31.2 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೆಸರುಮಯವಾದ ನಾಲ್ಕೂರಿನ ಹುಂಬೆಜಲ್ಕೆ ರಸ್ತೆ: ಸರಿಪಡಿಸುವಂತೆ ಸ್ಥಳೀಯರ ಆಗ್ರಹ

ಬೆಳ್ತಂಗಡಿ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ತಾಲೂಕಿನ ಕೆಲವು ಗ್ರಾಮಗಳ ಒಳರಸ್ತೆಗಳು ಕೆಸರುಮಯವಾಗಿ ಮಾರ್ಪಟ್ಟಿದ್ದು, ಹಲವು ಕಡೆಗಳಲ್ಲಿ ಸಾಲು ಸಾಲು ಗುಂಡಿಗಳು ನಿರ್ಮಾಣಗೊಂಡಿವೆ. ಇದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರು ಸಂಚಾರ ನಡೆಸಲು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.
ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಪಿನಡ್ಕ–ಪೆರ್ಮುಡ ಸಂಪರ್ಕಿಸುವ ನಾಲ್ಕೂರಿನ ಹುಂಬೆಜಲ್ಕೆ ಭಾಗದ ರಸ್ತೆಯು ಮಳೆಯ ಪರಿಣಾಮದಿಂದ ತೀವ್ರ ಹದಗೆಟ್ಟಿದ್ದು, ಈ ಭಾಗದ ಜನರು ಕೆಸರು ತುಂಬಿದ ರಸ್ತೆಯಲ್ಲಿ ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಭಾಗದಲ್ಲಿ ನೂರಾರು ಕುಟುಂಬಗಳು ವಾಸವಾಗಿದ್ದು, ಶಾಲಾ–ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಹೈನುಗಾರರು, ದಿನಗೂಲಿ ಕಾರ್ಮಿಕರು,ಕೃಷಿಕರು, ಉದ್ಯೋಗಿಗಳು ಹಾಗೂ ಸಾರ್ವಜನಿಕರು ಪಟ್ಟಣ ಪ್ರದೇಶಗಳಿಗೆ ಸಂಚರಿಸಲು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಆದರೆ ರಸ್ತೆ ಸಂಪೂರ್ಣ ಕೆಸರುಮಯವಾಗಿರುವುದರಿಂದ ದೈನಂದಿನ ಸಂಚಾರ ದುಸ್ತರವಾಗಿದೆ.
ಪಾದಚಾರಿಗಳು ಕೆಸರನ್ನು ತಪ್ಪಿಸಲು ರಸ್ತೆ ಬದಿಯಲ್ಲಿ ಸಾಗಲು ಯತ್ನಿಸಿದರೆ, ಗಿಡಗಂಟಿಗಳು ಅಡ್ಡಿಯಾಗುತ್ತಿವೆ. ರಸ್ತೆ ಮಧ್ಯದಲ್ಲಿ ಸಾಗಲು ಪ್ರಯತ್ನಿಸಿದರೆ ಗುಂಡಿಗಳನ್ನು ತಪ್ಪಿಸಿಕೊಂಡು ಸಾಗುವುದೇ ದೊಡ್ಡ ಸವಾಲಾಗಿದೆ. ಭಾರೀ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಿದರೆ ಕೆಸರಿನಲ್ಲಿ ಸಿಲುಕಿಕೊಳ್ಳುವ ಪರಿಸ್ಥಿತಿಯೂ ಉಂಟಾಗುತ್ತಿದೆ.

ಹೀಗಾಗಿ ರಸ್ತೆ ಬಳಕೆ ಮಾಡುವ ಪ್ರತಿಯೊಬ್ಬರೂ ಒಂದಲ್ಲೊಂದು ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದು, ಸಂಬಂಧಪಟ್ಟ ಇಲಾಖೆ ಹಾಗೂ ಸ್ಥಳೀಯ ಆಡಳಿತ ತಕ್ಷಣವೇ ಗಮನಹರಿಸಿ ರಸ್ತೆ ದುರಸ್ತಿ ಹಾಗೂ ನಿರ್ವಹಣಾ ಕಾಮಗಾರಿ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

“ಈ ಭಾಗದ ನೂರಾರು ಕುಟುಂಬಗಳಿಗೆ ಹುಂಬೆಜಲ್ಕೆ ರಸ್ತೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ.ಪೆರ್ಮುಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಆದರೆ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದು ಅತ್ಯಂತ ಕಷ್ಟಕರವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತ ಕೂಡಲೇ ಗಮನಹರಿಸಿ ಹದಗೆಟ್ಟಿರುವ ರಸ್ತೆಯನ್ನು ದುರಸ್ತಿ ಮಾಡಬೇಕು.” -ಸ್ಥಳೀಯರು

Related posts

ನಾರಾವಿ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಹಾಗೂ ಹಳೆಕೋಟೆ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ತಲಾ ರೂ.2 ಕೋಟಿ; ಸರ್ಕಾರಕ್ಕೆ ಶಾಸಕ ಹರೀಶ್ ಪೂಂಜ ಕೃತಜ್ಞತೆ

Suddi Udaya

ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್‌ಗೆ ರಾಜೇಶ್ ಪುದುಶೇರಿ ನೇತೃತ್ವದ ಸಹನಾಶ್ರೀ ಫೌಂಡೇಶನ್‌ ಬೆಂಬಲ-ಬೆಂಗಳೂರಿನಲ್ಲಿ ನಡೆಯಲಿರುವ ಕಬಡ್ಡಿ ಲೀಗ್‌ಗೆ ರೂ 1 ಲಕ್ಷ ದೇಣಿಗೆ

Suddi Udaya

ಲಾಯಿಲ ಶ್ರೀ ಕ್ಷೇತ್ರ ಪಿಲಿಪಂಜರ ಸಾನಿಧ್ಯದಲ್ಲಿ ಪ್ರತಿಷ್ಠಾ ದಿನ ಹಾಗೂ ದೈವಗಳ ನೇಮೋತ್ಸವ

Suddi Udaya

ಶ್ರೀ ಗುರುದೇವ ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಧರ್ಮಸ್ಥಳ ಶ್ರೀ ಮಂ.ಅ.ಪ್ರೌ. ಶಾಲೆಯಲ್ಲಿ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆಯ ಬಗ್ಗೆ ಜಾಗೃತಿ ಅಭಿಯಾನ

Suddi Udaya

ಮುಂಡಾಜೆ: ವಿದ್ಯುತ್ ಲೈನ್ ಮೇಲೆ ಬಿದ್ದ ಮರ: ಗುಡ್ಡಕ್ಕೆ ಬೆಂಕಿ

Suddi Udaya
error: Content is protected !!