23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಹಮ್ಮದ್ ಹಫೀಝ್ 100ನೇ ದಿನದ ಸ್ಮರಣಾರ್ಥ ಎಸ್.ಬಿ.ಎಸ್ ಕುಂಟಿನಿ ಮದರಸ ವತಿಯಿಂದ ರಕ್ತದಾನ ಶಿಬಿರ

ಲಾಯಿಲ: ಅಲ್ ಬುಖಾರಿ ಜುಮ್ಮಾ ಮಸ್ಜಿದ್ ಕುಂಟಿನಿ ಮತ್ತು ಎಸ್.ಬಿ.ಎಸ್. ಕುಂಟಿನಿ ಮದರಸ ವತಿಯಿಂದ ಎನಾಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಇವರ ಸಹಕಾರದೊಂದಿಗೆ ಅಕಾಲಿಕವಾಗಿ ಅಗಲಿದ ಮುಹಿಯುದ್ದೀನ್ ಅರಬಿಕ್ ಸೆಕೆಂಡರಿ ಮದ್ರಸದ ವಿದ್ಯಾರ್ಥಿ ಮುಹಮ್ಮದ್ ಹಫೀಝ್ 100ನೇ ದಿನದ ಸ್ಮರಣಾರ್ಥ ಜು. 5ರಂದು ಕುಂಟಿನಿ ಮದ್ರಸ ವಠಾರದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಶಿಬಿರದ ಉದ್ಘಾಟನೆಯನ್ನು ಅಲ್ ಬುಖಾರಿ ಜುಮಾ ಮಸ್ಜಿದ್ ಖತೀಬರಾದ ಶರೀಫ್ ಸುಲ್ತಾನಿ ಸಖಾಫಿ ವಹಿಸಿದರು. ಅಧ್ಯಕ್ಷತೆಯನ್ನು ಕೇಂದ್ರ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಸುಪ್ರಿಮ್‌ ನೆರವೇರಿಸಿದರು.
ಶಿಬಿರದಲ್ಲಿ ಹಲವಾರು ದಾನಿಗಳು ರಕ್ತದಾನ ಮಾಡಿದರು. ಒಟ್ಟು 53 ಯುನಿಟ್ ರಕ್ತ ಸಂಗ್ರಹಣೆ ಮಾಡಲಾಯಿತು. ವೇದಿಕೆಯಲ್ಲಿ ಅಲ್‌ಬುಖಾರಿ ಜುಮಾ ಮಸ್ಜಿದ್ ಅಧ್ಯಕ್ಷ ಅಶ್ರಫ್, ಕಾರ್ಯದರ್ಶಿ ರವೂಫ್, ಮಾಜಿ ಅಧ್ಯಕ್ಷ ಇಸ್ಮಾಯಿಲ್ ಸನಾ, ಮಾಜಿ ಕಾರ್ಯದರ್ಶಿಯೂಸುಫ್ ಬಾಬ, ಕೇಂದ್ರ ಮಸೀದಿ ಕಾರ್ಯದರ್ಶಿ ಆರಿಸ್ ಏ ಟು ಝೆಡ್, ಎಂಗ್‌ಮೆನ್ಸ್ ಅಧ್ಯಕ್ಷ ಶಾಕಿರ್, ಮುಹಿಯುದ್ದೀನ್ ಸೆಕೆಂಡರಿ ಮದ್ರಸ ಕುಂಟಿನಿ ಇದರ ಸದರ್ ಉಸ್ತಾದರಾದ ಫಾರೂಕ್ ಸಅದಿ, ಮುಅಲ್ಲಿಮರುಗಳಾದ ಇಬ್ರಾಹಿಂ ಅಲ್ ಫುರ್ಕಾಣಿ, ನೌಷದ್ ಸಅದಿ ದಿಡುಪೆ ಎನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಡಾಕ್ಟರ್ ಸಿದ್ದಾರ್ಥ್ ಉಪಸ್ಥಿತರಿದ್ದರು. ಕಾರ್ಯಕ್ರಮ ಆಸಿರ್ ಕುಂಟಿನಿ ನಿರೂಪಿಸಿ ವಂದಿಸಿದರು.

Related posts

ಬಜೆಟ್ ನಿಂದ ಭಾರತದ ವರ್ಚಸ್ಸು ವಿಶ್ವ ಮಟ್ಟದಲ್ಲಿ ಹೆಚ್ಚಿಸಿದೆ: ಕಿರಣ್ ಚಂದ್ರ ಪುಷ್ಪಗಿರಿ

Suddi Udaya

ಅಳದಂಗಡಿಯಲ್ಲೊಂದು ಅಪರೂಪದ ಕಾರ್ಯಕ್ರಮ: ಧಾರ್ಮಿಕ ಚಿಂತಕ ನಿರಂಜನ್ ಜೈನ್ ಕುದ್ಯಾಡಿ ಹಾಗೂ 20 ಮಂದಿ ಮೆಸ್ಕಾಂ ಸಿಬ್ಬಂದಿಗಳಿಗೆ ಸನ್ಮಾನ

Suddi Udaya

ವಿಧಾನಸಭಾ ಚುನಾವಣೆಗೆ ಪಕ್ಷೇತರರಾಗಿ ಮಹೇಶ್ ನಾಮಪತ್ರ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಸಾವು: ವಾರೀಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಮಚ್ಚಿನ ಸ.ಉ.ಹಿ.ಪ್ರಾ. ಶಾಲಾ ಎಸ್. ಡಿ ಎಮ್ ಸಿ ನೂತನ ಸಮಿತಿ ರಚನೆ

Suddi Udaya

ಇಂದು (ಜ.30) ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರರವರು ಶ್ರೀ ಕ್ಷೇತ್ರ ಧರ್ಮಸ್ಥಳ ಭೇಟಿ: ಪುಂಜಾಲಕಟ್ಟೆಯಿಂದ ಧರ್ಮಸ್ಥಳದವರೆಗೆ ಬೈಕ್ ರ್‍ಯಾಲಿ ಮೂಲಕ ಸ್ವಾಗತ

Suddi Udaya
error: Content is protected !!