23.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉತ್ತಮ ಶಾಸಕ ಪ್ರಶಸ್ತಿ ಪಡೆದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರಿಗೆ ಇಂದಬೆಟ್ಟು ಕಾರ್ಯಕರ್ತರಿಂದ ಗೌರವಾರ್ಪಣೆ

ಇಂದಬೆಟ್ಟು: ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದಲ್ಲಿ ಉತ್ತಮ ಶಾಸಕ ಪ್ರಶಸ್ತಿ ಪಡೆದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರಿಗೆ ಸ್ವಗೃಹ ಮಿಥಿಲಾದಲ್ಲಿ ಬಿಜೆಪಿ ಇಂದಬೆಟ್ಟು ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಕಾಂತ್ ಎಸ್ ಇಂದಬೆಟ್ಟು ಇವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಗೌರವ ಅರ್ಪಣೆ ಸಲ್ಲಿಸಿದರು.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವುದು ಶಾಸಕ ಹರೀಶ್ ಪೂಂಜಾ ರವರ ಅವಿರತ ಶ್ರಮದ ಫಲ, ಬೆಳ್ತಂಗಡಿ ಕ್ಷೇತ್ರದ ಪ್ರತಿ ಗ್ರಾಮದ ಜನತೆಯ ಮನೆಯ ಜೊತೆ ಮನವನ್ನು ಮುಟ್ಟಿರುವ ಕ್ರಿಯಾಶೀಲ ಸದಾ ಚಟುವಟಿಕೆಗಳಿಂದ ಕೆಲಸ ಮಾಡುತ್ತಿರುವುದು ಜನತೆಯ ಜನ ಸ್ನೇಹಿ ಶಾಸಕರು ಬೆಸ್ಟ್ ಶಾಸಕ ಪ್ರಶಸ್ತಿ ಪಡೆದಿರುವುದು ಬೆಳ್ತಂಗಡಿ ತಾಲೂಕಿನ ಪ್ರತಿಯೊಬ್ಬ ಪ್ರಜೆಗೂ ಸಿಕ್ಕ ಗೌರವವಾಗಿದೆ. 2028 ರಲ್ಲಿ ಮತ್ತೊಮ್ಮೆ ಜನತೆಯ ಬಹುಮತದ ಆಯ್ಕೆಯೊಂದಿಗೆ ಘನ ಸರ್ಕಾರದಲ್ಲಿ ಸಚಿವರಾಗಿ 5 ವರ್ಷಗಳ ಹಿಂದೆ ನಡೆಯುತ್ತಿದ್ದ ಅಭಿವೃದ್ಧಿಯ ವೇಗ ಮರುಕಳಿಸಲಿದೆ ಆ ಮೂಲಕ ಬೆಳ್ತಂಗಡಿ ತಾಲೂಕು ದೇಶದಲ್ಲಿ ಮಾದರಿ ಕ್ಷೇತ್ರವಾಗಿ ರೂಪಿಸುವ ತಮ್ಮ ಕನಸು ನನಸು ಆಗುವುದರ ಜೊತೆಗೆ ಇನ್ನಷ್ಟು ಅತ್ಯುನ್ನತ ಗೌರವ ಪ್ರಶಸ್ತಿಗಳು ತಮಗೆ ಸಿಗಲಿ ದೇವನಾರಿ ಶ್ರೀ ಅರ್ಧನಾರೀಶ್ವರ ಸ್ವಾಮಿಯ ಹಾಗೂ ಉಳ್ಳಾಕುಳ ಅನುಗ್ರಹ ಇರಲಿ ಎಂದು ಕಾರ್ಯಕರ್ತರು ಹಾರೈಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಆಶಾಲತಾ, ನಿಕಟಪೂರ್ವ ಅಧ್ಯಕ್ಷ ಆನಂದ ಅಡಿಲು, ಸದಸ್ಯರಾದ ಪ್ರಮೋದ್ ಕುಮಾರ್, ಸತೀಶ್ ಬೆದ್ರಬೆಟ್ಟು, ಬೂತ್ ಅಧ್ಯಕ್ಷರುಗಳಾದ ಶಶಿಧರ ಗೌಡ ಪಡೆಂಕ್ಕಲ್, ಸಂಜೀವ ಗೌಡ ದರ್ಖಸು, ನಿತೇಶ್ ಕಡಿತ್ಯಾರು, ನವೀನ್ ಜೈನ್, ಗಣೇಶ್ ಆಚಾರ್ಯ ಮುಂಡ್ರಬೆಟ್ಟು, ಪ್ರತೀಶ್ ಕಡಿತ್ಯಾರು, ತಾಲೂಕು ಯುವ ಮೋರ್ಚಾ ಸದಸ್ಯರಾದ ಸಂತೋಷ್ ಉಂಬೇಜೆ, ರೈತ ಮೋರ್ಚಾದ ಉಪಾಧ್ಯಕ್ಷರಾದ ಪಳನಿ ಸ್ವಾಮಿ, ಹಾಲಿನ ಸೊಸೈಟಿ ಅಧ್ಯಕ್ಷ ಚಂದ್ರಶೇಖರ ಕಾಂಜಾನು, ಆದಿಚುಂಚನಗಿರಿ ಶ್ರೀ ಮಠದ ಅರ್ಚಕರಾದ ಶ್ರೀನಾಥ್ ಸೋಮಯ್ಯದಡ್ಡು, ಪಕ್ಷದ ಅನನ್ಯ ಜವಾಬ್ದಾರಿಯ ಪದಾಧಿಕಾರಿಗಳು, ಹಿರಿಯ ಹಾಗೂ ಕಿರಿಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Related posts

ಪಾರೆಂಕಿ :ಶ್ರೀ ರಾಮನಗರಹಾರಬೆ ಶ್ರೀ ದುಗಲಾಯ ಮತ್ತು ಗುಳಿಗದೈವಗಳ ನೇಮೋತ್ಸವ

Suddi Udaya

ಫ್ಯಾಷನ್ ಡಿಸೈನ್ ನಲ್ಲಿ ಮಂಗಳೂರು ವಿ.ವಿ. ಗೆ 3ನೇ ರ‍್ಯಾಂಕ್ ಪಡೆದ ಉಜಿರೆಯ ಹವನ ಪಿ. ಪೂಜಾರಿ

Suddi Udaya

ಜು.8ರಿಂದ ಗಡಾಯಿಕಲ್ಲು ಚಾರಣಕ್ಕೆ ನಿರ್ಬಂಧ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರು

Suddi Udaya

ಬೆಳ್ತಂಗಡಿ ರೋಟರೀ ಕ್ಲಬ್ ನಿಂದ ರೂ. 40 ಲಕ್ಷ ಮೌಲ್ಯದ ಕೊಡುಗೆ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಶಾರದೋತ್ಸವ ಅಂಗವಾಗಿ ವಾಲಿಬಾಲ್ ಪಂದ್ಯಾಟದ ಉದ್ಘಾಟನೆ

Suddi Udaya
error: Content is protected !!