23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ನಲ್ಲಿ ಭಜನಾ ಕಾರ್ಯಕ್ರಮ

ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ನಲ್ಲಿ ಭಜನಾ ಕಾರ್ಯಕ್ರಮವನ್ನು ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ. ಎನ್. ಜನಾರ್ದನ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ದಿನನಿತ್ಯದ ಒತ್ತಡ, ಆತಂಕಗಳನ್ನು ದೂರ ಮಾಡಿ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಭಜನೆ ನಡೆಯುವ ಸ್ಥಳದಲ್ಲಿ ಧನಾತ್ಮಕ ಕಂಪನಗಳು ಸೃಷ್ಟಿಯಾಗುತ್ತವೆ. ದೇವರ ನಾಮದ ಕಡೆಗೆ ಗಮನ ಹರಿಸುವುದರಿಂದ ಮೆದುಳಿನ ಏಕಾಗ್ರತೆ ಮತ್ತು ಸ್ಮರಣಶಕ್ತಿ ಉತ್ತಮಗೊಳ್ಳುತ್ತದೆ ಎಂದರು. ಭಜನಾ ಪರಿಷತ್ ರಾಜ್ಯಾಧ್ಯಕ್ಷ ಪಿ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ಮಾತನಾಡಿ ಸಮೂಹ ಭಜನೆಗಳಲ್ಲಿ ಜಾತಿ, ಮತ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಹಾಡುವುದರಿಂದ ಸಮಾಜದಲ್ಲಿ ಸೌಹಾರ್ದತೆ ಬೆಳೆಯುತ್ತದೆ. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಭಾಷೆ ಮತ್ತು ಧಾರ್ಮಿಕ ಮೌಲ್ಯಗಳನ್ನು ಪರಿಚಯಿಸಲು ಭಜನೆ ಸರಳ ಮಾರ್ಗವಾಗಿದೆ.ನಿರಂತರ ಭಜನೆ ನಡೆಯಲಿ ಎಂದರು.

ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ ಅಳಿಯೂರು, ಸಿರಿ ಸಂಸ್ಥೆಯ ನಿರ್ದೆಶಕರಾದ ಪ್ರಸನ್ನ ಯು, ತಾಲೂಕು ಪರಿಷತ್ ಅಧ್ಯಕ್ಷರಾದ ರವಿರಾಜ್ ಚಾರ್ಮಾಡಿ, ಚಂದ್ರಶೇಖರ ಗೌಡ ಕಾರ್ಯದರ್ಶಿ ಭಜನಾ ಪರಿಷತ್ ಬೆಳ್ತಂಗಡಿ, ಗಣೇಶ್ ಕಣ್ಣಾಜೆ ಕೋಶಾಧಿಕಾರಿ,ಭಜನಾ ಸಂಚಾಲಕಿ ಪದ್ಮಾವತಿ ಹಾಗೂ ಸಿರಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಜೀವನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿಗೆ ಲಗ್ಗೆ ಇಟ್ಟ ಅತ್ಯಾಧುನಿಕ ‘ಫೋರ್ಸ್ ಅರ್ಬಾನಿಯಾ’-ಐಷಾರಾಮಿ ಪ್ರಯಾಣದ ಹೊಸ ಪರ್ವ ಆರಂಭ

Suddi Udaya

ಉದ್ಯಮಿ ಶಶಿಧರ ಶೆಟ್ಟಿ- ಶ್ರೀಮತಿ ಪ್ರಮೀಳಾ ಎಸ್ ಶೆಟ್ಟಿ ಯವರಿಗೆ ವೈವಾಹಿಕ ದಾಂಪತ್ಯ ಜೀವನದ ಬೆಳ್ಳಿ ಹಬ್ಬದ ಸಂಭ್ರಮ: ಗೋಶಾಲೆಗೆ ರೂ. 1.50 ಲಕ್ಷ ಮೌಲ್ಯದ ಯಂತ್ರವನ್ನು ನೀಡುವುದಾಗಿ ಭರವಸೆ

Suddi Udaya

ಬಂಗೇರ ಕುಟುಂಬಸ್ಥರಿಂದ ಸಿ. ಎಂ, ಡಿ. ಸಿ. ಎಂ ಭೇಟಿ – ಕೃತಜ್ಞತೆ ಸಲ್ಲಿಕೆ

Suddi Udaya

ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: 23.47 ಲಕ್ಷ ನಿವ್ವಳ ಲಾಭ, ಶೇ.9 ಡಿವಿಡೆಂಟ್ ಘೋಷಣೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಒರಿಂಟೇಷನ್ ಕಾರ್ಯಕ್ರಮ

Suddi Udaya

ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ : ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ

Suddi Udaya
error: Content is protected !!