24.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವಿಶ್ವ ವೈದ್ಯರ ದಿನಾಚರಣೆ: ಉಪ್ಪಿನಂಗಡಿಯ ವೈದ್ಯರಿಗೆ ಯುವವಾಹಿನಿ ಉಪ್ಪಿನಂಗಡಿ ಘಟಕದ ವತಿಯಿಂದ ಗೌರವಾರ್ಪಣೆ

ಉಪ್ಪಿನಂಗಡಿ: ವಿಶ್ವ ವೈದ್ಯರ ದಿನಾಚರಣೆ-2026ರ ಅಂಗವಾಗಿ ಯುವವಾಹಿನಿ ಉಪ್ಪಿನಂಗಡಿ ಘಟಕದ ವತಿಯಿಂದ ಉಪ್ಪಿನಂಗಡಿಯ ವಿವಿಧ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳಿಗೆ ಭೇಟಿ ನೀಡಿ ಸೇವಾನಿರತ ವೈದ್ಯರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಡಾ. ರಾಜಾರಾಮ್ ಕೆ.ಬಿ., ಡಾ. ರಮ್ಯಾ ರಾಜಾರಾಮ್, ಡಾ. ಎಂ.ಆರ್. ಶೆಣೈ, ಡಾ. ಕೆ.ಜಿ. ಭಟ್, ಡಾ. ಎಂ.ಎನ್. ಭಟ್, ಡಾ. ರಘು, ಡಾ. ಸದಾನಂದ ಕುಂದರ್, ಡಾ. ಆಶಿತ್ ಎಂ.ವಿ., ಡಾ. ಶ್ವೇತಾ ಆಶಿತ್, ಡಾ. ನಿರಂಜನ್ ರೈ, ಡಾ. ಯತೀಶ್ ಶೆಟ್ಟಿ, ಡಾ. ಸುಪ್ರೀತ್ ಲೋಬೋ, ಡಾ. ಶೌರಿ ರೈ, ಕೆಎಂಎಫ್‌ನ ಪಶುವೈದ್ಯಾಧಿಕಾರಿ ಡಾ. ಜಿತೇಂದ್ರ ಹಾಗೂ ಸೂರ್ಯ ಆಸ್ಪತ್ರೆಯ ರಾಜೇಶ್ ಭಟ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಘಟಕದ ಮಾಜಿ ಅಧ್ಯಕ್ಷರು ಮೂರ್ತೆದಾರರ ಬ್ಯಾಂಕ್ ಉಪ್ಪಿನಂಗಡಿ ಅಧ್ಯಕ್ಷ ಅಜಿತ್ ಕುಮಾರ್ ಪಾಲೇರಿ, ಗೌರವ ಸಲಹೆಗಾರರಾದ ವರದರಾಜ್ ಎಂ., ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸೋಮಸುಂದರ್ ಕೊಡಿಪ್ಪಾನ, ಉಪ್ಪಿನಂಗಡಿ ಘಟಕದ ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಮಾಸ್ಟರ್ ಕಲ್ಲೇರಿ, ರವಿ ಬೋಲೋಡಿ, ಜಯವಿಕ್ರಮ್ ಕಲ್ಲಾಪು, ಗುಣಕರ ಅಗ್ನಾಡಿ, ಸುನೀಲ್ ಕುಮಾರ್ ದಡ್ಡು, ಚಂದ್ರಶೇಖರ್ ಸನಿಲ್, ನಿಕಟ ಪೂರ್ವ ಅಧ್ಯಕ್ಷ ನಾಣ್ಯಪ್ಪ ಕೋಟ್ಯಾನ್, ಕೋಶಾಧಿಕಾರಿ ಸದಾಶಿವ ಬಂಗೇರ ಎಲಿಯ, ಜೊತೆ ಕಾರ್ಯದರ್ಶಿ ನಯನಾ ಮನೋಹರ್, ನಿರ್ದೇಶಕರಾದ ವನಿತಾ ಕೃಷ್ಣಪ್ಪ, ವಿದ್ಯಾ ಶಿವಚಂದ್ರ ನಿಡ್ಡೆಂಕಿ, ಹೇಮಾವತಿ ಕುಕ್ಕುಜೆ, ಪುನೀತ್ ದಾಸರಮೂಲೆ, ಸದಾನಂದ ಶಿಬಾರ್ಲ, ಸುರೇಶ್ ಶಿಬಾರ್ಲ ಹಾಗೂ ಸದಸ್ಯರಾದ ಸುರೇಶ್ ಕುಮಾರ್ ಹಲೇಜಿ, ನಾರಾಯಣ ಪೂಜಾರಿ ನೀರಕಟ್ಟೆ, ಉಮೇಶ್ ಟೈಲರ್, ಸವಿತಾ ಹರೀಶ್, ವಿಕ್ರಮ್ ಬಿಳಿಯೂರು, ರಕ್ಷಿತ್ ಬಿಳಿಯೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ , ಯುವವಾಹಿನಿ ಉಪ್ಪಿನಂಗಡಿ ಘಟಕ, ರೋಟರಿ ಕ್ಲಬ್ ಉಪ್ಪಿನಂಗಡಿ, ಜೆಸಿಐ ಉಪ್ಪಿನಂಗಡಿ ಮತ್ತು ಹಲವು ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ವೈದ್ಯಕೀಯ, ನೇತ್ರ ತಪಾಸಣಾ ಹಾಗೂ ದಂತ ಚಿಕಿತ್ಸಾ ಶಿಬಿರವನ್ನು ಯಶಸ್ವಿಗೊಳಿಸಲು ಸಹಕರಿಸಿದ ಕೆ.ಎಂ.ಸಿ ಆಸ್ಪತ್ರೆಯ ವೈದ್ಯರ ತಂಡಕ್ಕೆ ಮತ್ತು ಸಹಕರಿಸಿದ ಎಲ್ಲರಿಗೂ ಯುವವಾಹಿನಿ ಕೃತಜ್ಞತೆ ಸಲ್ಲಿಸಿತು.

ಸನ್ಮಾನ ಸ್ವೀಕರಿಸಿದ ವೈದ್ಯರು ಯುವವಾಹಿನಿಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿ ಶುಭ ಹಾರೈಸಿದರು.

Related posts

ನೈರುತ್ಯ ಪದವೀಧರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ‌ ಮತ್ತು ಜೆಡಿಎಸ್ ಜಂಟಿ ಅಭ್ಯರ್ಥಿಗಳ ಜಯ

Suddi Udaya

ನಾವೂರು: ಕಿರ್ನಡ್ಕ ಜನತಾ ಕಾಲೋನಿ ಬಳಿ ರಸ್ತೆಗುರುಳಿದ ಅಕೇಶಿಯದ ಮರ

Suddi Udaya

ಗಾಂಧಿ ಜಯಂತಿ ಪ್ರಯುಕ್ತ ಬೆಳ್ತಂಗಡಿ ಡಿ. ಕೆ. ಆರ್ . ಡಿ. ಎಸ್ ಹಾಗೂ ಉದಯ ಮಹಾಸಂಘದ ವತಿಯಿಂದ ಶ್ರಮದಾನ

Suddi Udaya

ಹುಣಸೆಕಟ್ಟೆಯ ರಸ್ತೆ ಬದಿಯ ಒಣ ಹುಲ್ಲಿಗೆ ಬೆಂಕಿ : ಬೆಂಕಿ ನಂದಿಸಿದ
ಅಗ್ನಿಶಾಮಕ ದಳ

Suddi Udaya

ಬೆಳಾಲು ಶ್ರೀ ಧ. ಮಂ.ಪ್ರೌ. ಶಾಲೆಯಲ್ಲಿ ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮ

Suddi Udaya

ಗೃಹಜ್ಯೋತಿ : ಮೆಸ್ಕಾಂ ಶಾಖಾ ಕಚೇರಿ ಹಾಗೂ ಉಪವಿಭಾಗದಲ್ಲೂ ದಾಖಲೀಕರಣಕ್ಕೆ ವ್ಯವಸ್ಥೆ

Suddi Udaya
error: Content is protected !!