September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ಓಡಿಲ್ನಾಳ ಸ. ಉ. ಪ್ರಾ. ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ

ಓಡಿಲ್ನಾಳ : ಇಲ್ಲಿಯ ಸ. ಉ. ಪ್ರಾ. ಶಾಲೆಯಲ್ಲಿ 2025 -26 ನೇ ಸಾಲಿನ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಡಿ 14 ರoದು ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಸಂತೋಷ್ ಶೆಟ್ಟಿ ಮದ್ದಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ನಾವೂರು ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ರಾಜೇಂದ್ರ ಭಟ್ ಉದ್ಘಾಟಿಸಿ, ತಾನು ಈ ಶಾಲೆಯ ಹಿರಿಯ ವಿದ್ಯಾರ್ಥಿ ಎಂಬ ಹೆಮ್ಮೆಯನ್ನು ವ್ಯಕ್ತಪಡಿಸುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಭಾರತೀ ಶೆಟ್ಟಿ , ಪಂಚಾಯತ್ ಪ್ರತಿನಿಧಿ ಶ್ರೀಮತಿ ಆನಂದಿ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶ್ರೀಮತಿ ನಸೀಮ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅರುಣ್ ಸುಮಿತ್, ಶಾಲಾ ದೈಹಿಕ ಶಿಕ್ಷಕ ಸರ್ಕಾರಿ ನೌಕರರ ಸಂಘ ಬೆಳ್ತಂಗಡಿಯ ಅಧ್ಯಕ್ಷ ಜಯರಾಜ್ ಜೈನ್, ಉಳ್ಳಾಲ ಕೆ ಪಾಂಡಿರಾಜ್ ನರ್ಸಿಂಗ್ ಕಾಲೇಜ್ ಉಪ ಪ್ರಾಂಶುಪಾಲರು ಶ್ರೀಮತಿ ಪದ್ಮಾವತಿ , ಪುಂಜಾಲಕಟ್ಟೆ ಪ್ರೌಢಶಾಲಾ ಶಿಕ್ಷಕ ಕೆ ಧರಣೇಂದ್ರ ಜೈನ್ , ಮಿತ್ತ ಬಾಗಿಲು ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಗೋಪಾಲ್ , ಪುಂಜಾಲಕಟ್ಟೆ ಕ್ಲಸ್ಟರ್ ಸಿ ಆರ್ ಪಿ ಚೇತನ, ನಿವೃತ್ತ ಮುಖ್ಯ ಶಿಕ್ಷಕಿ ಫೆಲ್ಸಿ ಫಾತಿಮಾ ಮೋರಸ್ , ಮುಖ್ಯ ಗುರುಗಳು ಉಷಾ ಪಿ, ಎಸ್ ಡಿ ಎಮ್ ಸಿ ನಿಕಟಪೂರ್ವ ಅಧ್ಯಕ್ಷ ರಾಜಪ್ರಕಾಶ್ ಶೆಟ್ಟಿ ಪಡ್ಡೆಲು, ವಿದ್ಯಾರ್ಥಿ ನಾಯಕ ಕೆ ಎನ್ ನಂದನ್ ಶರ್ಮ ಉಪಸ್ಥಿತರಿದ್ದರು.

ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.
ವರ್ಗಾವಣೆಗೊಂಡ ಶಿಕ್ಷಕಿ ಶ್ರೀಮತಿ ಸುಜಾತ, ಎಸ್ ಡಿ ಎಂ ಸಿ ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ಪ್ರಮೀಳ ಶೆಟ್ಟಿ ಇವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ , ಶ್ರೀಮತಿ ಸುಮತಿ ಬಿ.ಜೆ ಗೌರವ ಶಿಕ್ಷಕಿ ಶ್ರೀಮತಿ ಲಕ್ಷ್ಮಿ ನಿವೃತ್ತ ಆಶಾ ಕಾರ್ಯಕರ್ತೆ, ಮಾಸ್ಟರ್ ಅಜಯ್ ಕೆ (ಎನ್ ಎo ಎo ಎಸ್ ಪರೀಕ್ಷಾ ಉತ್ತೀರ್ಣ ) ಮಾಸ್ಟರ್ ಮೊಹಮ್ಮದ್ ಬಿಲಾಲ್ ( ಕಬಡ್ಡಿ ಕ್ರೀಡಾಪಟು )ಇವರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.

ವರ್ಗಾವಣೆಗೊಂಡು ನಮ್ಮ ಶಾಲೆಯಲ್ಲಿ ಕರ್ತವ್ಯಕ್ಕೆ ಸೇರಿದ ಜಯರಾಜ್ ಜೈನ್ ಇವರನ್ನು ವೇದಿಕೆಯಲ್ಲಿ ಸ್ವಾಗತಿಸಲಾಯಿತು. ನoತರ ಏರoಗಲ್ಲು ಓಡಿಲ್ನಾಳ ಅoಗನವಾಡಿ ಪುಟಾಣಿಗಳಿಗೆ ಶಾಲಾ ವಿದ್ಯಾರ್ಥಿಗಳಿಗೆ ಸಾoಸ್ಕ್ರತಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರೀಡಾ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಿತು. ನoತರ ವಿದ್ಯಾರ್ಥಿಗಳ ಸಾoಸ್ಕ್ರತಿಕ ನೃತ್ಯ ವೈಭವ ಜರಗಿತು. ಶೌಫ ಮರಿಯo‌‌ ಮತ್ತು ಬಳಗದವರು ಪ್ರಾರ್ಥನೆ ಗೈದರು. ಶಿಕ್ಷಕಿ ವಿಲ್ಮೆಟ್ ಸೆರಾವೊ ಸ್ವಾಗತಿಸಿ, ಮುಖ್ಯ ಶಿಕ್ಷಕರಾದ ಉಷಾ ಪಿ ವರದಿ ಓದಿದರು. ಶಾರದಾ ಮಣಿ ಮತ್ತು ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು‌. ಶಿಕ್ಷಕ ಜಯಾರಾಜ್ ಜೈನ್ ಧನ್ಯವಾದ ನೀಡಿದರು.

Related posts

ಮಾ14-15 ಎಸ್.ಡಿ.ಎಂ ಝೇಂಕಾರ ಉತ್ಸವ: ಖ್ಯಾತ ನಟ ರಮೇಶ್ ಅರವಿಂದ್ ವಿಶೇಷ ಆಕರ್ಷಣೆ

Suddi Udaya

ತುಂಬೆತ್ತಡ್ಕ ರಾಣೆಯಾರ್ ಸಮಾಜ ಸೇವಾ ಸಂಘದಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

Suddi Udaya

ವೇಣೂರು: ಬಜಿರೆ ಬತ್ತಾರುನಲ್ಲಿ ‘ಹಿಂದೂ ರಾಷ್ಟ್ರ ಜಾಗೃತಿ ಸಭೆ’ ಸಂಪನ್ನ

Suddi Udaya

ಫೆ.7-10: ಶ್ರೀ ಕ್ಷೇತ್ರ ಒಟ್ಲದಲ್ಲಿ ವರ್ಷಾವಧಿ ಜಾತ್ರೋತ್ಸವ

Suddi Udaya

ಶ್ರೀ. ಕ್ಷೆ. ಧ. ಗ್ರಾ ಯೋಜನೆಯ ಬಜಿರೆ ಒಕ್ಕೂಟದ ಪದಗ್ರಹಣ ಹಾಗೂ 19ನೇ ವರ್ಷದ ಶನೇಶ್ವರ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya

ಶಾಸಕ ಹರೀಶ್ ಪೂಂಜ ಪ್ರಕರಣ: ವಿಚಾರಣೆಗೆ ವಿನಾಯಿತಿ ನೀಡಿದ ನ್ಯಾಯಾಲಯ

Suddi Udaya
error: Content is protected !!