24.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಯುವ ಸಂಶೋಧಕ ಪಟ್ರಮೆಯ ದೀಪಕ್ ಎ.ಎಸ್. ಅವರಿಗೆ, ಜೀವ್ರಾನ್ ಫೌಂಡೇಶನ್ ನಿಂದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ನ್ಯಾಷನಲ್ ಇನ್‌ಸ್ಪಿರೇಷನಲ್ ಅವಾರ್ಡ್

ಬೆಳ್ತಂಗಡಿ: ಜೀವ್ರಾನ್ ಫೌಂಡೇಶನ್ ಆನ್‌ಲೈನ್ ಗುರುತಿಸುವಿಕೆ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲ್ಲೂಕಿನ ಪಟ್ರಮೆ ಗ್ರಾಮದ ಯುವ ವಿಜ್ಞಾನಿ, ಸ್ವತಂತ್ರ ನಾವೀನ್ಯಕಾರ ಹಾಗೂ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಹೋಲ್ಡರ್ ದೀಪಕ್ ಎ.ಎಸ್. ಅವರಿಗೆ “ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ನ್ಯಾಷನಲ್ ಇನ್‌ಸ್ಪಿರೇಷನಲ್ ಅವಾರ್ಡ್ – 2026” ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯನ್ನು ವಿಜ್ಞಾನ, ನಾವೀನ್ಯತೆ, ಬಾಹ್ಯಾಕಾಶ ಮತ್ತು ರಕ್ಷಣಾ ಸಂಶೋಧನೆ, ವಿಜ್ಞಾನ ಸಂವಹನ ಹಾಗೂ ರಾಷ್ಟ್ರಸೇವೆಯ ಕ್ಷೇತ್ರಗಳಲ್ಲಿ ಅವರ ವಿಶಿಷ್ಟ ಪ್ರಯತ್ನ ಮತ್ತು ಚಟುವಟಿಕೆ ಪರಿಗಣಿಸಿ ಪ್ರದಾನ ಮಾಡಲಾಗಿದೆ.

ದೀಪಕ್ ಎ.ಎಸ್. ಅವರು ಇತ್ತೀಚೆಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ಇಸ್ರೋ ಮತ್ತು ಡಿಆರ್‌ಡಿಒ ಕುರಿತು 2,050ಕ್ಕೂ ಹೆಚ್ಚು ವೈಜ್ಞಾನಿಕ ಮಾಹಿತಿಗಳನ್ನು ಒಬ್ಬ ವ್ಯಕ್ತಿಯಾಗಿ ಸಂಗ್ರಹಿಸಿ ದಾಖಲಿಸಿದ ಸಾಧನೆಗಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಈ ಸಾಧನೆಯು ಭಾರತದ ವೈಜ್ಞಾನಿಕ ಸಾಧನೆಗಳನ್ನು ಯುವಜನರಿಗೆ ಪರಿಚಯಿಸುವ ಮತ್ತು ವಿಜ್ಞಾನ ಮನೋಭಾವ ಬೆಳೆಸುವ ಅವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಇದರೊಂದಿಗೆ ಅವರು *DRDO Dare to Dream, Innovations for Defence Excellence (iDEX), *ADITI, . ಸೇರಿದಂತೆ ಹಲವು ರಾಷ್ಟ್ರೀಯ ನಾವೀನ್ಯತಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ರಕ್ಷಣಾ ಹಾಗೂ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸ್ವದೇಶಿ ಸಂಶೋಧನೆ ಮತ್ತು ಹೊಸ ಪರಿಕಲ್ಪನೆಗಳ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. Mygov and mera ಯುವ ಭಾರತ ಸ್ವಯಂ ಸೇವಕರಾಗಿ ಕಾರ್ಯ ಚಟುವಟಿಕೆ ಭಾಗವಹಿಸಿದ್ದಾರೆ. ಹಾಗೂ ಯಂಗ್ ಸೈಂಟಿಸ್ಟ್ ಗ್ರೂಪ್ ಮತ್ತು ದೀಪಕ್ thoughts, ಯುವದೀಪ, ಚಟುವಟಿಕೆಯ ಲೇಖಕ ಆಗಿದ್ದರೆ. ಮತ್ತು ಭಾರತ ದೀಪ R&D ಹೊಸ ಉಪಕ್ರಮವನ್ನು ಸ್ಥಾಪಿಸಿದ್ದಾರೆ.

ಈ ಪ್ರಶಸ್ತಿಯ ಕುರಿತು ಪ್ರತಿಕ್ರಿಯಿಸಿದ ದೀಪಕ್ ಎ.ಎಸ್., “ಭಾರತ ರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜೀವನ, ವಿಜ್ಞಾನಪರ ದೃಷ್ಟಿಕೋನ ಮತ್ತು ರಾಷ್ಟ್ರಸೇವೆಯ ಆದರ್ಶಗಳು ನನ್ನ ಜೀವನಕ್ಕೆ ಸದಾ ಸ್ಫೂರ್ತಿಯಾಗಿವೆ. ಈ ಗೌರವ ನನ್ನ ಮೇಲಿನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದ್ದು, ದೇಶದ ರಕ್ಷಣಾ, ಬಾಹ್ಯಾಕಾಶ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅರ್ಥಪೂರ್ಣ ಕೊಡುಗೆ ನೀಡಲು ಇನ್ನಷ್ಟು ಶ್ರಮಿಸುವ ಸಂಕಲ್ಪವನ್ನು ಬಲಪಡಿಸಿದೆ” ಎಂದು ಹೇಳಿದರು.

ಇವರು ಪಟ್ರಮೆಯ ಸದಾಶಿವ ಗೌಡ ಮತ್ತು ಮೋಹಿನಿ ದಂಪತಿಗಳ ಪುತ್ರ.

Related posts

ಎಸ್.ಡಿ.ಎಂ. ರಸಾಯಶಾಸ್ತ್ರ ರಾಷ್ಟ್ರೀಯ ವಿಚಾರ ಸಂಕಿರಣ: ಅನ್ವಯಿಕ ಪ್ರಯೋಗಗಳಿಂದ ಸುಸ್ಥಿರ ಬೆಳವಣಿಗೆ: ಡಾ. ಸತೀಶ್ಚಂದ್ರ ಎಸ್.

Suddi Udaya

ನೇರ ನಗದು ವರ್ಗಾವಣೆ: ಬ್ಯಾಂಕ್ ಖಾತೆ ಸಕ್ರಿಯಗೊಳಿಸಲು ಸೂಚನೆ

Suddi Udaya

ಬೆಳ್ತಂಗಡಿ : ಹಳೆಕೋಟೆಯಲ್ಲಿ ಗೋಲ್ಡನ್ ಬ್ಯೂಟಿ ಪಾರ್ಲರ್ & ಮೇಕಪ್ ಅಕಾಡೆಮಿ (ಫ್ಯಾನ್ಸಿ ಮತ್ತು ಟೈಲರಿಂಗ್) ಶುಭಾರಂಭ

Suddi Udaya

ಎಸ್‌ಎಸ್‌ಎಲ್‌ಸಿ ಪರೀಕ್ಷೆ-2: ವಾಣಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಪ್ತಿ ಗೌಡ ರಾಜ್ಯಕ್ಕೆ ಪ್ರಥಮ

Suddi Udaya

ಗಾಳಿ ಮಳೆಗೆ ಕುಸಿದು ಬಿದ್ದ ಸಂತೆಕಟ್ಟೆ ರಿಕ್ಷಾ ತಂಗುದಾಣದ ಮೇಲ್ಛಾವಣಿ

Suddi Udaya

ಉಜಿರೆಯಲ್ಲಿ ಚುನಾವಣಾ ಪ್ರಚಾರದ ಅಂಗವಾಗಿ ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ್ ಬಿಸ್ವಾಸ್ ಶರ್ಮ ಬೃಹತ್ ರೋಡ್ ಶೋ: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಪರ ಮತ ಪ್ರಚಾರ

Suddi Udaya
error: Content is protected !!