23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಧ.ಮಂ.ಪ.ಪೂ. ಕಾಲೇಜಿನ ಉಪನ್ಯಾಸಕರ ಸಂಘದ ವತಿಯಿಂದ ಗ್ರಂಥಪಾಲಕ ಮನೋಹರ ಶೆಟ್ಟಿಯವರಿಗೆ ಸನ್ಮಾನ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಸಂಘದ ವತಿಯಿಂದ ಗ್ರಂಥಪಾಲಕರಾಗಿ ಸುಮಾರು 18 ವರ್ಷಗಳಿಂದ ಸೇವೆ ಸಲ್ಲಿಸಿದರ ಮನೋಹರ ಶೆಟ್ಟಿಯವರನ್ನು ವಯೋನಿವೃತ್ತಿಯ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಬಿ ಅವರು ಸನ್ಮಾನಿಸಿ ‘ ಮನೋಹರ್ ಅವರು ಕೇವಲ ಗ್ರಂಥಪಾಲಕರಾಗದೆ ವಿದ್ಯಾರ್ಥಿಗಳಿಗೆ ಅನೇಕ ವೃತ್ತಿಪರ ಅಧ್ಯಯನ ಮಾಹಿತಿ ಹಾಗೂ ಮಾರ್ಗದರ್ಶನ ನೀಡುತ್ತಿದ್ದರು. ಅವರಲ್ಲಿ ಪುಸ್ತಕ ಪ್ರೀತಿ ಜೊತೆಗೆ ಬರಹಗಾರರಾಗಿಯು ಗುರುತಿಸಿಕೊಂಡಿದ್ದಾರೆ ‘ ಎಂದು ಹೇಳಿ ಶುಭಕೋರಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮನೋಹರ ಶೆಟ್ಟಿಯವರು ‘ ಅನೇಕ ವರ್ಷಗಳ ಪುಸ್ತಕಗಳೊಂದಿಗೆ ಒಡನಾಡಿಯಾಗಿ ಅಲ್ಲದೇ ಅನೇಕ ವಿದ್ಯಾರ್ಥಿಗಳಿಗೆ ವೃತ್ತಿಪರ ಅಧ್ಯಯನ , ಮಾರ್ಗದರ್ಶನ ನೀಡಿದ ಸಾರ್ಥಕತೆ ಇದೆ. ಹೆಚ್ಚಿನದಾಗಿ ವಿದ್ಯಾರ್ಥಿಗಳ ಪ್ರೀತಿಗಳಿಸಿದ್ದೇನೆ. ಅಧ್ಯಕ್ಷ ಡಾ. ವೀರೇಂದ್ರ ಹೆಗ್ಗಡೆಯವರ ಕಾರ್ಯತತ್ಪರತೆಯೇ ನನಗೆ ಆದರ್ಶ. ಅವರಿಗೂ ಹಾಗೂ ಸೇವೆಗೆ ಅವಕಾಶ ಒದಗಿಸಿದ ಆಡಳಿತ ಮಂಡಳಿಯ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ ‘ ಎಂದು ನುಡಿದರು.

ಮನೋಹರ ಶೆಟ್ಟಿಯವರ ಜೀವನಾದರ್ಶಗಳ ಬಗ್ಗೆ ಹಿಂದಿ ಭಾಷಾ ವಿಭಾಗದ ಮುಖ್ಯಸ್ಥರಾದ ನಾಗರಾಜ್ ಭಂಡಾರಿ ಹಾಗೂ ಗ್ರಂಥಾಲಯ ಸಿಬ್ಬಂದಿ ಹರೀಶ್ ಕುಲಾಲ್ ಇವರು ಅನಿಸಿಕೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಉಪ ಪ್ರಾಚಾರ್ಯ ಡಾ. ರಾಜೇಶ್ ಬಿ. ಉಪಸ್ಥಿತರಿದ್ದರು. ಉಪನ್ಯಾಸಕರ ಸಂಘದ ಕಾರ್ಯದರ್ಶಿ ಸೀಮಾ ಸ್ವಾಗತಿಸಿ , ಸಹ ಕಾರ್ಯದರ್ಶಿ ಅಂಕಿತಾ ಎಂ. ಕೆ ನಿರೂಪಿಸಿ ವಂದಿಸಿದರು.

Related posts

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ಉಚಿತ ಮಹಿಳಾ ಆರೋಗ್ಯ ತಪಾಸಣೆ ಶಿಬಿರ

Suddi Udaya

ಹಗ್ಗ ಕುತ್ತಿಗೆಗೆ ಸುತ್ತಿಕೊಂಡು ಜೀವನ್ಮರಣ ಹೋರಾಟದಲ್ಲಿದ್ದ ಹಸುವನ್ನು ರಕ್ಷಿಸಿದ ಗೃಹ ರಕ್ಷಕ ದಳದ ಸಿಬ್ಬಂದಿ

Suddi Udaya

ಬಂಗಾಡಿ ಕೊಡ್ಡೋಲು ನಿವಾಸಿ ಎನ್. ಕೆ. ಫಡಕೆ ನಿಧನ

Suddi Udaya

ರಾಜ್ಯಮಟ್ಟದ ಭಾಷಣ ಸ್ಪರ್ಧೆ: ಧನುಶ್ರೀ ಎಸ್ ಕುಲಾಲ್ ತೃತೀಯ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ ನಿಂದ ಸರಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ರೂ.10 ಲಕ್ಷ ವಿದ್ಯಾರ್ಥಿ ವೇತನ

Suddi Udaya

ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಮಹೋತ್ಸವ ಕ್ರೀಡಾ ಸಂಭ್ರಮ

Suddi Udaya
error: Content is protected !!