ಕುಟುಂಬದ ವಿವಿಧ ಮಟ್ಟದ ಪದಾಧಿಕಾರಿಗಳು ಭಾಗಿಯಾಗಿದ್ದರು.

ಕುಪ್ಪೆಟ್ಟಿ‌ ಕಾರ್ಯಕ್ರಮದಲ್ಲಿ ಅಲೀ ತುರ್ಕಳಿಕೆ ಕಾರ್ಯಕ್ರಮ‌ ನಿರೂಪಿಸಿ, ಮುಹಮ್ಮದ್ ರಫಿ ವಂದಿಸಿದರು.

Related posts

ಕೊಕ್ರಾಡಿ -ಸಾವ್ಯ ಒಕ್ಕೂಟದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ

Suddi Udaya

ಸುಲ್ಕೇರಿಮೊಗ್ರು: ಜಗದೀಶ ಪೂಜಾರಿ ನಿಧನ

Suddi Udaya

ಕಣಿಯೂರು ಮಹಾಶಕ್ತಿ ಕೇಂದ್ರದ ಚುನಾವಣಾ ಪೂರ್ವಭಾವಿ ಸಿದ್ಧತೆ

Suddi Udaya

ಎಕ್ಸೆಲ್‌ನಲ್ಲಿ 80ನೇ ಸ್ವಾತಂತ್ರ್ಯ ಸಂಭ್ರಮ: ಶೈಕ್ಷಣಿಕ ಸಾಧಕರಿಗೆ ಸನ್ಮಾನ

Suddi Udaya

ಪಾಂಡವರಕಲ್ಲು ಶ್ರೀ ರಾಜನ್ ದೈವ ಕೊಡಮಣಿತ್ತಾಯ ಶ್ರೀ ಬ್ರಹ್ಮ ಬೈದೆರೆ ಗರೋಡಿ ಕ್ಷೇತ್ರದ ಆಡಳಿತ ಮೊಕ್ತೇಸರ ರತ್ನಕುಮಾರ್ ಆರಿಗ ನಿಧನ

Suddi Udaya

ಕೊಕ್ಕಡ: ಶ್ರೀನಿಧಿ ಜೀಪ್ ಮಾಲಕ ರಘುನಾಥ ನಾಯ್ಕ್ ನಿಧನ

Suddi Udaya
error: Content is protected !!