32.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಲೇಡಿ ಜೆಸಿ ಮತ್ತು ಜೂನಿಯರ್ ಸಮ್ಮೇಳನ: ಜೆಸಿಐ ಉಜಿರೆ ಸಿಟಿ ಘಟಕಕ್ಕೆ ವಲಯದ ಅತ್ಯುತ್ತಮ ಲೇಡಿ ಜೆಸಿ ವಿಂಗ್ ರನ್ನರ್ ಅಪ್ ಪ್ರತಿಷ್ಠಿತ ಪ್ರಶಸ್ತಿಯೊಂದಿಗೆ ಹಲವು ಗೌರವ ಮನ್ನಣೆಗಳು

ಬೆಳ್ತಂಗಡಿ: ಜೆಸಿಐ ಜೆಸಿ ಬೈಂದೂರ್ ಸಿಟಿ ಆತಿಥ್ಯದಲ್ಲಿ ನಡೆದ ವಲಯ 15ರ ಲೇಡಿ ಜೆಸಿ ಸಮ್ಮೇಳನದಲ್ಲಿ ಜೆಸಿ ಉಜಿರೆ ಸಿಟಿ ಘಟಕವು ಹಲವು ಯಶಸ್ವೀ ಕಾರ್ಯಕ್ರಮಗಳೊಂದಿಗೆ ಅತ್ಯುತ್ತಮ ಲೇಡಿ ಜೇಸಿ ವಿಂಗ್ ಟಾಪ್ ಟು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ವಲಯದ ಮೆಚ್ಚುಗೆಗೆ ಪಾತ್ರವಾಗಿದೆ.

ಅತ್ಯುತ್ತಮ ಲೇಡಿಜೆ ಸಿವಿಂಗ್ ರನ್ನರ್ ಪ್ರಶಸ್ತಿಯನ್ನು ವಲಯ ಅಧ್ಯಕ್ಷರಾದ ಜೆಎಫ್ಎಸ್ ಸಂತೋಷ್ ಶೆಟ್ಟಿ ನೀಡಿ ಗೌರವಿಸಿದರು. ಲೇಡಿಜೆಸಿ ವಲಯ ನಿರ್ದೇಶಕಿ ಗಾಯತ್ರಿ ರಾಜೇಶ್,ಫಸ್ಟ್ ಲೇಡಿ ಸಿಂಧು ಶೆಟ್ಟಿ, ವಲಯ ಉಪಾಧ್ಯಕ್ಷ ಅರುಣ್ ಮಾಂಜ, G&D ನಿರ್ದೇಶಕ ರಂಜಿತ್ ಎಚ್ ಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಘಟಕ ಅಧ್ಯಕ್ಷ ಮೊಹಮ್ಮದ್ ಮಿರ್ಷಾದ್, ನಿಕಟ ಪೂರ್ವಾಧ್ಯಕ್ಷೆ ಆಶಾಲತಾ ಪ್ರಶಾಂತ್, ಕಾರ್ಯದರ್ಶಿ ಭವ್ಯಶ್ರೀ ಕೀರ್ತಿರಾಜ್, ಮಹಿಳಾ ಜೇಸಿ ಸಂಯೋಜಕಿ ಹೇಮಾವತಿ ಕೆ, ಸದಸ್ಯರಾದ ಸುಮಿತ್ರ, ಮಾನ್ಯ, ಯಕ್ಷಿತಾ, ಪ್ರಶಂಸ, ರಮ್ಯ ಪಾಲ್ಗೊಂಡಿದ್ದರು.

ಘಟಕವು ನಡೆಸಿದ ಮಹಿಳಾ ದಿನಾಚರಣೆ, ಸಾಧಕ ಮಹಿಳೆಯರಿಗೆ ಗೌರವ, ಜಾಗೃತಿ ಕಾರ್ಯಕ್ರಮ, ಕರಪತ್ರ ವಿತರಣೆ, ಹೆಣ್ಣು ಮಕ್ಕಳಿಗೆ ಆರೋಗ್ಯ ಮಾಹಿತಿ, ಉದ್ಯಮಶೀಲತಾ ತರಬೇತಿ, ಪರಿಸರ ದಿನಾಚರಣೆ, ರಕ್ತದಾನ ಜಾಗೃತಿ ಕಾರ್ಯಕ್ರಮ, ವ್ಯಕ್ತಿತ್ವ ತರಬೇತಿ ಕಾರ್ಯಕ್ರಮ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಮೊದಲಾದ ಕಾರ್ಯಕ್ರಮಗಳ ಮೂಲಕ ನಮ್ಮ ಘಟಕವು ವಲಯ ಸಮ್ಮೇಳನದಲ್ಲಿ ಗಮನ ಸೆಳೆದು ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.

ಗೌರವ ಮನ್ನಣೆಗಳು:
ವಲಯದ ಕಾರ್ಯಕ್ರಮಗಳಾದ ಶೆರೋಸ್ ಡೇ, ಪ್ರಯಾಸ ಡೇ, ವಾವ್ ವುಮನ್ ಆಫ್ ವರ್ತ್ ಅವಾರ್ಡ್, ಮಾಮ್ ಅಂಡ್ ಮಿ ಫೋಟೋ ಸ್ಪರ್ಧೆ, ಮಹಿಳಾ ಜಾಗೃತಿ ಪಥ,ಫೆಮಿ ಸರ್ಚ್ ಕಾರ್ಯಕ್ರಮಗಳ ಮನ್ನಣೆಗಳನ್ನು ಪಡೆದುಕೊಂಡಿದೆ.
ಸ್ಪರ್ಧೆಗಳಲ್ಲಿ ಮಿಂಚಿದ ಘಟಕ : ರಂಗೋಲಿ ಸ್ಪರ್ಧೆ ಪ್ರಥಮ, ಹೂಗುಚ್ಚ ತಯಾರಿ ದ್ವಿತೀಯ, ಮೆಹಂದಿ ಸ್ಪರ್ಧೆ ದ್ವಿತೀಯ,
ಘಟಕದ ಬ್ಯಾನರ್ ಪ್ರದರ್ಶನ ದ್ವಿತೀಯ, ಫ್ಯಾಶನ್ ಶೋ- ಸೆಕೆಂಡ್ ರನ್ನರ್ ಅಪ್ ಟ್ರೊಫಿ ಮತ್ತು 2000 ರೂ ನಗದು ಬಹುಮಾನ

ನೂತನ ಘಟಕವಾಗಿ ಕೇವಲ ಒಂದು ವರ್ಷದ ಅವಧಿಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಪ್ರಶಸ್ತಿ ಮನ್ನಣೆಗಳನ್ನು ಪಡೆದು ವಲಯದ ಗಮನ ಸೆಳೆದಿರುವುದು ಅತೀವ ಸಂತಸ ತಂದಿದೆ. ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಇದೆ.
–ಜೇಸಿ ಮೊಹಮ್ಮದ್ ಮಿರ್ಷಾದ್ ಘಟಕಾಧ್ಯಕ್ಷರು, ಜೆಸಿಐ ಉಜಿರೆ ಸಿಟಿ

ಪ್ರತಿಷ್ಠಿತ ಪ್ರಶಸ್ತಿ ಮತ್ತು ಮನ್ನಣೆ ಗಳನ್ನು ಪಡೆಯುವಲ್ಲಿ ಘಟಕದ ಅಧ್ಯಕ್ಷರ ಯಶಸ್ವಿ ನಾಯಕತ್ವ, ನಿಕಟ ಪೂರ್ವಾಧ್ಯಕ್ಷರ ಪ್ರೋತ್ಸಾಹ, ಕಾರ್ಯದರ್ಶಿಯವರ ಕ್ರಿಯಾಶೀಲತೆ ಪದಾಧಿಕಾರಿಗಳ ಪ್ರೋತ್ಸಾಹವಿದೆ.
-ಜೇಸಿ ಹೇಮಾವತಿ. ಕೆ ಲೇಡಿ ಜೇಸಿ ಸಂಯೋಜಕರು (ವಲಯ ತರಬೇತುದಾರರು)

Related posts

ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿಗಳಾಗಿ ಸೀತಾರಾಮ್ ಬೆಳಾಲು ಹಾಗೂ ವಸಂತಿ ಮಚ್ಚಿನ ಆಯ್ಕೆ

Suddi Udaya

ಉಜಿರೆ- ಬೆಳಾಲು ರಸ್ತೆಯ ಕಿರಿಯಾಡಿ ಕ್ರಾಸ್ ಬಳಿ ಧರೆಗುರುಳಿದ 33 ಕೆವಿ ವಿದ್ಯುತ್ ಟವರ್ ದೊಂಡೋಲೆ ಪವರ್ ಪ್ರಾಜೆಕ್ಟ್ ನವರಿಗೆ ಸೇರಿದ ಕಾರು – ಬೈಕ್ ಜಖಂ: ಕಾರಿನೊಳಗೆ ಇದ್ದ ‌ಪವರ್ ಪ್ರಾಜೆಕ್ಟ್ ನ ಸಿಬ್ಬಂದಿ ಗಣೇಶ್ ಅಪಾಯದಿಂದ ಪಾರು

Suddi Udaya

ಇಂದಬೆಟ್ಟು: ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೆ ಹರಿದ ಮಳೆ ನೀರು ಹಾಗೂ ರಸ್ತೆಯುದ್ದಕ್ಕೂ ಬಾಗಿ ನಿಂತ ಅಪಾಯಕಾರಿ ಮರಗಳು

Suddi Udaya

ಕನ್ಯಾಡಿ ಸೇವಾಭಾರತಿಯಿಂದ 7 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್‌ನಲ್ಲಿ ಚಿನ್ನೋತ್ಸವ ಪ್ರಾರಂಭ: 20 ಸಾವಿರದ ಡೈಮಂಡ್ ಖರೀದಿಗೆ 5 ಕಾರು ಗೆಲ್ಲುವ ಸುವರ್ಣಾವಕಾಶ

Suddi Udaya

ಉಜಿರೆ : ಕುಂಜರ್ಪ ಕೊರಗಜ್ಜ ದೈವದ ನೇಮೋತ್ಸವ

Suddi Udaya
error: Content is protected !!