24.8 C
ಪುತ್ತೂರು, ಬೆಳ್ತಂಗಡಿ
October 8, 2026
ತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿ

ನಮ್ಮ ಕುಡ್ಲ “ನೃತ್ಯ ಭಜನೆ ” ಸೀಸನ್–4 ಸ್ಪರ್ಧೆಯಲ್ಲಿ ಶ್ರೀ ಜನಾರ್ಧನಸ್ವಾಮಿ ಕುಣಿತ ಭಜನಾ ಮಂಡಳಿ, ಉಜಿರೆ ತಂಡಕ್ಕೆ ಪ್ರಥಮ ಬಹುಮಾನ

ಬೆಳ್ತಂಗಡಿ: ಜು.5ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆದ ನಮ್ಮ ಕುಡ್ಲ “ನೃತ್ಯ ಭಜನೆ ” ಸೀಸನ್–4 ಸ್ಪರ್ಧೆಯಲ್ಲಿ ಶ್ರೀ ಜನಾರ್ಧನಸ್ವಾಮಿ ಕುಣಿತ ಭಜನಾ ಮಂಡಳಿ, ಉಜಿರೆ ತಂಡವು ಅದ್ಭುತ ಪ್ರದರ್ಶನ ನೀಡಿ ಪ್ರಥಮ ಬಹುಮಾನ ಹಾಗೂ ರೂ.25,000 ನಗದು ಬಹುಮಾನ ತನ್ನದಾಗಿಸಿಕೊಂಡಿತು.

ಕೇವಲ 3 ತಿಂಗಳ ಹಿಂದೆ ಆರಂಭವಾದ ಈ ತಂಡ, ನಿರಂತರ ಅಭ್ಯಾಸ, ಶಿಸ್ತು, ಪರಿಶ್ರಮ ಮತ್ತು ತಂಡದ ಒಗ್ಗಟ್ಟಿನ ಬಲದಿಂದ ಅಲ್ಪ ಅವಧಿಯಲ್ಲೇ ಈ ಮಹತ್ವದ ಸಾಧನೆಯನ್ನು ದಾಖಲಿಸಿದೆ. ಪ್ರತಿಯೊಬ್ಬ ಸದಸ್ಯರ ಸಮರ್ಪಣೆ, ಸಂಯೋಜಕರ ಶ್ರಮ ಹಾಗೂ ಹಿರಿಯರ ಆಶೀರ್ವಾದದಿಂದ ಈ ವಿಜಯ ಸಾಧ್ಯವಾಯಿತು.

ಈ ಸಾಧನೆಯ ಹಿಂದೆ ಹಾಡು ಮತ್ತು ಕುಣಿತ ಸಂಯೋಜಕರ ಶ್ರಮ ಅತ್ಯಂತ ಮಹತ್ವದ್ದಾಗಿದೆ. ತಂಡದ ಪ್ರತಿಯೊಬ್ಬ ಸದಸ್ಯರೂ ತಮ್ಮ ಪ್ರತಿಭೆ, ಶಿಸ್ತು ಮತ್ತು ಸಮರ್ಪಣೆಯಿಂದ ವೇದಿಕೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ತೀರ್ಪುಗಾರರು ಹಾಗೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ತಂಡದ ಸದಸ್ಯರು: ಸುನಿಲ್ ದೇವಾಡಿಗ ಉಜಿರೆ (ಹಾಡು ಸಂಯೋಜಕರು), ಶಿವಶಂಕರ್ ಗೇರುಕಟ್ಟೆ (ಹಾಡು ಸಂಯೋಜಕರು), ಅನ್ವಿತ್ ಬೆಳ್ತಂಗಡಿ (ಕುಣಿತ ಸಂಯೋಜಕರು), ಆಯುಷ್ ನಾಳ, ಹರ್ಷಿಣಿ ಶೆಟ್ಟಿ ನಾವೂರು, ತೃಷ ನಾವೂರು, ಉದಿತ್ ಉಜಿರೆ, ಮಾನ್ಯ ಕೋಟ್ಯಾನ್ ಉಜಿರೆ, ಕೃತಿ ಉಜಿರೆ, ಭೂಷಣ್ ಶೆಟ್ಟಿಗಾರ್ ಉಜಿರೆ, ಧನ್ವಿ ಉಜಿರೆ, ಸಿಂಚನ ಉಜಿರೆ, ದೀಕ್ಷಾ ಉಜಿರೆ, ಸಮನ್ವಿ ಉಜಿರೆ

ತಂಡದ ಈ ಯಶಸ್ಸಿಗೆ ಸಹಕರಿಸಿದ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ, ತೀರ್ಪುಗಾರರು, ಸಂಘಟಕರು, ದಾನಿಗಳು, ಅಭಿಮಾನಿಗಳು ಹಾಗೂ ಪ್ರತಿಯೊಬ್ಬ ಬೆಂಬಲಿಗರಿಗೂ ತಂಡವು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.

“ಕೇವಲ ಮೂರು ತಿಂಗಳ ಪಯಣ… ಆದರೆ ಮೂರು ತಿಂಗಳ ಪರಿಶ್ರಮಕ್ಕೆ ಸಿಕ್ಕ ಮೊದಲ ದೊಡ್ಡ ಗೆಲುವು. ಇದು ಅಂತ್ಯವಲ್ಲ, ಇನ್ನೂ ಅನೇಕ ಸಾಧನೆಗಳ ಆರಂಭ.”

Related posts

ಅರಸಿನಮಕ್ಕಿ: ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಸದಸ್ಯರಿಗೆ ಸಮವಸ್ತ್ರ ವಿತರಣೆ

Suddi Udaya

ಎಲ್ ಸಿ ಆರ್. ವಿದ್ಯಾಸಂಸ್ಥೆಗೆ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

Suddi Udaya

ಬೆಳ್ತಂಗಡಿ: ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಕೆ ಗಂಗಾಧರ ಗೌಡರವರ ನೂತನ ಕಛೇರಿ ಉದ್ಘಾಟನೆ

Suddi Udaya

ಬಿಜೆಪಿ ಓಡಿಲ್ನಾಳ ಶಕ್ತಿ ಕೇಂದ್ರ ಅಧ್ಯಕ್ಷರಾಗಿ ರಾಜ್ ಪ್ರಕಾಶ್ ಶೆಟ್ಟಿ ಆಯ್ಕೆ

Suddi Udaya

ಹರಿಯಾಣದಲ್ಲಿ ನಡೆಯುವ ಗೋಲ್ಡನ್ ಆರೋ ರ್‍ಯಾಲಿಗೆ ಬೆಳ್ತಂಗಡಿಯ ಸೇವಂತಿ, ದ್ವಿಶಾ ಆಯ್ಕೆ

Suddi Udaya

ನೇಲ್ಯಡ್ಕ ಸರ್ಕಾರಿ ಪ್ರೌಢಶಾಲೆಗೆ ಮಂಗಳೂರಿನ ಎಂಸಿಸಿ ಬ್ಯಾಂಕ್ ನಿಂದ ಕ್ರೀಡಾ ಉಪಕರಣಗಳ ಕೊಡುಗೆ

Suddi Udaya
error: Content is protected !!