23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ಮುಂಡೂರು ಶ್ರೀನಾಗಕಲ್ಲುರ್ಟಿ ಕ್ಷೇತ್ರದಲ್ಲಿ ಶ್ರೀನಾಗಬ್ರಹ್ಮ ದೇವರ ಪುನರ್ ಪ್ರತಿಷ್ಠಾ ಕಲಶೋತ್ಸವ

ಬೆಳ್ತಂಗಡಿ: ಶ್ರೀ ನಾಗಂಬಿಕಾ ದೇವಸ್ಥಾನ ಮತ್ತು ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಶ್ರೀ ಕ್ಷೇತ್ರ ಮಂಗಳಗಿರಿ ಮುಂಡೂರುನಲ್ಲಿ ಶ್ರೀ ನಾಗಬ್ರಹ್ಮ ದೇವರ ಪುನರ್ ಪ್ರತಿಷ್ಠಾ ಕಲಶೋತ್ಸವ ಜು.3 ರಂದು ವಿಜೃಂಭಣೆಯಿಂದ ಜರುಗಿತು.

ಜು.2 ಗುರುವಾರ ಸಂಜೆ ಗಂಟೆ 6 ರಿಂದ ದೀಪ ಪ್ರಜ್ವಲನೆ, ದೇವತಾ ಪ್ರಾರ್ಥನೆ, ಪಂಚಗವ್ಯ ಮೇಲನ, ಸಹಿತಾ ಸ್ವಸ್ತಿ ಪುಣ್ಯಾಹ ವಾಚನ, ಭೂವರಾಹ ಹೋಮ, ವಾಸ್ತು ಹೋಮ, ವಾಸ್ತುಬಲಿ, ಪ್ರಾಕಾರ ಬಲಿ, ಬಿಂಬಶುದ್ಧಿ, ಧಾನ್ಯಾದಿವಾಸ, ಆದಿವಾಸ ಹೋಮ, ಶಯನಾದಿವಾಸ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಮೊದಲಾದ ಕಾರ್ಯಕ್ರಮಗಳು ಜರುಗಿತು.


ಜು.3 ಶುಕ್ರವಾರ ಬೆಳಿಗ್ಗೆ ಗಂಟೆ 8.36ಕ್ಕೆ ನಾಗಬ್ರಹ್ಮ ದೇವರ ಪ್ರತಿಷ್ಠೆ, ಆಶ್ಲೇಷ ಬಲಿ, ತನು ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನದ ಆಡಳಿತ ಮೊಕ್ತೇಸರಾದ ರಾಜೀವ್, ನಾಗಾಂಭಿಕ ಭಜನಾ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ ಪದಾಧಿಕಾರಿಗಳು, ಊರ ಹಾಗೂ ಪರವೂರುಗಳಿಂದ ಆಗಮಿಸಿದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧನ್ಯತೆಯನ್ನು ಪಡೆದರು.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಪೋಷಕರಿಂದ ಗಿಡ ನೆಡುವ ಕಾರ್ಯಕ್ರಮ

Suddi Udaya

ಅರಸಿನಮಕ್ಕಿ: ಕಾಪು-ಉಪರಡ್ಕ ಬಳಿ ರಸ್ತೆಗೆ ಬೃಹತ್ ಗಾತ್ರದ ಮರ ಬಿದ್ದು 2 ವಿದ್ಯುತ್ ಕಂಬಗಳಿಗೆ ಹಾನಿ

Suddi Udaya

ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಚೆಂಡೆ ತರಬೇತಿ ಉದ್ಘಾಟನೆ

Suddi Udaya

ಅಟಲ್ ಟಿಂಕರ್ ಫೆಸ್ಟ್ 2025: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ

Suddi Udaya

ಹೊಸಂಗಡಿ ಗ್ರಾ.ಪಂ. ಮತ್ತು ಅರಣ್ಯ ಇಲಾಖೆಯ ವತಿಯಿಂದ ವನಮಹೋತ್ಸವ

Suddi Udaya

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ನೊಚ್ಚ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಶೆಟ್ಟಿ,

Suddi Udaya
error: Content is protected !!