23.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ- ವೇಣೂರು ರಸ್ತೆಯ ಅಲ್ಲಲ್ಲಿ ಹೊಂಡಗಳು ಸೃಷ್ಟಿ, ವಾಹನ ಸವಾರರ ಪರದಾಟ

ಗುರುವಾಯನಕೆರೆ: ಮಳೆ ಪ್ರಮಾಣ ಅಧಿಕಗೊಳ್ಳುತ್ತಿದ್ದಂತೆ ಗುರುವಾಯನಕೆರೆ- ಮೂಡುಬಿದಿರೆ- ಕಾರ್ಕಳ ರಾಜ್ಯ ಹೆದ್ದಾರಿಯ ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡಗಳು ಸೃಷ್ಟಿಯಾಗತೊಡಗಿದ್ದು ವಾಹನ ಸವಾರರು ಪರದಾಡುವಂತಾಗಿದೆ.

ಪ್ರತಿದಿನ ಈ ರಸ್ತೆಯಲ್ಲಿ ಸಾವಿರಾರು ವಾಹನಗಳ ಓಡಾಟವಿದೆ. ಉಡುಪಿ, ಧರ್ಮಸ್ಥಳ ಕಡೆ ಸಂಚರಿಸುವ ಕೆಎಸ್ಸಾರ್ಟಿಸಿ ಬಸ್ ಗಳು ಈ ರಸ್ತೆ ಮೂಲಕ ಓಡಾಟ ನಡೆಸುತ್ತವೆ. ಮೂಡುಬಿದಿರೆ- ಕಾರ್ಕಳ ಕಡೆ ಈ ರಸ್ತೆ ಮೂಲಕ ಅನೇಕ ಖಾಸಗಿ ಸರ್ವಿಸ್ ಬಸ್ ಗಳಲ್ಲದೆ ಪ್ರವಾಸಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತವೆ.

ಈ ರಸ್ತೆಯ ಪಡಂಗಡಿ- ವೇಣೂರು ಪರಿಸರದ ಸುಮಾರು 6 ಕಿ.ಮೀ. ವ್ಯಾಪ್ತಿಯಲ್ಲಿ ಹಲವಾರು ಹೊಂಡಗಳು ಸೃಷ್ಟಿಯಾಗಿದ್ದು ಇವುಗಳ ಗಾತ್ರ ದಿನದಿಂದ ದಿನಕ್ಕೆ ಹೆಚ್ಚುವ ಜತೆ ಹೊಂಡಗಳ ಸಂಖ್ಯೆಯು ಅಧಿಕಗೊಳ್ಳುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಈ ರಸ್ತೆಯಲ್ಲಿ ಹೊಂಡ ತಪ್ಪಿಸುವ ವೇಳೆ ಅಪಘಾತ ಉಂಟಾಗಿ ಜೀವಬಲಿಯು ಸಂಭವಿಸಿದೆ.


ದ್ವಿಚಕ್ರವಾಹನ ಸವಾರರಿಗೆ ಈ ರಸ್ತೆಯಲ್ಲಿರುವ ಹೊಂಡಗಳು ಸಿಂಹಸ್ವಪ್ನವಾಗುತ್ತಿವೆ. ಹೊಂಡಗಳನ್ನು ತಪ್ಪಿಸುವ ಬರದಲ್ಲಿ ಘನ ವಾಹನ ಚಾಲಕರು ವಾಹನಗಳನ್ನು ಅಡ್ಡಾಡಿದ್ದಿ ಚಲಾಯಿಸುತ್ತಿದ್ದು ಇದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಮಳೆ ಸಮಯ ಹೊಂಡಗಳಲ್ಲಿ ತುಂಬುವ ನೀರು ವಾಹನ ಸವಾರರನ್ನು, ಪಾದಚಾರಿಗಳನ್ನು ಹೈರಾಣರಾಗಿಸುತ್ತಿದೆ. ಕೆಲವು ಕಡೆ ರಸ್ತೆ ಬದಿ ಬಾಟಲಿ, ಪ್ಲಾಸ್ಟಿಕ್ ತ್ಯಾಜ್ಯ ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ


ಮಳೆಗಾಲದ ನಿರ್ವಹಣೆ ನಡೆದಿಲ್ಲ
ಈ ರಸ್ತೆಯ ಮಳೆಗಾಲದ ನಿರ್ವಹಣೆ ನಡೆದಿಲ್ಲ. ರಸ್ತೆ ಬದಿಯ ಚರಂಡಿಗಳಲ್ಲಿ ಗಿಡಗಂಟಿಗಳು ಅಗಾಧ ಪ್ರಮಾಣದಲ್ಲಿ ಬೆಳೆದಿದ್ದು ಚರಂಡಿಗಳು ಮುಚ್ಚಿ ಹೋಗಿವೆ. ರಸ್ತೆಯಿಂದ ಚರಂಡಿಗೆ ನೀರು ಬಿಡಿಸಿಕೊಡುವ ವ್ಯವಸ್ಥೆಯೂ ಆಗಿಲ್ಲ ಈ ಕಾರಣದಿಂದ ರಸ್ತೆಯಲ್ಲೇ ಮಳೆ ನೀರು ಹರಿಯುತ್ತಿದ್ದು ಹೊಂಡಗಳು ಸೃಷ್ಟಿಯಾಗಲು ಕಾರಣವಾಗುತ್ತಿದೆ. ಕಳೆದ ವರ್ಷ ನಿರ್ಮಾಣವಾಗಿದ್ದ ಹೊಂಡಗಳಿಗೆ ತೇಪೆ ಕಾಮಗಾರಿ ಮಾತ್ರ ನಡೆದಿದ್ದು ಇದೀಗ ಆ ಸ್ಥಳಗಳಲ್ಲೂ ಹೆಚ್ಚಿನ ಹೊಂಡಗಳು ಕಂಡುಬರುತ್ತಿವೆ.
ಮಳೆಗಾಲ ಆರಂಭವಾಗಿದ್ದರು ಪ್ರಮುಖ ರಾಜ್ಯ ಹೆದ್ದಾರಿಯೊಂದರ ಚರಂಡಿ ದುರಸ್ತಿ ಕಾಮಗಾರಿ ಇದುವರೆಗೂ ನಡೆಯದಿರುವುದು ವಿಪರ್ಯಾಸವಾಗಿದೆ.

Related posts

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ: ಬೆಳ್ತಂಗಡಿ ತಾಲೂಕಿನ ಹಲವು ಕಡೆ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನಲ್ಲಿ ಬೆಳ್ತಂಗಡಿ ತಾ| ಮಟ್ಟದ ಪುಟ್ ಬಾಲ್ ಪಂದ್ಯಾಟ

Suddi Udaya

ಉಜಿರೆ: ಎಸ್ ಡಿ ಎಮ್ ಸಂಸ್ಥೆಗಳ ಅಂತರ್ ಪ್ರೌಢಶಾಲಾ ಬಾಲಕ -ಬಾಲಕಿಯರ ಕ್ರೀಡಾಕೂಟ

Suddi Udaya

ಸೌಜನ್ಯ ಕೊಲೆ ಪ್ರಕರಣ : ಮರು ತನಿಖೆಗೆ ಒತ್ತಾಯಿಸಿ ಆ.27: ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಗಳ ಬಿಜೆಪಿ ಶಾಸಕರುಗಳಿಂದ ಬೆಳ್ತಂಗಡಿಯ ಮಿನಿ ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ

Suddi Udaya

ಕನ್ಯಾಡಿ ಶ್ರೀ ರಾಮ ಕ್ಷೇತ್ರದ ನೂತನ ಟ್ರಸ್ಟಿಯಾಗಿ ಬಿ ಪೀತಾಂಬರ ಹೆರಾಜೆ

Suddi Udaya

ಬಜಿರೆ: ಸಾರ್ವಜನಿಕ ಶ್ರೀ ಶನೇಶ್ವರ ಪೂಜೆ-ಧಾರ್ಮಿಕ ಸಭೆ

Suddi Udaya
error: Content is protected !!