23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

31 ವರ್ಷಗಳ ಯಶಸ್ವಿ ಪಯಣ: ಗ್ರಾಹಕರ ವಿಶ್ವಾಸದ ಪ್ರತೀಕವಾಗಿ ಬೆಳೆದ ಸೋಜಾ ಎಲೆಕ್ಟ್ರಾನಿಕ್ಸ್: ಇಂದಿನಿಂದ ಮಾನ್ಸೂನ್ ಆಫರ್ ಪ್ರಾರಂಭ; ಶೇ.10-50ರವರೆಗೆ ವಿಶೇಷ ರಿಯಾಯಿತಿ

ಬೆಳ್ತಂಗಡಿ: ತಾಲೂಕಿನ ಅತ್ಯಂತ ಹಿರಿಯ ಹಾಗೂ ಜನಪ್ರಿಯ ಗೃಹಪಯೋಗಿ ಮಳಿಗೆಗಳಲ್ಲಿ ಒಂದಾದ ಸೋಜಾ ಎಲೆಕ್ಟ್ರಾನಿಕ್ಸ್, 1995ರ ಡಿಸೆಂಬರ್ 8ರಂದು ಬೆಳ್ತಂಗಡಿ ನಗರದ ಹೃದಯ ಭಾಗದಲ್ಲಿ ಮಾಜಿ ಶಾಸಕ ದಿವಂಗತ ವಸಂತ ಬಂಗೇರ, ಬೆಳ್ತಂಗಡಿ ಕ್ರೈಸ್ತ ಧರ್ಮಕ್ಷೇತ್ರದ ಧರ್ಮಗುರುಗಳು ಹಾಗೂ ನೂರಾರು ಗ್ರಾಹಕರ ಸಮ್ಮುಖದಲ್ಲಿ ಉದ್ಘಾಟನೆಗೊಂಡು ಇದೀಗ ಯಶಸ್ವಿಯಾಗಿ 31 ವರ್ಷಗಳ ಪಯಣವನ್ನು ಪೂರ್ಣಗೊಳಿಸಿದೆ.

ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದದಿಂದ ಬೆಳೆಯುತ್ತಾ ಬಂದ ಈ ಸಂಸ್ಥೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವಿವಿಧ ಕೃಷಿ ಮೇಳಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತನ್ನ ಸಾಮಾಜಿಕ ಬದ್ಧತೆಯನ್ನೂ ಪ್ರದರ್ಶಿಸಿದೆ. ದಿವಂಗತ ಕಾಶ್ಮೀರ್ ಮೆನೆಜಸ್ ಅವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ, ಸಲಹೆ ಮತ್ತು ಸೂಚನೆಗಳನ್ನು ಪಾಲಿಸಿಕೊಂಡು ಬಂದಿರುವ ಈ ಪ್ರತಿಷ್ಠಿತ ಸಂಸ್ಥೆಯು ಪುತ್ತೂರಿನ ಸೋಜಾ ಎಲೆಕ್ಟ್ರಾನಿಕ್ಸ್ ನ ಸಹ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

ಯಶಸ್ವಿ ಅಧ್ಯಾಪಕ, ಸಮಾಜ ಸೇವಕ ಹಾಗೂ ಬಹುಮುಖ ಪ್ರತಿಭೆಗಳ ವ್ಯಕ್ತಿತ್ವ ಹೊಂದಿರುವ ಅಲ್ಫೋನ್ಸ್ ಫ್ರಾಂಕೋ ಸಂಸ್ಥೆಯ ಆಡಳಿತ ಪಾಲುದಾರರಾಗಿ ಕಳೆದ 31 ವರ್ಷಗಳಿಂದ ಸಂಸ್ಥೆಯನ್ನು ಯಶಸ್ಸಿನತ್ತ ಮುನ್ನಡೆಸಿದ್ದಾರೆ. ಅವರ ನಾಯಕತ್ವದಲ್ಲಿ ಸಂಸ್ಥೆ ಜಿಲ್ಲೆಯಷ್ಟೇ ಅಲ್ಲದೆ ಹೊರ ಜಿಲ್ಲೆಗಳಲ್ಲಿಯೂ ಲಕ್ಷಾಂತರ ಗ್ರಾಹಕರ ವಿಶ್ವಾಸಗಳಿಸಿ ತಾಲೂಕಿನ ಅತಿದೊಡ್ಡ ಹಾಗೂ ಹಿರಿಯ ಉದ್ಯಮ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ.

ಮಾನ್ಸೂನ್ ಆಫರ್ ದರಕಡಿತ ಮಾರಾಟಕ್ಕೆ ಚಾಲನೆ: ಅಲ್ಫೋನ್ಸ್ ಫ್ರಾಂಕೋ
ಸೋಜಾ ಎಲೆಕ್ಟ್ರಾನಿಕ್ಸ್ ವತಿಯಿಂದ ಜುಲೈ 2 ರಿಂದ ವಿಶೇಷ ಮಳೆಗಾಲದ ದರಕಡಿತ ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮಾಲಕರಾದ ಅಲ್ಫೋನ್ಸ್ ಫ್ರಾಂಕೋ ತಿಳಿಸಿದ್ದಾರೆ. ಪ್ರಸಿದ್ಧ ಕಂಪನಿಗಳ ವಿವಿಧ ಉತ್ಪನ್ನಗಳ ಮೇಲೆ ಶೇ.10ರಿಂದ ಶೇ.50 ರವರೆಗೆ ವಿಶೇಷ ರಿಯಾಯಿತಿ ದರ ನೀಡಲಾಗುತ್ತಿದೆ. ಸೋಜಾ ಮಳಿಗೆಯಲ್ಲಿ ಬಟ್ಲರ್ ಸೋಡಾ ಮೇಕರ್ ಇದರ ಲೈವ್ ಡೆಮೋಸ್ಟ್ರೆಷನ್ ಕಂಪನಿಯವರಿಂದಲೇ ಮಾಡಲಾಗುತ್ತಿದೆ. ಸ್ಥಳದಲ್ಲಿಯೇ ಬಜಾಜ್ ಫೈನಾನ್ಸ್ ಮೂಲಕ ಸುಲಭ ಕಂತು ಸಾಲ ಸೌಲಭ್ಯವೂ ಲಭ್ಯವಿದ್ದು, ಉಚಿತ ಸಾಗಾಟ, ಪ್ರಾತ್ಯಕ್ಷಿಕೆ ಹಾಗೂ ನಗುಮುಖದ ಸಿಬ್ಬಂದಿಗಳ ಸೇವೆ ಗ್ರಾಹಕರಿಗೆ ಸದಾ ದೊರೆಯಲಿದೆ. ಕಳೆದ ಹಲವು ವರ್ಷಗಳಿಂದ ಸಂಸ್ಥೆಯನ್ನು ಬೆಂಬಲಿಸಿ ಪ್ರೋತ್ಸಾಹ ನೀಡಿದ ಎಲ್ಲ ಗ್ರಾಹಕರಿಗೂ ಸಂಸ್ಥೆಯ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

Related posts

ತೆಕ್ಕಾರು ಪರಿಸರದ ಹಲವು ಮನೆಗಳಲ್ಲಿ ಕಳ್ಳತನ: ಲಕ್ಷಾಂತರ ರೂ. ನಗ-ನಗದು ಕಳವು

Suddi Udaya

ಉಜಿರೆಯಲ್ಲಿ ಚುನಾವಣಾ ಪ್ರಚಾರದ ಅಂಗವಾಗಿ ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ್ ಬಿಸ್ವಾಸ್ ಶರ್ಮ ಬೃಹತ್ ರೋಡ್ ಶೋ: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಪರ ಮತ ಪ್ರಚಾರ

Suddi Udaya

ಉಜಿರೆ ಎಸ್.ಡಿ.ಎಮ್ ಪ.ಪೂ. ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ” ಸಂಸ್ಕೃತ ಅಂತರಾಧ್ಯಯನ ವೃತ್ತಮ್ ” ಪದಾಧಿಕಾರಿಗಳ ಆಯ್ಕೆ

Suddi Udaya

ಇತಿಹಾಸ ಪ್ರಸಿದ್ಧ ಕಾಜೂರು ಉರೂಸ್ ಸಾರ್ವಜನಿಕ ಸಮಾವೇಶ

Suddi Udaya

ಉಜಿರೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ : ಚೆಕ್ ಅಮಾನ್ಯ ಪ್ರಕರಣ ಆರೋಪಿ ಲಾಯಿಲ ನಿವಾಸಿ ಸಾಜಿಲ್ ಗೆ ಶಿಕ್ಷೆ

Suddi Udaya
error: Content is protected !!